ಕಪ್ಪು ಪೆನ್ನಿಂದ ಸಹಿ ಹಾಕಿದ್ರೆ ಎಲೆಕ್ಷನ್ ಗೆಲ್ಲೋಕಾಗುತ್ತಾ?

 all partys
ಬೆಂಗಳೂರು, ಏ.12: ಬಿಳಿ ಬಣ್ಣದ ಬಟ್ಟೆ, ನೀಲಿ ಅಥವ ಕಪ್ಪು ಪೆನ್ನು, ಮೊದಲು ಸಹಿ ಹಾಕಿ ನಂತರ ವಿವಿರ ಭರ್ತಿ ಮಾಡುವುದು, ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಸಾಗುವುದು. ರಾಜಕೀಯ ನಾಯಕರು ಈ ರೀತಿಯ ಕಸರತ್ತು ಪ್ರಾರಂಭಿಸಿರುವುದು ನಾಮಪತ್ರ ಸಲ್ಲಿಕೆಗಾಗಿ. ಅದು ತಮ್ಮ ನೆಚ್ಚಿನ ಜ್ಯೋತಿಷಿಗಳ ಸಲಹೆಯಂತೆ.

ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದರೂ, ಸೋಮವಾರ ಏ.15ರಂದು ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ತಮ್ಮ ಜ್ಯೋತಿಷಿಗಳನ್ನು ಭೇಟಿ ಮಾಡಿ ಸೋಮವಾರಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ಕೊನೆಯ ದಿನವಾದ ಏ.17ರ ಬುಧವಾರವೂ ಕೆಲವರು ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳ ತಯಾರಿ ಕುತೂಹಲ ಹುಟ್ಟಿಸುತ್ತಿದೆ.

ಗೌಡರ ನಂಬರ್ ಗೇಮ್ : ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಪಾರವಾದ ದೈವಭಕ್ತಿ ಉಳ್ಳವರು. ಆದ್ದರಿಂದ ಅವರು ಪಟ್ಟಿ ಬಿಡುಗಡೆಯ ಸಮಯದಿಂದಲೇ ನಂಬರ್ ಗೇಮ್ ಮೊರೆ ಹೋಗಿದ್ದಾರೆ. ಜೆಡಿಎಸ್ 122 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಗೌಡರು ಜ್ಯೋತಿಷಿಗಳ ಮನೆ ಬಾಗಿಲು ತಟ್ಟಿದ್ದರು.

ಪಕ್ಷದ ಮೂಲಗಳ ಪ್ರಕಾರ ಗೌಡರಿಗೆ 5 ಲಕ್ಕಿ ನಂಬರ್ ಅಂತೆ. ಆದ್ದರಿಂದ 2+2+1 ಸೇರಿ 5 ಎಂಬಂತೆ 122 ಅಭ್ಯರ್ಥಿಗಳ ಪಟ್ಟಿಯನ್ನು ಗೌಡರು ಬಿಡುಗಡೆ ಮಾಡಲು ಸೂಚಿಸಿದ್ದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. 5ನ್ನು ನಂಬಿರುವ ಗೌಡರು ಕುಮಾರಸ್ವಾಮಿ ದಂಪತಿಗಳಿಗೆ 15ರಂದು ನಾಪತ್ರ ಸಲ್ಲಿಸುವಂತೆ ಸೂಚಿಸಿದ್ದಾರೆ.

ಜ್ಯೋತಿಷಿಗಳು ಸೂಚಿಸಿರುವ ನಕ್ಷತ್ರದ ಹರಳಿನ ಉಂಗುರ, ಖಾದಿ ವಸ್ತ್ರ, ಕಪ್ಪು ಪ್ಯಾಂಟ್, ನೀಲಿ ಅಥವ ಕಪ್ಪು ಪೆನ್ ಹೀಗೆ ರಾಜಕಾರಣಿಗಳು ತಮ್ಮ ಜ್ಯೋತಿಷಿಗಳ ಸಲಹೆಯಂತೆ ಅನೇಕ ತಯಾರಿ ಮಾಡಿಕೊಂಡು ನಾಮಪತ್ರ ಸಲ್ಲಿಸಲು ಸಿದ್ಧವಾಗುತ್ತಿದ್ದಾರೆ.

ಕೆಲವರಂತು ನಾಮಪತ್ರ ಸಲ್ಲಿಸಲು ಮನೆಯಿಂದ ಹೊರಡುವಾಗ ಅವರಿಗೆ ಶುಭ ತರುವ ವ್ಯಕ್ತಿ ಎದುರಿನಿಂದ ಬರುಲು ಸಿದ್ಧತೆ ಮಾಡಿಕೊಂಡಿದ್ದಾರೆ. ಒಬ್ಬರು ರಾಜಕಾರಣಿ ತಾವು ಸಾಗುವ ಮಾರ್ಗದಲ್ಲಿ ಎಲ್ಲೂ ರೆಡ್ ಸಿಗ್ನಲ್ ಹಾಕದಂತೆ ಪೊಲೀಸರಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ ಎಂದು ಜ್ಯೋತಿಷಿಗಳೊಬ್ಬರು ಬಹಿರಂಗ ಪಡಿಸಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೀಗೆ ಸಿದ್ಧವಾಗುತ್ತಾರೋ ಇಲ್ಲವೋ? ಐದು ವರ್ಷಕ್ಕೊಮ್ಮೆ ಪರೀಕ್ಷೆ ಎದುರಿಸುವ ರಾಜಕಾರಣಿಗಳು ಇದಕ್ಕಿಂತ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ನಾಮಪತ್ರ ಸಲ್ಲಿಸಿದರೆ ಅರ್ಧ ಚುನಾವಣೆ ಗೆದ್ದಂತೆ ಎಂದು ರಾಜಕಾರಣಿಗಳು ಭಾವಿಸಿದ್ದಾರೆ.

ಆದ್ದರಿಂದ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಸೋಮವಾರ ಇನ್ನು ಯಾವ ರಾಜಕಾರಣಿಗಳು ಎಂತಹ ತಂತ್ರ ಅನುಸರಿಸುತ್ತಾರೆ ಎಂಬುದಂತೂ ಕುತೂಹಲ ಹುಟ್ಟಿಸಿದೆ. ನಾಮಪತ್ರ ಸಲ್ಲಿಕೆಗೆ ಏ.17 ಬುಧವಾರ ಕೊನೆಯ ದಿನವಾಗಿದೆ. [2004ರಲ್ಲಿ ಪ್ರಮೀಳಾ ಹೇಗೆ ನಾಮಪತ್ರ ಸಲ್ಲಿಸಿದ್ರು ಗೊತ್ತಾ?]

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+