ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಬಿ, ಶೆಟ್ಟರನ್ನು ಸಿಎಂ ಪಟ್ಟದಿಂದ ಇಳಿಸುವುದಿಲ್ಲ!

By Srinath
|
Google Oneindia Kannada News

belive-it-shettar-will-be-cm-for-5-years-if-bjp-wins
ಚಿಕ್ಕೋಡಿ, ಏ.22: ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ ಸಿಂಗ್ ಅವರಿಗೇ ಕಳೆದೈದು ವರ್ಷಗಳಲ್ಲಿ ಕರ್ನಾಟಕದ ಜನತೆಗೆ ಮೂವರು ಮುಖ್ಯಮಂತ್ರಿಗಳನ್ನು ಕರುಣಿಸಿದ್ದಕ್ಕೆ ಬೇಸರವಾದಂತಿದೆ. ಹಾಗಾಗಿ ಮುಂದಿನ ಐದು ವರ್ಷಗಳ ಬಗ್ಗೆ ಮಾತನಾಡಿರುವ ರಾಜನಾಥ್, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದರೆ ಹಾಲಿ ಸಿಂಎ ಜಗದೀಶ್ ಶೆಟ್ಟರ್ ಅವರನ್ನು ಯಾವುದೇ/ಯಾರದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಿಲ್ಲ ಎಂದು ರಾಜ್ಯದ ಅಖಂಡ 6 ಕೋಟಿ ಜನಕ್ಕೆ ವಾಗ್ದಾನ ನೀಡಿದ್ದಾರೆ.

ವಾಸ್ತವವಾಗಿ ಯಾರನ್ನೋ ಮೆಚ್ಚಿಸಲು ಹಾಗೆ ಮೇಲಿಂದ ಮೇಲೆ ಮುಖ್ಯಮಂತ್ರಿಗಳನ್ನು ಬದಲಾಯಿಸುವುದು ಬಿಜೆಪಿಗೆ ಬೇಕಿರಲಿಲ್ಲ. ಆದರೆ ಪರಿಸ್ಥಿತಿ ಅನಿವಾರ್ಯವಾಗಿತ್ತು. ಬೇರೆ ಮಾರ್ಗವೇ ಇರಲಿಲ್ಲ ಎಂದು ರಾಜ್ಯದ ಬಿಜೆಪಿಯಲ್ಲಿ ಭಿನ್ನಮತಕ್ಕೆ ರಾಜನಾಥ್ ಸಮಜಾಯಿಷಿ ನೀಡಿದರು. .

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿನ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಭಾನುವಾರ ಪ್ರಚಾರ ನಡೆಸಿದ ಸಂದರ್ಭದಲ್ಲಿ ಅವರು ಈ ಸಮರ್ಥನೆ ನೀಡಿದರು. ಕರ್ನಾಟಕ ಬಿಜೆಪಿಯನ್ನು ಜನತೆ ಮತ್ತೊಮ್ಮೆ ಆಶೀರ್ವದಿಸಿದರೆ ಮುಖ್ಯಮಂತ್ರಿಯಾಗಿ ಶೆಟ್ಟರ್ ಒಬ್ಬರೇ 5 ವರ್ಷಗಳವರೆಗೂ ಇರುವುದು ನಿಶ್ಚಿತ ಎಂದು ಭರವಸೆ ನೀಡಿದರು.

ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಬೇಕೆಂದು ಬಿಜೆಪಿ ಬಯಸಿರಲಿಲ್ಲ. ಅವರ ಮೇಲೆ ಆರೋಪ ಹೊರಿಸಿದ್ದು ಪಕ್ಷವಲ್ಲ. ಆದರೆ ಲೋಕಾಯುಕ್ತರು ಆರೋಪ ಹೊರಿಸಿದಾಗ ಪದತ್ಯಾಗ ಅನಿವಾರ್ಯವಾಯಿತು. ಆರೋಪದಿಂದ ಮುಕ್ತರಾದ ಮೇಲೆ ಮತ್ತೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಬಿಜೆಪಿ ಸಿದ್ಧವಿತ್ತು. ಯಡಿಯೂರಪ್ಪ ಪಕ್ಷ ಬಿಟ್ಟದ್ದು ತಪ್ಪು ನಿರ್ಧಾರ ಎಂದು ಹೇಳಿದರು.

ಹವಾಲಾ ಪ್ರಕರಣದಲ್ಲಿ ಆಡ್ವಾಣಿ ವಿರುದ್ಧ ಆರೋಪಗಳು ಕೇಳಿ ಬಂದಾಗ ತಕ್ಷಣ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಆರೋಪ ಮುಕ್ತರಾಗುವವರೆಗೂ ಸಂಸತ್ತಿನ ಮೆಟ್ಟಿಲು ಕೂಡ ತುಳಿಯಲಿಲ್ಲ ಎಂದು ಹೇಳಿದ ರಾಜನಾಥ ಸಿಂಗ್, ಅಗಸನೊಬ್ಬ ಬೆರಳು ಮಾಡಿ ಆರೋಪ ಹೊರಿಸಿದಾಗ ಪತ್ನಿ ಸೀತಾದೇವಿಯನ್ನೇ ಕಾಡಿಗಟ್ಟಿದ ಶ್ರೀರಾಮನ ಪಕ್ಷ ಬಿಜೆಪಿ ಎಂದರು.

ಯಡಿಯೂರಪ್ಪ ಕೆಲಸ ಮೆಲಕುಹಾಕಿದ ರಾಜನಾಥ್:
ಸಮರ್ಥ ಸರಕಾರ 5 ವರ್ಷಗಳ ಅವಧಿಯಲ್ಲಿ ಸಮರ್ಥ ಸರಕಾರ ನೀಡಿದ್ದೇವೆ. ಯಡಿಯೂರಪ್ಪ ನೇತತ್ವದಲ್ಲಿ ರಾಜ್ಯ ಸರಕಾರ ರೈತರಿಗೆ ಸಾಕಷ್ಟು ಕೆಲಸ ಮಾಡಿದೆ. ಜಗದೀಶ ಶೆಟ್ಟರ್ ಸಹ ಬಿಜೆಪಿ ಅಭಿವದ್ಧಿಪರ ಯೋಜನೆಗಳ್ನು ಮುಂದುವರಿಸಿಕೊಂಡು ಹೊರಟಿದ್ದಾರೆ, ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಿದ ಗುಜರಾತ್, ಛತ್ತೀಸಗಡ ಮತ್ತು ಕರ್ನಾಟಕ ಸರಕಾರಗಳು ದೇಶಕ್ಕೆಲ್ಲ ಮಾದರಿ ಎಂದು ಸಿಂಗ್ ಪ್ರಶಂಸಿಸಿದರು.

ಸ್ವಾತಂತ್ರ್ಯದ ನಂತರ 65 ವರ್ಷಗಳಲ್ಲಿ 54 ವರ್ಷಗಳಷ್ಟು ದೀರ್ಘ ಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೂ ದೇಶದಲ್ಲಿ ಬಡತನ, ನಿರುದ್ಯೋಗ ದೂರವಾಗಿಲ್ಲ. ದೇಶದ ಮೂಲ ಸಮಸ್ಯೆಗಳನ್ನು ಹೋಗಲಾಡಿಸಲು, ಅಭಿವದ್ಧಿಚಿುತ್ತ ದೇಶವನ್ನು ಮುನ್ನಡೆಸಲು 54 ವರ್ಷದ ಆಡಳಿತ ಕಡಿಮೆ ಅವಧಿದೇನಲ್ಲ ಎಂದರು.

English summary
Karnataka assembly election canvass- Belive me Jagadish Shettar will be CM for 5 years if BJP comes to power said Rajnath Singh in Chikkodi yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X