ರಘುಪತಿ ಭಟ್ ಪರ ಪೇಜಾವರ ಶ್ರೀಗಳ ವಕಾಲತ್ತು

ಸಿಡಿ ಬಹಿರಂಗವಾಗುವ ಮುನ್ನವೇ ಖಚಿತ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ರಘುಪತಿ ಭಟ್ ಅವರಿಗೆ ಈ ಬಾರಿ ಟಿಕೆಟ್ ನೀಡದೇ ಇರಲು ಪಕ್ಷ ನಿರ್ಧರಿಸಿತ್ತು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಟಿಕೆಟ್ ಸಿಗಲಿದೆ ಎನ್ನಲಾಗಿತ್ತು. ಆದರೆ, ಇದೇ ಸಮಯಕ್ಕೆ ಸಿಡಿ ಪ್ರಕರಣ ಶುರುವಾಗಿ ಲೆಕ್ಕಾಚಾರ ತಲೆಕೆಳಗಾಗಿದೆ.
ಈಗ ರಘುಪತಿ ಭಟ್ ಅವರ ಪರ ಅನುಕಂಪದ ಅಲೆ ಆರಂಭವಾಗಿದ್ದು, ಉಡುಪಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ. ಜೊತೆಗೆ ಬಿಜೆಪಿ ಹಿರಿಯ ನಾಯಕರಿಗೂ ಈ ಬಗ್ಗೆ ಆಗ್ರಹಿಸಲಾಗಿದೆ. ಬಿಜೆಪಿ ನಾಯಕರು ಈಗ ಟಿಕೆಟ್ ನೀಡಬೇಕೇ? ಬೇಡವೇ? ಎಂಬ ಚಿಂತನೆಯಲ್ಲಿದ್ದಾರೆ.
ಪೇಜಾವರ ಶ್ರೀಗಳ ಬೆಂಬಲ: ನಾನು ಯಾವತ್ತಿಗೂ ನೈತಿಕತೆಗೆ ಬೆಂಬಲ ಕೊಡುತ್ತೇನೆ. ಮೊನ್ನೆ ತಾನೆ ನಡೆದ ಸಿಡಿ ಪ್ರಕರಣದಲ್ಲಿ ಸಿಡಿಯಲ್ಲಿರುವ ದೃಶ್ಯಗಳನ್ನು ಪೂರ್ತಿಯಾಗಿ ನಂಬಲು ಸಾಧ್ಯವಿಲ್ಲ. ಅದರಲ್ಲಿ ಸುಳ್ಳು ಕೂಡಾ ಇರಬಹುದು. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರು ಯಾರು ಎಂಬುದು ಬಹಿರಂಗವಾಗಬೇಕು ಎಂದು ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಯಾವುದೇ ವ್ಯಕ್ತಿ ಅಥವಾ ಪಕ್ಷದ ಮೇಲೆ ಆಧಾರವಿಲ್ಲದೆ ಆರೋಪ ಮಾಡಬಾರದು. ರಘುಪತಿ ಭಟ್ ಅವರು ರಾಜಕೀಯದಿಂದ ಹಿಂದೆ ಸರಿಯುವ ಮಾತನ್ನಾಡಬಾರದು. ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲೇಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.
ರಾಜಧಾನಿ ಬೆಂಗಳೂರಿನ ಮಾಧ್ಯಮ ಕಚೇರಿಗೆ ಬ್ಲೂಫಿಲಂ ಅನ್ನು ಅನಾಮಧೇಯ ವ್ಯಕ್ತಿಗಳು ತಲುಪಿಸಿದ್ದಾರೆ. ನೇರವಾಗಿ ಬಿಜೆಪಿಯನ್ನು ಕ್ಷೇತ್ರದಲ್ಲಿ ಎದುರಿಸಲಾಗದ ರಣಹೇಡಿಗಳ ಕೃತ್ಯವಿದು. ನನ್ನ ತೇಜೋವಧೆಗೆ ಮಾಡಿದ ವ್ಯವಸ್ಥಿತಿತ ಷಡ್ಯಂತ್ರವಿದು. ಕ್ಷೇತ್ರದ ಮತ್ತು ರಾಜ್ಯದ ಜನತೆಗೆ ನಾನು ಹೇಳುವುದಿಷ್ಟೇ ಆ ಸಿಡಿಯಲ್ಲಿರುವ ವ್ಯಕ್ತಿ ನಾನವನಲ್ಲ..ನಾನವನಲ್ಲ..ನಾನವನಲ್ಲ.. ಎಂದಿದ್ದರು.
ಬುಧವಾರ (ಮಾ 28) ರಾತ್ರಿ ನಾನು ಈ ಸಿಡಿಯನ್ನು ನೋಡಿದೆ. ಇದನ್ನು ನೋಡಿ ನನಗೆ ದಿಗ್ಭ್ರಮೆಯಾಗಿದೆ. ಸಿಡಿಗೆ ಸಂಬಂಧಪಟ್ಟ ತನಿಖೆ ಮುಗಿಯುವವರೆಗೆ ನಾನು ರಾಜಕೀಯದಲ್ಲಿರುವುದಿಲ್ಲ ಎಂದು ರಘುಪತಿ ಭಟ್ ಹೇಳಿದ್ದರು.












Click it and Unblock the Notifications