KRS: ಬಂಟ್ವಾಳ ಬಾಲಕಿ, ಮೈಸೂರು ಡ್ರೈವರ್ ಮೃತ್ಯು

ಮಗುವೊಂದು ಇನ್ನೇನು ಅಣೆಕಟ್ಟೆಗೆ ಬೀಳುತ್ತದೆ ಎಂದು ಹೆಸರಿ, ಆ ಮಗುವನ್ನು ರಕ್ಷಿಸಲು ಭಾಗ್ಯಲಕ್ಷ್ಮಿ (17) ಮೊದಲು ನೀರಿಗೆ ಹಾರಿದ್ದಾಳೆ. ಆದರೆ ಭಾಗ್ಯ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಭಾಗ್ಯ ಕುಟುಂಬವನ್ನು ಕರೆತಂದಿದ್ದ ಟ್ಯಾಕ್ಸಿಯ ಚಾಲಕ ಮೈಸೂರಿನ ರವಿಕುಮಾರ್ (29) ಸಹ ತಕ್ಷಣ ನೀರಿಗೆ ಧುಮುಕಿದ್ದಾನೆ. ಆದರೆ ನತದೃಷ್ಟರಿಬ್ಬರೂ ನೀರಿನಲ್ಲಿ ಮುಳಗಿ ಸತ್ತಿದ್ದಾರೆ.
ಭಾಗ್ಯಲಕ್ಷ್ಮಿ, ಬಂಟ್ವಾಳದ ಮೊಡಂಕಾಪು ಬಳಿಯ ಕಾರ್ಮೆಲ್ ಕಾನ್ವೆಂಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ತಾಲೂಕಿನ ಸಜಿಪದ ಗ್ರಾಮದವರಾದ ಶೋಭಾ ಎಸ್ ರಾವ್ ಮತ್ತು ಸತ್ಯಾನಾರಾಯಣ ರಾವ್ ಅವರ ಏಕೈಕ ಪುತ್ರಿ.
ಪರೀಕ್ಷೆ ಮುಗಿದು, ರಜೆ ಬಂದಿತೆಂದು ಭಾಗ್ಯಲಕ್ಷ್ಮಿ, ತನ್ನ ಕುಟುಂಬದವರೊಂದಿಗೆ ಬೃಂದವಾನ ಗಾರ್ಡನ್ಸ್ ಗೆ ಪಿಕ್ನಿಕ್ ಗೆಂದು ಬಂದಿದ್ದಳು. ಭಾಗ್ಯಲಕ್ಷ್ಮಿ ಶವ ಪತ್ತೆಯಾಗಿದ್ದು, ಆಕೆಯ ಹುಟ್ಟೂರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲಾಗಿದೆ.
ದುರ್ದೈವವೆಂದರೆ ಬಂಟ್ವಾಳದ ಒಟ್ಟು ಮೂವರು ವಿದ್ಯಾರ್ಥಿಗಳು ಗುರುವಾರದಂದೇ ನೀರಿಗೆ ಬಿದ್ದು ಸಾವಿಗೀಡಾಗಿದ್ದಾರೆ. ಅತ್ವಿನ್ ಡಿಮೆಲ್ಲೋ (21) ಮತ್ತು ರೋಶನ್ ಲಾಸ್ರಡೋ (18) ಮೃತ ಇತರೆ ಇಬ್ಬರು ವಿದ್ಯಾರ್ಥಿಗಳು.












Click it and Unblock the Notifications