ಗಿರಿನಗರ : ಪತ್ನಿಯನ್ನು ಬಡಿದು ಕೊಂದ ವೀಣಾವಾದಕ

B.M.Candrashekaraiah
ಬೆಂಗಳೂರು, ಏ. 18 : ಗಿರಿನಗರದ ಸಾಯಿ ಮಂದಿರ ಬಳಿಯ ನಿವಾಸಿ ವೀಣಾವಾದಕ ಬಿ.ಎಂ.ಚಂದ್ರಶೇಖರಯ್ಯ ಬುಧವಾರ ತಡರಾತ್ರಿ ಜೋಡಿ ಕೊಲೆ ಮಾಡಿದ್ದಾರೆ. ಪತ್ನಿ ಪ್ರೀತಿ ಮತ್ತು ದೊಡ್ಡಪ್ಪನ ಮಗಳನ್ನು ಕೊಲೆ ಮಾಡಿರುವ ಅವರು ನಂತರ ಗಿರಿನಗರ ಪೊಲೀಸ್ ಠಾಣೆಗೆ ಶರಣಾಗರಾಗಿದ್ದಾರೆ.

ಬುಧವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಹೆಂಡತಿಯೊಂದಿಗೆ ಜಗಳ ಪ್ರಾರಂಭಿಸಿದ ಚಂದ್ರಶೇಖರಯ್ಯ ಪತ್ನಿ ಪ್ರೀತಿ (40) ದೊಡ್ಡಪ್ಪನ ಮಗಳು ವೇದ ಅವರನ್ನು ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಗಿರಿನಗರ ಪೊಲೀಸರಿಗೆ ಶರಣಾಗಿದ್ದಾರೆ.

ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ವಿಚ್ಚೇದಿತ ಪ್ರೀತಿಯನ್ನು ಚಂದ್ರಶೇಖರಯ್ಯ ವಿವಾಹವಾಗಿದ್ದರು. ಚಂದ್ರಶೇಖರಯ್ಯ ಅವರಿಗೆ ಸಹ ಪ್ರೀತಿ ಎರಡನೇ ಸಹ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದರು. ಇವರಿಗೆ ಹತ್ತು ತಿಂಗಳ ಒಂದು ಹೆಣ್ಣುಮಗುವಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪ್ರೀತಿಗೆ ಚಂದ್ರಶೇಖರಯ್ಯ ಯಾವಾಗಲೂ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಗಂಡನ ಕಾಟದಿಂದ ಬೇಸತ್ತಿದ್ದ ಪ್ರೀತಿ ಗಿರಿನಗರ ಠಾಣೆಯಲ್ಲಿ ಗಂಡನ ಮೇಲೆ, ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು. ಇದನ್ನು ಅರಿತಿದ್ದ ಪತಿ ಸೇಡಿಗಾಗಿ ಪತ್ನಿಯೊಂದಿಗೆ ಜಗಳವಾಡಿ ಆಕೆಯನ್ನು ಕೊಲೆ ಮಾಡಿದ್ದಾನೆ. ಕೊಲೆಯಾಗಿದ್ದು ಕಂಡು ಓಡಲು ಯತ್ನಿಸಿದ ತನ್ನ ದೊಡ್ಡಪ್ಪನ ಮಗಳು ವೇದಾಳನ್ನು ಚಂದ್ರಶೇಖರಯ್ಯ ಕೊಲೆ ಮಾಡಿದ್ದಾನೆ.

ಯಾವುದೇ ಕೆಲಸ ಮಾಡದೇ ಮನೆಯ ಜಬಾಬ್ದಾರಿಯನ್ನು ನಿಭಾಯಿಸದೇ ಕಾಲ ಕಳೆಯುತ್ತಿದ್ದ ಚಂದ್ರಶೇಖರಯ್ಯ ಜೊತೆ ಪತ್ನಿ ಪ್ರೀತಿ ಯಾವಾಗಲೂ ಜಗಳವಾಡುತ್ತಿದ್ದಳು. ಹಣಕ್ಕಾಗಿ ಪೀಡಿಸಿ ಪತ್ನಿಗೆ ಚಂದ್ರಶೇಖರಯ್ಯ ಹೊಡೆಯುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಕೊಲೆ ಮಾಡಿದ ನಂತರ ಚಂದ್ರಶೇಖರಯ್ಯ ಗಿರಿನಗರ ಪೊಲೀಸರಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+