ರಾಜ್ಯ ಅಭಿವೃದ್ಧಿಯಾಗಿದ್ದು ಯಡಿಯೂರಪ್ಪ ನಂತರವೇ

ಏನಪಾ ಅಂದರೆ ಕರ್ನಾಟಕದಲ್ಲಿ ಅಭಿವೃದ್ಧಿ ಅಂತೇನಾದರೂ ಆಗಿದ್ದರೆ ಅದು ಬಿಜೆಪಿಯ ದ್ವಿತೀಯಾರ್ಧ ಆಡಳಿತದಲ್ಲಿ ಮಾತ್ರ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿವಿ ಸದಾನಂದ ಗೌಡ ಅವರು ತಮ್ಮ ಪಕ್ಷದ ಆಡಳಿತದ ಬಗ್ಗೆ ಷರಾ ಬರೆದಿದ್ದಾರೆ.
ಸೋ ಇದು ಮಾಜಿ ಮುಖ್ಯಮಂತ್ರಿಯೂ ಆದ ಸದಾನಂದ ಗೌಡರು ತಮಗಿಂತ ಮುಂಚೆ ಆಡಳಿತ ನಡೆಸಿದ್ದ ಹಾಲಿ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರ ಆಡಳಿತ ಬಗ್ಗೆ ಹೇಳಿರುವ 'ನಲ್ಮೆಯ' ನುಡಿಗಳು.
ಮೊದಲಾರ್ಧದಲ್ಲಿ ಆಡಳಿತ ಪಕ್ಷದಲ್ಲಿ ಗೊಂದಲಗಳೇ ತಾಂಡವವಾಡಿದ್ದವು ಎಂದು ವಿಷಾದಿಸಿದ ಗೌಡರು ತದನಂತರ ತಮ್ಮ ಆಡಳಿತವು ಸರಿ ದಾರಿಗೆ ಬಂದು ಕರ್ನಾಟಕ ಪ್ರಗತಿಯತ್ತ ಸಾಗಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾಷ್ಟ್ರೀಯ ಉಪಾಧ್ಯಕ್ಷರಾದ ಗೌಡರು ಯಡಿಯೂರಪ್ಪ ನಂತರ ಕಾಮಗ್ರೆಸ್ ಪಕ್ಷದತ್ತ ಮದ್ದುಗುಂಡು ಸಿಡಿಸತೊಡಗಿದರು. ಮುಂದಿನ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ 5 ಕೋಟಿ ರೂ. ಲೇವಾದೇವಿ ನಡೆದಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications