ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸ್ಟಾರ್ ಪ್ರಚಾರಕರಲ್ಲಿ ಮೋದಿ ಹೆಸರಿಲ್ಲ

|
Google Oneindia Kannada News

Narendra Modi
ಬೆಂಗಳೂರು, ಏ.16: ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಬಿಜೆಪಿ ರಾಷ್ಟ್ರೀಯ ವೇಳಾಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಬಿಜೆಪಿ ಸೇರಿಸಿಲ್ಲ. ಇದರಿಂದಾಗಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಪ್ರಚಾರ ನಡೆಸುವುದು ಅನುಮಾನವಾಗಿದೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಕರ್ನಾಟಕದಲ್ಲಿ ಪಕ್ಷದ ಪರ ಪ್ರಚಾರ ಕೈಗೊಳ್ಳುವ ನಾಯಕರ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಆದರೆ, ಮೋದಿ ಕರ್ನಾಟಕದಲ್ಲಿ ಪ್ರಚಾರ ನಡೆಸುವ ಕುರಿತು ಪ್ರತಿಕ್ರಿಯಿಸಲು ಅವರು ನಿಕಾರಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ, ವೆಂಕಯ್ಯ ನಾಯ್ಡು ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ ಜೋಶಿ ತಿಳಿಸಿದರು.

ರಾಜನಾಥ್ ಸಿಂಗ್ ಬೆಳಗಾವಿಯಲ್ಲಿ, ಸುಷ್ಮಾ ಸ್ವರಾಜ್ ಬೆಂಗಳೂರಿನಲ್ಲಿ, ಎಲ್.ಕೆ.ಅಡ್ವಾಣಿ ಮಂಗಳೂರಿನಲ್ಲಿ ಹಾಗೂ ವೆಂಕಯ್ಯ ನಾಯ್ಡು ರಾಯಚೂರು ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಹಿಂದೇಟು : ಪ್ರಧಾನಿ ಪಟ್ಟದ ಮೇಲೆ ಕಣ್ಣೀಟ್ಟಿರುವ ನರೇಂದ್ರ ಮೋದಿ, ಕರ್ನಾಟಕ ಬಿಜೆಪಿಯ ಹಗರಣಗಳು, ಭ್ರಷ್ಟಾಚಾರ ಮುಂತಾದವ ಪ್ರಕರಣದಿಂದಾಗಿ ಪ್ರಚಾರಕ್ಕೆ ಬರಲು ಒಪ್ಪುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.

ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ನಡೆಸಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗಳಿಸದಿದ್ದರೆ, ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿಗೆ ಹಿನ್ನಡೆ ಉಂಟಾಗಲಿದೆ ಎಂಬ ಕಾರಣಕ್ಕಾಗಿ ಕರ್ನಾಟಕಕ್ಕೆ ಮೋದಿ ಆಗಮಿಸುವುದಿಲ್ಲ ಎಂದು ವಿಶ್ಲೇಷಿಸಲಾಗಿತ್ತು.

ಸದ್ಯ ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನರೇಂದ್ರ ಮೋದಿ ಹೆಸರು ಪ್ರಕಟಗೊಂಡಿಲ್ಲ. ಆದ್ದರಿಂದ ಅವರು ಪ್ರಚಾರ ಕಾರ್ಯಕ್ಕೆ ಆಗಮಿಸುವುದು ಖಾತ್ರಿಯಾಗಿಲ್ಲ. ಮೋದಿ ಒಂದು ದಿನ ರಾಜ್ಯಕ್ಕೆ ಆಗಮಿಸಿ ಬೆಂಗಳೂರಿನ ಸುತ್ತ-ಮುತ್ತ ಮಾತ್ರ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು.

ಆದರೆ, ಇಂದಿನ ಪಟ್ಟಿಯಿಂದಾಗಿ ಅದು ಖಚಿತವಾದಂತಿಲ್ಲ. ಮೋದಿ ಕರೆತಂದು ಕಳಂಕ ತೊಳೆದುಕೊಂಡು ಮತಬೇಟೆಯಾಡುವ ಬಿಜೆಪಿ ತಂತ್ರ ಫಲಿಸಿಲ್ಲ. ಮುಂದೆ ಪಕ್ಷ ಯಾವ ಕಾರ್ಯತಂತ್ರ ಹಣೆಯುತ್ತದೆ ಎಂದು ಕಾದು ನೋಡಬೇಕು.

ನಾಯಕರ ಪ್ರಚಾರದ ವೇಳಾಪಟ್ಟಿ

ರಾಜನಾಥ್ ಸಿಂಗ್

ಏ.22 ಹೊಸಪೇಟೆ, ಬಳ್ಳಾರಿ

ವೆಂಕಯ್ಯ ನಾಯ್ಡು

ಏ.27 ಬಳ್ಳಾರಿ, ಸಿರಗುಪ್ಪ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Gujarat CM Narendra Modi stay away from Karnataka assembly election campaign. BJP released star campaigners list on April 16. Tuesday. But, Modi name was not appear in campaigners list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X