ಯಜಮಾನಿ ಸ್ನಾನಕ್ಕೆ ಹೋದಾಗ ಕೆಲಸದವಳು ...

mumbai-lady-owner-goes-for-bath-maid-stole-rs-8-lakh
ಮುಂಬೈ, ಏ.12: ಮನೆಯ ಯಜಮಾನಿ ಸ್ನಾನಕ್ಕೆ ಹೋದಾಗ ಮನೆಗೆಲಸದವಳು ಏನು ಮಾಡಿದಳು ಅಂದರೆ ಆಕೆ ವಾಪಸು ಬರುವ ವೇಳೆಗೆ 8 ಲಕ್ಷ ರೂ. ಮೌಲ್ಯದ ವಸ್ತುಗಳು ದೋಚಿ, ಮನೆಯನ್ನು ಗುಡಿಸಿ ಗುಂಡಾಂತರ ಮಾಡಿದ್ದಾಳೆ. ಸ್ನಾನ ಮುಗಿಸಿ ಹೊರಬಂದು ಮನೆ ಖಾಲಿಯಾಗಿರುವುದನ್ನು ನೋಡಿ ಮನೆಯಾಕೆ ಮೂರ್ಛೆ ಬೀಳುವುದು ಬಾಕಿ.

ಅಷ್ಟಕ್ಕೂ, ಉಂಡಮನೆಗೆ ದ್ರೋಹ ಬಗೆದ ಆ ಮನೆಗೆಲಸದವಳನ್ನು ಕೆಲಸಕ್ಕೆ ಇಟ್ಟುಕೊಂಡು ಕೇವಲ 4 ದಿನಗಳ ಹಿಂದಷ್ಟೇ. ಅಷ್ಟರಲ್ಲೇ ... ತನ್ನ ಕರಾಮತ್ತು ತೋರಿದ್ದಾಳೆ. ಚೂನಾಭಟ್ಟಿ ಪ್ರದೇಶದಲ್ಲಿರುವ 66 ವರ್ಷದ ಮನೆಯಾಕೆ ಇಳಿವಯಸ್ಸಿನಲ್ಲಿ ಇಂತಹ ಜೀವಮಾನದ ಪಾಠವನ್ನು ಕಲಿತಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.

ಏಪ್ರಿಲ್ 2ರಂದು ಈ ಘಟನೆ ನಡೆದಿದೆ. ಆಶಾ ಉಮಾನ್ ಬೆಳಗ್ಗೆ 10.30ರಲ್ಲಿ ಸ್ನಾನಕ್ಕೆಂದು ಬಚ್ಚಲುಮನೆಗೆ ತೆರಳಿದ್ದಾರೆ. ಆ ವೇಳೆ, ಇತರೆ ಮನೆ ಮಂದಿಯೆಲ್ಲ ಕೆಲಸಕ್ಕೆಂದು ಹೊರಹೋಗಿದ್ದರು. ಸ್ನಾನ ಮಗಿಸಿ ಬಂದ ಆಶಾ ಅವರಿಗೆ ಮನೆಯಲ್ಲಿ ಖಾಲಿಯಾಗಿರುವುದು ಅರಿವಿಗೆ ಬಂದಿದೆ. ಎಚ್ಚೆತ್ತು ನೀಡಿದರೆ ಕೆಲಸದಾಳು ಜಯಾ ಸಹ ಕಾಣೆಯಾಗಿರುವುದು ಗೊತ್ತಾಗಿದೆ.

ಪೊಲೀಸರು ಈಗ ಜಯಾಳ ಬೆನ್ನುಹತ್ತಿದ್ದಾರೆ. ಆದರೆ ಆಶಾರ ಬಳಿ ಅವಳ ಬಗ್ಗೆ ಹೆಚ್ಚು ಮಾಹಿತಿಯೇ ಇಲ್ಲ. ಆದರೂ ಆಶಾ ನೀಡಿರುವ ಅಸ್ಪಷ್ಟ ಮಾಹಿತಿಯನ್ನಾಧರಿಸಿ ಪೊಲೀಸರು 30-32 ವರ್ಷದ ಹೆಂಗಸಿನ ಚಿತ್ರ ಬರೆದು ಇಡೀ ಬಡಾವಣೆಯನ್ನು ಜಾಲಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+