ಬಿಜೆಪಿಗೆ ಹುಮ್ಮಸ್ಸು ತುಂಬಲು ಬರಲಿದ್ದಾರೆ ಮೋದಿ

Narendra Modi to campaign in Karnataka
ಬೆಂಗಳೂರು, ಏ. 3 : ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಬರುವುದು ಹೆಚ್ಚೂಕಡಿಮೆ ಖಚಿತವಾಗಿದ್ದು, ಬಿಜೆಪಿ ಪಾಳಯದಲ್ಲಿ ಹುಮ್ಮಸ್ಸು ಮೂಡಿಸಿದೆ. ಆದರೆ, ಗುಜರಾತ್‌ನಲ್ಲಿ ಮಾಡಿದ ಮೋಡಿ ಮೋದಿ ಕರ್ನಾಟಕದಲ್ಲೂ ಮಾಡಲಿದ್ದಾರಾ?

ಅವರು ಏಪ್ರಿಲ್ 20ರಿಂದ ಮೇ 1ರೊಳಗೆ ನಾಲ್ಕೈದು ದಿನಗಳ ಕಾಲ ಕರ್ನಾಟಕ ಜನತಾ ಪಕ್ಷ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಅವರ ಪ್ರಚಾರದ ದಿನಾಂಕ ಇನ್ನೂ ನಿಖರವಾಗಿಲ್ಲ. ಏ.5ರಂದು ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯ ಸಂದರ್ಭದಲ್ಲಿ ಮೋದಿ ಅವರ ಪ್ರಚಾರದ ದಿನಾಂಕ ಮತ್ತು ರೂಪುರೇಷೆಗಳು ನಿಗದಿಯಾಗಲಿವೆ.

ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ಆದರೆ, ಏ.8ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

ಮೋದಿ ಅವರು ಯಡಿಯೂರಪ್ಪನವರು ಹೆಚ್ಚು ಪ್ರಾಬಲ್ಯ ಹೊಂದಿರುವ ಕರಾವಳಿ ಮತ್ತು ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರಕಾರ್ಯ ಕೈಗೊಳ್ಳಲಿದ್ದಾರೆ. ಇತ್ತೀಚೆಗೆ ಬಿಜೆಪಿಯ ಸಂಸದೀಯ ಮಂಡಳಿ ಸೇರಿರುವ ಮೋದಿ ಆಗಮನದಿಂದಾಗಿ ಬಿಜೆಪಿಯಿಂದ ಸಿಡಿದುಹೋಗಿರುವ ಯಡಿಯೂರಪ್ಪನವರ ಪ್ರಭಾವಳಿ ಸಾಕಷ್ಟು ತಗ್ಗಲಿದೆ ಎಂದು ಊಹಿಸಲಾಗಿದೆ.

ಮೋದಿ ಅವರ ಆಗಮನವನ್ನು ