ರಾಜ್ ಕನ್ನಡ ಸುದ್ದಿ ವಾಹಿನಿ ನಿರೀಕ್ಷಿಸಿ

ತಮಿಳುನಾಡು ಮೂಲದ ರಾಜ್ ಟಿವಿ ಜಾಲದಿಂದ ಹೊರ ಬರುತ್ತಿರುವ ಕನ್ನಡದ ಎರಡನೇ ಚಾನೆಲ್ ಇದಾಗಿದೆ. ಈಗಾಗಲೇ ರಾಜ್ ಮ್ಯೂಸಿಕ್ ಕನ್ನಡ ಚಾನೆಲ್ ಎಲ್ಲೆಡೆ ಜನಪ್ರಿಯತೆ ಪಡೆದುಕೊಂಡಿದೆ. ಕರ್ನಾಟಕದ ವಿಧಾನಸಭೆ ಚುನಾವಣೆ ಸಮಯದಲ್ಲಿ ಹೊಸ ಸುದ್ದಿ ವಾಹಿನಿ ಆರಂಭಗೊಳ್ಳುತ್ತಿರುವುದು ವಿಶೇಷವಾಗಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು, ಶ್ರೀಸಾಮಾನ್ಯರ ಕಣ್ಗಾವಲಾಗಿ ರಾಜ್ ನ್ಯೂಸ್ ಕೆಲಸ ಮಾಡಲಿದೆ ಎಂದು ಹಮೀದ್ ಪಾಳ್ಯ ಹೇಳಿದ್ದಾರೆ.
ಷೇರುಪೇಟೆಯಲ್ಲಿ ಹೇಗಿದೆ?: ಚೆನ್ನೈನ ರಾಜ್ ಟಿವಿ ನೆಟ್ವರ್ಕ್ ನ ಹೊಸ ಸಾಹಸಕ್ಕೆ ಷೇರುಪೇಟೆಯಲ್ಲೂ ಉತ್ತಮ ಪ್ರತಿಕ್ರಿಯೆ ಇದೆ. ಶುಕ್ರವಾರ(ಏ.12) ರಂದು ಬಿಎಸ್ ಇನಲ್ಲಿ ಮಧ್ಯಾಹ್ನ 12.45ರ ಸುಮಾರಿಗೆ ಕಂಪನಿ ಷೇರುಗಳು 206.5 ರು ನಂತೆ ಶೇ 3.40 ರಷ್ಟು ಏರಿಕೆ ಕಂಡಿದೆ. ಇದೇ ವೇಳೆ ಎನ್ ಎಸ್ ಇನಲ್ಲಿ 206.00 ರು ನಂತೆ ಶೇ 3.34 ರಷ್ಟು ಏರಿದೆ.
ಇನ್ನೆರಡು ಮೂರು ದಿನಗಳಲ್ಲಿ ಕನ್ನಡ ಸುದ್ದಿ ವಾಹಿನಿ ಆರಂಭಗೊಳ್ಳುವುದರಿಂದ ರಾಜ್ ನೆಟ್ವರ್ಕ್ ಷೇರು ಇದ್ದವರಿಗೆ ಸುಗ್ಗಿ ಕಾಲ ಎನ್ನಬಹುದು. ಜಾಹೀರಾತುದಾರರಿಗೂ ಕೂಡಾ ಉತ್ತಮ ಅವಕಾಶಗಳು ಕೂಡಿ ಬಂದಿದೆ. ಚುನಾವಣಾ ಅಭ್ಯರ್ಥಿಗಳಿಗೆ ಟಿವಿ ಮಾಧ್ಯಮದಲ್ಲಿ ಪ್ರಚಾರಕ್ಕೆ ಮತ್ತೊಂದು ವಾಹಿನಿ ಸಿಕ್ಕಿದೆ.
ರಾಜ್ ನ್ಯೂಸ್ ಚಾನೆಲ್ ಲೋಕಾರ್ಪಣೆಯನ್ನು ಕನ್ನಡದ ಹಿರಿಯ ಸಾಹಿತಿಗಳಾದ ಡಾ. ಯು,ಆರ್ ಅನಂತಮೂರ್ತಿ ಹಾಗೂ ಚಂದ್ರಶೇಖರ ಕಂಬಾರ ಅವರು ಏ.13 ರಂದು ಗೋಧೂಳಿ ಸಮಯದಲ್ಲಿ ಮಾಡಲಿದ್ದಾರೆ. ಏ.14 ರಿಂದ ರಾಜ್ ನ್ಯೂಸ್ ತನ್ನ ಪ್ರಸಾರವನ್ನು ಆರಂಭಿಸಲಿದೆ.
