ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಯಡಿಯೂರಪ್ಪಗಷ್ಟೇ ಸೀಮಿತವಾದುದಲ್ಲ

By Super
|
Google Oneindia Kannada News

ಗುಲ್ಬರ್ಗಾ, ಏ.22: ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಯಡಿಯೂರಪ್ಪ ಬಗ್ಗೆ ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಟೀಕೆ ಮಾಡುತ್ತಿರುವುದು ತರವಲ್ಲ. ಇದನ್ನು ಆ ದೇವರು ಕೂಡ ಕ್ಷಮಿಸಲಾರ ಎಂದು ಮಾಜಿ ಬಿಜೆಪಿ ಸಚಿವೆ ಶೋಭಾ ಕರಂದ್ಲಾಜೆ ಕೆಂಡವಾಗಿದ್ದಾರೆ.

'ಯಡಿಯೂರಪ್ಪನವರು ಸ್ವಯಂಕೃತಾಪರಾಧದಿಂದ ಪಕ್ಷ ತೊರೆದಿದ್ದು, ಕೆಜೆಪಿ ನೇತೃತ್ವ ವಹಿಸಿಕೊಳ್ಳುವ ಮೂಲಕ ತಮ್ಮ ಬೆನ್ನಿಗೆ ತಾವೇ ಚೂರಿ ಹಾಕಿಕೊಂಡಿದ್ದಾರೆ' ಎಂಬ ಧಾಟಿಯಲ್ಲಿ ಮಾತನಾಡಿದ್ದ ಜಗದೀಶ್ ಶೆಟ್ಟರ್ ಬಗ್ಗೆ ಕಿಡಿಕಿಡಿಯಾಗಿರುವ ಕೆಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು 'ಶೆಟ್ಟರ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ' ಎಂದು ಎಚ್ಚರಿಸಿದ್ದಾರೆ.

Corruption not limited to only BS Yeddyurappa - Shobha Karandlaje

ಭ್ರಷ್ಟಾಚಾರ ಯಡಿಯೂರಪ್ಪಗಷ್ಟೇ ಸೀಮಿತವಾದುದಲ್ಲ:
ಇದೇ ವೇಳೆ, ಭ್ರಷ್ಟಾಚಾರ ಎಂಬುದು ಕೇವಲ ಒಬ್ಬ ವ್ಯಕ್ತಿಗೆ, ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಯಡಿಯೂರಪ್ಪನವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶೋಭಾ ಮಾಮರ್ಮಿಕವಾಗಿ ಹೇಳಿದರು.

ಗುಲ್ಬರ್ಗಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಬಿಜೆಪಿಯಲ್ಲಿದ್ದಾಗ ಯಾರು ಅವರ ಬೆನ್ನಿಗೆ ಚೂರಿ ಹಾಕಿದರು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಯಡಿಯೂರಪ್ಪನವರ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿ ಪಟ್ಟಕ್ಕೇರಿರುವ ಜಗದೀಶ್ ಶೆಟ್ಟರ್ ಇಂದು ಅದೆಲ್ಲವನ್ನೂ ಮರೆತು ಯಡಿಯೂರಪ್ಪರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಶೋಭಾ ಹರಿಹಾಯ್ದರು.

ಶೆಟ್ಟರ್ ಈ ಜನ್ಮದಲ್ಲಿ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಆದರೆ ಯಡಿಯೂರಪ್ಪನವರು ಹಠ, ಛಲತೊಟ್ಟು ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ತಮ್ಮನ್ನು ಬೆಳೆಸಿದ ನಾಯಕನ ಬಗ್ಗೆ ಕನಿಷ್ಠ ಮಟ್ಟದ ಕೃತಘ್ನತೆ ಹೊಂದಿರಬೇಕು. ಅದನ್ನು ಮರೆತರೆ ಅವರು ಮುನುಷ್ಯರೇ ಅಲ್ಲ ಎಂದು ಶೆಟ್ಟರರನ್ನು ಶೋಭಾ ತರಾಟೆಗೆ ತೆಗೆದುಕೊಂಡರು.

ಯಡಿಯೂರಪ್ಪರನ್ನು ಬಿಜೆಪಿಯಿಂದ ಹೊರ ಹಾಕಲು ಪಿತೂರಿ ಮಾಡುತ್ತಿದ್ದವರು ಇದಕ್ಕಾಗಿ ಏನೆಲ್ಲಾ ಪ್ರಯತ್ನ ಮಾಡಿದರು ಎಂಬುದು ಮುಂದಿನ ದಿನಗಳಲ್ಲಿ ಬಯಲಾಗಲಿದೆ ಎಂದು ಹೇಳಿದ ಶೋಭಾ ಕರಂದ್ಲಾಜೆ, ಇದೆಲ್ಲವನ್ನು ಗಮನಿಸುತ್ತಿರುವ ರಾಜ್ಯದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

English summary
Karnataka Assembly elections- Corruption not limited to only BS Yeddyurappa said Shobha Karandlaje in Gulbarga Yesterday (April 21).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X