ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಕೋಟ್ಯಾಧಿಪತಿ ಶಾಸಕರು !

|
Google Oneindia Kannada News

MLAs
ಬೆಂಗಳೂರು, ಏ.4 :ಕರ್ನಾಟಕದ ಕೆಲವು ಶಾಸಕರು, ಸಚಿವರು ಕೋಟ್ಯಾಂತರ ರೂ.ಆಸ್ತಿ ಮಾಡಿಕೊಂಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುವುದು ಸಾಮಾನ್ಯ. ಆದರೆ, ಈ ವಾದಕ್ಕೆ ಪುಷ್ಠಿ ನೀಡುವಂತೆ ಸಮೀಕ್ಷೆಯೊಂದು ನಡೆದಿದ್ದು, ಕರ್ನಾಟಕ ಶೇ 75ರಷ್ಟು ಸಚಿವರು ಮತ್ತು ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ವರದಿ ಬಹಿರಂಗಗೊಳಿದೆ.

ಚುನಾವಣಾ ಕಾವಲು ಸಮಿತಿ ಮತ್ತು ಪ್ರಜಾಪ್ರಭುತ್ವ ಪರಿವರ್ತನಾ ಸಂಘಟನೆ (ಎಡಿಆರ್) ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಕರ್ನಾಟಕದ ಶೇ 42 ರಷ್ಟು ಸಚಿವರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. 2008ರ ಚುನಾವಣೆಯಲ್ಲಿ ಆಯ್ಕೆಯಾದ 214 ಶಾಸಕರು ಸರಾಸರಿ 5.98 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಕರ್ನಾಟಕದ 24 ಸಚಿವರ ಪೈಕಿ 18 ಮಂದಿ ಸುಮಾರು 7 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಸಿ.ಟಿ.ರವಿ, ಆನಂದ್ ಸಿಂಗ್, ಆನಂದ್ ಆಸ್ನೋಟಿಕರ್ ಮುಂತಾದವರ ವಿರುದ್ಧ ಕೊಲೆ ಯತ್ನ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಸಮೀಕ್ಷೆ ತಿಳಿಸಿದೆ. 224 ರಲ್ಲಿ 214 ಮಂದಿಯ ಆಸ್ತಿ ವಿವರ ಸಂಗ್ರಹಿಸಲಾಗಿದೆ.

ಐವರು ಪ್ರಮುಖ ಕೋಟ್ಯಾಧಿಪತಿಗಳು :ಸಚಿವರಾದ ಆನಂದ್ ಸಿಂಗ್, ವಿ.ಸೋಮಣ್ಣ, ಆನಂದ್ ಆಸ್ನೋಟಿಕರ್, ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಿ.ಟಿ.ರವಿ ಮುಂತಾದವರು ಒಗ್ಗಟ್ಟಾಗಿ ಕೋಟ್ಯಾಧಿಪತಿಗಳ ಮೊದಲ ಐದು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ಕುರಿತಂತೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

ರಾಜ್ಯದ 224 ಶಾಸಕರ ಪೈಕಿ 214 ಮಂದಿ ಶಾಸಕರ ವಿವರವನ್ನು ಕರ್ನಾಟಕ ಕಾವಲು ಸಮಿತಿ ಸಂಗ್ರಹಿಸಿದ್ದು, ಇವರಲ್ಲಿ ಕಾಂಗ್ರೆಸ್ ನ 70 ಮಂದಿ ಶಾಸಕರು 9 ಕೋಟಿಗೂ ಅಧಿಕ ಆಸ್ತಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಜೆಡಿಎಸ್ ನ 26 ಮತ್ತು ಬಿಜೆಪಿಯ 112 ಮಂದಿ ಶಾಸಕರು 4 ಕೋಟಿಗೂ ಅಧಿಕ ಆಸ್ತಿ ಘೋಷಿಸಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ.

ದಕ್ಷಿಣ ಭಾರತದಲ್ಲಿ ಅಧಿಕ : ದಕ್ಷಿಣ ಭಾರತದ ರಾಜ್ಯಗಳ ಪೈಕಿ ರಾಜ್ಯದ ಶಾಸಕರು ಅತಿ ಹೆಚ್ಚು ಆಸ್ತಿ ಮೌಲ್ಯ ಹೊಂದಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಕಾಂಗ್ರೆಸ್ ನ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ 767.60 ಕೋಟಿ ಆದಾಯ ಹೊಂದಿದ್ದು ಅವರನ್ನು ಯಾವುದೇ ಪಟ್ಟಿಗೆ ಸೇರಿಸದೆ ಪ್ರತ್ಯೇಕಗೊಳಿಸಲಾಗಿದೆ.

2011ರ ಚುನಾವಣೆಯಲ್ಲಿ ಆಯ್ಕೆಯಾದ ತಮಿಳುನಾಡಿನ 134 ಶಾಸಕರ ಆಸ್ತಿ 3.98 ಕೋಟಿ ಆಸ್ತಿ ಹೊಂದಿದ್ದಾರೆ. 2009ರಲ್ಲಿ ಆಂಧ್ರ ಪ್ರದೇಶದಲ್ಲಿ ಆಯ್ಕೆಯಾದ 260 ಶಾಸಕರ ಆಸ್ತಿ 3.78 ಕೋಟಿ. 2011ರ ಕೇರಳ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರ ಆಸ್ತಿ ಕೇವಲ 1.43 ಕೋಟಿ. ಆದರೆ ಕರ್ನಾಟಕದಲ್ಲಿ 2008ರಲ್ಲಿ ಆಯ್ಕೆಯಾದ 214 ಶಾಸಕರ ಸರಾಸರಿ ಆಸ್ತಿ 5.98 ಕೋಟಿ ಇದು ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
A survey report says Karnatakas 214 MLAs have announced 5.98 core assets. A survey conduct by Karnataka kavalu samithi report says Karnataka MLAs were very rich in South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X