ಕನ್ನಡಿಗರಿಗೆ ನ್ಯೂಸ್ ವಾಹಿನಿಗಳ ಸುಗ್ಗಿ ಆರಂಭವಾಗಿದೆ. ದೂರದರ್ಶನವನ್ನು ಸೇರಿಸಿಕೊಂಡರೆ, ಉದಯ ನ್ಯೂಸ್, ಜನಶ್ರೀ, ಸಮಯ ಟಿವಿ, ಈಟಿವಿ, ಪಬ್ಲಿಕ್ ಟಿವಿ, ಸುವರ್ಣ ಸುದ್ದಿ ವಾಹಿನಿ, ಟಿವಿ 9 ಕರ್ನಾಟಕ ಜೊತೆ ಈಗ ರಾಜ್ ನ್ಯೂಸ್ ಚಾನೆಲ್ ಸೇರಿಕೊಳ್ಳಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
#16/1,K K M P,
ಮಿಲ್ಲರ್ಸ್ ಟ್ಯಾಂಕ್ ಬಂಡ್ ರಸ್ತೆ
ವಸಂತ ನಗರ
ಬೆಂಗಳೂರು 560052
PH- 080-22343123
ವೆಬ್ ತಾಣ: http://www.rajkanada.in/
1994ರಲ್ಲಿ ಆರಂಭವಾದ ರಾಜ್ ಟೆಲಿವಿಷನ್ ನೆಟ್ವರ್ಕ್ ಸುದ್ದಿ ಹಾಗೂ ಮನರಂಜನೆ ವಿಭಾಗದಲ್ಲಿ ವಿವಿಧ ಭಾಷೆಗಳಲ್ಲಿ(ಕನ್ನಡ, ತೆಲುಗು, ತಮಿಳು,..ಇತ್ಯಾದಿ) ಅನೇಕ ಚಾನೆಲ್ ಗಳನ್ನು ಹೊಂದಿದೆ. ಮುಖ್ಯವಾಗಿ ರಾಜ್ ಟಿವಿ, ರಾಜ್ ಡಿಟಿಜಲ್ ಪ್ಲಸ್, ರಾಜ್ ನ್ಯೂಸ್ 24 X7, ರಾಜ್ ಮ್ಯೂಸಿಕ್, ವಿಸ್ಸಾ ಈ ಜಾಲದ ಚಾನೆಲ್ ಗಳು
ಟಿವಿ9 ಕನ್ನಡ ಚಾನಲ್ಲಿನಲ್ಲಿ ಸುದ್ದಿ ವಿವರಣೆ ಹಾಗೂ ಕಾರ್ಯಕ್ರಮ ನಿರೂಪಣೆ ನಡೆಸಿಕೊಡುತ್ತಿದ್ದ ಹಮೀದ್ ಪಾಳ್ಯ ಅವರು ಉತ್ತಮ ಸಮಾಜಕ್ಕಾಗಿ" ಚಾನೆಲ್ ಬಿಟ್ಟು 'ನೇರ ದಿಟ್ಟ ನಿರಂತರ' ಚಾನೆಲ್ ಆದ ಸುವರ್ಣ ಸುದ್ದಿ ವಾಹಿನಿ ಸೇರಿದ್ದರು. ನಂತರ ಕಳೆದ ಜನವರಿಯಲ್ಲಿ ಸಂಪಾದಕ ಮತ್ತು ನಿರೂಪಕ ಹಮೀದ್ ಪಾಳ್ಯ ಸುವರ್ಣ ನ್ಯೂಸ್ 24x7 ವಾಹಿನಿಗೆ ವಿದಾಯ ಹೇಳಿದ್ದರು.
ಹಮೀದ್ "ಬಿಗ್ ಫೈಟ್", "ಟಾರ್ಗೆಟ್" ಕಾರ್ಯಕ್ರಮಗಳ ಮೂಲಕ ವಾಹಿನಿಯ ವೀಕ್ಷಕರಿಗೆ ಚೆನ್ನಾಗಿ ಪರಿಚಿತರು. ಅಂಡರ್ ವರ್ಲ್ಡ್ ಫ್ಲ್ಯಾಷ್ ಬ್ಯಾಕ್" ಮುಂತಾದ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದರು. ಹಮೀದ್ ಅವರ ಬಗ್ಗೆ ಇನ್ನಷ್ಟು ಮಾಹಿತಿ ಈ ಲೇಖನದಲ್ಲಿದೆ ಓದಿ












Click it and Unblock the Notifications