ಇನ್ನು ರೇಣುಕಾಚಾರ್ಯ ಕಥೆ ಅಷ್ಟೇ ಕಣಣ್ಣೋ!

ತುಂಬು ತೋಳಿನ ಸ್ವಾಗತ:
ಏನಪಾ ಅಂದರೆ ಇತ್ತ ರಾಜಧಾನಿಯಲ್ಲಿ ರೇಣುಕಾಚಾರ್ಯರ ಪುರಾತನ ಗೆಳತಿಯೊಬ್ಬರು ಹೊಸ ಬಾಂಬ್ ಹಾಕಿರುವುದರಿಂದ ಹೊನ್ನಾಳಿ ಮತದಾರರು ಗಲಿಬಿಲಿಗೊಂಡಿದ್ದಾರೆ. ಪಡ್ಡೆ ಹೈಕಳುಗಳು, ಇನ್ಮುಂದೆ ತಮಗೆ ದಿನಾ 'ನರ್ಸ್ ಜಯಲಕ್ಷ್ಮಿ' ದರ್ಶನ ಭಾಗ್ಯ ಸಿಗುತ್ತದೆ ಎಂದು ಏನೇನೋ ಕಲ್ಪಿಸಿಕೊಂಡು ಥ್ರಿಲ್ ಆಗಿಬಿಟ್ಟಿದ್ದಾರೆ.
ಎಲ್ಲಾ ರೇಣುಕಾ ಮಹಾತ್ಮೆ:
ಇದಕ್ಕೆಲ್ಲ ಕಾರಣವಾಗಿರುವುದು 'ನರ್ಸ್ ಜಯಲಕ್ಷ್ಮಿ' ಅವರು ಶ್ರೀರಾಮುಲುರ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡಿರುವುದು. ಅಷ್ಟೇ ಅಲ್ಲ, ಪಕ್ಷ ಬಯಸಿದರೆ ಹೊನ್ನಾಳಿ ಕ್ಷೇತ್ರದಿಂದಲೇ ಸ್ಪರ್ಧಿಸಬಯಸುವುದಾಗಿಯೂ ಘೋಷಿಸಿದ್ದಾರೆ.
ನರ್ಸ್ ಜಯಲಕ್ಷ್ಮಿ ಹೋಗಿ 'ಬಿಎಸ್ಸಾರ್ ಜಯಲಕ್ಷ್ಮಿ' ಬಂದ್ರು ಡುಂಡುಂ:
ಮೊನ್ನೆ ಕೆಜೆಪಿ ಗೃಹ ಪ್ರವೇಶದ ವೇಳೆ ಶೋಭಾ ಮೇಡಂ ಅವರು ಕೊಟ್ಟ ತಿರುಗೇಟಿಗೆ ಕಂಗಾಲಾಗಿದ್ದ ರೇಣುಕಾಚಾರ್ಯಗೆ ಇದೀಗ ಮಾಜಿ ಗೆಳತಿ ಜಯಲಕ್ಷ್ಮಿಯೇ ತಮ್ಮೆದುರು ಸ್ಪರ್ಧಿಸಲು ಹಾತೊರೆಯುತ್ತಿರುವ ಸುದ್ದಿ ಕೇಳಿ ಮತ್ತಷ್ಟು ಅಧೀರರಾಗಿದ್ದಾರೆ ಎನ್ನಲಾಗಿದೆ.
ಚುನಾವಣೆ ರಂಗೇರುತ್ತಿದೆ:
ಕಳೆದೈದು ವರ್ಷಗಳಿಂದ ಬಿಜೆಪಿಯಲ್ಲಿದ್ದುಕೊಂಡು ಸಕಲವೂ ಅನುಭವಿಸಿದ ಬಳಿಕ ಬಿಜೆಪಿಯನ್ನು ಒದ್ದುಕೊಂಡು ಬಂದ ರೇಣುಕಾಚಾರ್ಯರಿಗೆ, ಇತ್ತ ಯಡಿಯೂರಪ್ಪನವರು ''ಅಷ್ಟಕ್ಕಷ್ಟೇ'' ಎಂಬಂತೆ ವರ್ತಿಸುತ್ತಿರುವುದನ್ನು ಕಂಡು ಎಲ್ಲವೂ ಅಯೋಮಯ ಎನ್ನುವಂತಾಗಿದೆ. ಒಟ್ಟಿನಲ್ಲಿ ವಿಧಾಸನಭೆ ಚುನಾವಣೆ ರಂಗೇರುತ್ತಿದೆ.












Click it and Unblock the Notifications