ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ: ನಾಪತ್ತೆಯಾದ ವಿದ್ಯಾರ್ಥಿ ಶವವಾಗಿ ಪತ್ತೆ

By Mahesh
|
Google Oneindia Kannada News

Government College Stuent murder Sringeri
ಶೃಂಗೇರಿ, ಏ.19 : ಇಲ್ಲಿನ ಸರ್ಕಾರಿ ಫ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ. ಹಾಗೂ ಹೀಗೂ ಆತನ ಮೊಬೈಲ್ ಕರೆ ಸಂಪರ್ಕ ಸಿಕ್ಕರೂ ಆತ ಮಾತ್ರ ಶವವಾಗಿ ಸಿಕ್ಕಿದ ಘಟನೆ ನಡೆದಿದೆ.

ಇಲ್ಲಿನ ಕಾಂಚಿನಗರದ ನಿವಾಸಿಯಾಗಿದ್ದ ಹರ್ಷರಾಜ್ ಅಲಿಯಾಸ್ ಮುರುಗೇಶ್ ಎಂಬ 20 ವರ್ಷದ ವಿದ್ಯಾರ್ಥಿ ನಾಪತ್ತೆಯಾದ ಬಗ್ಗೆ ಮಂಜೇಶ್ ಎಂಬುವವರು ದೂರು ನೀಡಿದ್ದರು. ಕಳೆದ ಎರಡು ದಿನಗಳ ಹಿಂದೆ ನನ್ನ ಭಾವನ ಮಗ ಹರ್ಷರಾಜ್ ಸಂಜೆ ವೇಳೆ ಪೇಟೆಗೆ ಹೋಗಿ ಬರುತ್ತೇನೆ ಎಂದು ಹೋದವನು ಇನ್ನೂ ಬಂದಿಲ್ಲ. ರಾತ್ರಿ ಪೇಟೆ ಬೀದಿಯಲ್ಲಿ ಹುಡುಕಿದೆವು. ಆತನ ಗೆಳೆಯರಿಗೂ ಸುಳಿವು ಸಿಕ್ಕಿಲ್ಲ. ಮೊಬೈಲ್ ಫೋನ್ ವರ್ಕ್ ಆಗ್ತಾ ಇಲ್ಲ ಎಂದು ದೂರಿನಲ್ಲಿ ಹೇಳಿದ್ದರು.

ಮೊಬೈಲ್ ನಂಬರ್ 9845****74 ಪಡೆದ ಪೊಲೀಸರು ಲಾಸ್ಟ್ ಕಾಲ್ ಬಂದಿದ್ದು ಯಾವಾಗ ಎಂದು ಪರಿಶೀಲಿಸಿದ್ದಾರೆ. ನಾಪತ್ತೆಯಾದ ದಿನ ಹರ್ಷ ಮೊಬೈಲ್ ನಿಂದ 8 ಗಂಟೆ ಸುಮಾರಿಗೆ ಮನೆಗೆ ಕರೆ ಮಾಡಿದ್ದ. ಆದರೆ, ಗಂಟೆ 11 ದಾಟಿದರೂ ಮನೆಗೆ ಬರಲಿಲ್ಲ. ಗಾಬರಿಗೊಂಡು ಮತ್ತೆ ಮತ್ತೆ ಫೋನ್ ಗೆ ಕರೆ ಮಾಡಿದೆವು. ಸುಮಾರು 12 ಗಂಟೆ ಹೊತ್ತಿಗೆ ಯಾರೋ ಅನಾಮಿಕರೊಬ್ಬರು ಫೋನ್ ಕಾಲ್ ರಿಸೀವ್ ಮಾಡಿದರು.

ಹರ್ಷ ನನ್ನ ಜೊತೆಯಲ್ಲಿದ್ದಾನೆ. ಮೈಸೂರಿನಲ್ಲಿದ್ದೇವೆ.ಬೆಳಗ್ಗೆ ಬರುತ್ತೇವೆ.ಆತ ನಿದ್ರೆ ಮಾಡುತ್ತಿದ್ದಾನೆ ಎಂದು ತಿಳಿಸಿ ಮೊಬೈಲ್ ನಿಷ್ಕ್ರಿಯಗೊಳಿಸಿದರು. ಹರ್ಷ ಏಕೆ ಮೈಸೂರಿಗೆ ಹೋದ ಆತನ ಮೊಬೈಲ್ ಕಳ್ಳತನವಾಗಿದೆಯೇ? ಅಥವಾ ಯಾರಾದರೂ ಅಪಹರಿಸಿದ್ದಾರೆಯೇ? ಎಂಬ ಪ್ರಶ್ನೆ ನಮ್ಮನ್ನು ಕಾಡಿತ್ತು. ಆದರೆ, ಮರುದಿನ ಮತ್ತೆ ಯಾವುದೇ ಕರೆ ಬರಲಿಲ್ಲ. ಬದಲಿಗೆ ಬಂದಿದ್ದು ಸಾವಿನ ಸುದ್ದಿ

ಬೆಳಗ್ಗೆ 07.30 ರ ಸುಮಾರಿಗೆ ಪಟ್ಟಣ ಪಂಚಾಯ್ತಿಯವರು ಈತ ಗಾಂಧಿ ರಾಜ್ ಬಿಲ್ಡಿಂಗ್ ಎದುರು ಜಾಗದಲ್ಲಿ ಅಂದರೆ ಬಿ.ಆರ್.ವಿ ಶಾಲೆಯ ಮಾರ್ಗದಲ್ಲಿ ಬಿದ್ದಿರುವುದಾಗಿ ಹೇಳಿದರು. ಅಲ್ಲಿಗೆ ಹೋಗಿ ನೋಡಿದರೆ ಹರ್ಷ ಶವವಾಗಿ ಮಲಗಿದ್ದ.

ಕಾಲೇಜಿನಲ್ಲಿ ಒಳ್ಳೆ ಹುಡುಗ ಎಂಬ ಹೆಸರಿತ್ತು. ಪ್ರೀತಿ ಪ್ರೇಮದ ಜಾಲಕ್ಕೆ ಸಿಲುಕಿರಲಿಲ್ಲ. ಮನೆ ಕಡೆ ಕೂಡಾ ಯಾವುದೇ ತೊಂದರೆ ಇರಲಿಲ್ಲ. ಯಾರೊಟ್ಟಿಗೂ ದ್ವೇಷ ಕಟ್ಟಿಕೊಂಡಿರಲಿಲ್ಲ. ಚುನಾವಣೆ ಸಂದರ್ಭವಾದ್ದರಿಂದ ಯಾವುದೋ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಎಂದು ದೂರಿನಲ್ಲಿ ಮಂಜೇಶ್ ಹೇಳಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವದ ಮೈ ಮೇಲೆ ರಕ್ತದ ಕಲೆಗಳು ಕಂಡುಬಂದಿದ್ದು, ಆತನ ಮೇಲೆ ಯಾರೋ ಹಲ್ಲೆ ಮಾಡಿರುವುದು ಕಂಡುಬಂದಿದೆ ಪ್ರಕರಣ ದಾಖಲಿಸಿಕೊಂಡು [ ಶೃಂಗೇರಿ ಪೊಲೀಸ್ ಠಾಣೆ ಮೊ.ಸಂ- 69/2013 ಕಲಂ-302 ಐಪಿಸಿ] ತನಿಖೆ ಮುಂದುವರೆಸಿರುತ್ತಾರೆ.

English summary
Government College Stuent Harshraj alias Murugesh was killed by miscreants in Sringeri. Harsha's Mobile phone was attended by some unknown person and Sringeri City police booked the case and tracing the number to catch the culprit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X