ಮಾಜಿ ರಾಜ್ಯಪಾಲೆ ರಮಾದೇವಿ ವಿಧಿವಶ

ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಮಾದೇವಿ ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೂಲತಃ ಆಂಧ್ರ ಪ್ರದೇಶದವರಾದ ರಮಾದೇವಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಏಕೈಕ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಹಿಮಾಚಲ ಪ್ರದೇಶ ಕರ್ನಾಟಕ ರಾಜ್ಯಗಳ ರಾಜ್ಯಪಾಲರಾಗಿ ಅಪಾರ ರಾಜಕೀಯ ಅನುಭವ ಪಡೆದಿದ್ದ ರಮಾದೇವಿ ಅವರು. ಡಿಸೆಂಬರ್ 1999ರಿಂದ 2002 ವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿ, ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು ಎಂಬ ಕೀರ್ತಿಗೆ ಭಾಜನರಾಗಿದ್ದರು.
ವಕೀಲೆಯಾಗಿದ್ದ ರಮಾದೇವಿ ಅಪಾರವಾಗ ಕಾನೂನು ತಿಳಿವಳಿಕೆ ಹೊಂದಿದ್ದರು. ಮಹಿಳೆಯರಿಗೆ ಕಾನೂನಿನಲ್ಲಿ ಸಮಾನ ಗೌರವ ದೊರೆಯಬೇಕು. ಸಾಮಾನ್ಯ ಜನರಿಗೂ ನ್ಯಾಯ ದೊರೆಯಬೇಕು ಎಂದು ರಮಾದೇವಿ ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಗಳನ್ನು ಏರ್ಪಡಿಸಿದ್ದರು. ಸಾಮಾನ್ಯ ಜನರಿಗೂ ಸಂವಿಧಾನದ ಬಗ್ಗೆ ತಿಳಿಯಬೇಕು ಎಂದು ಹಲವಾರು ಸಂವಾದ ಕಾರ್ಯಕ್ರಮಗಳನ್ನು ನಡೆಸಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications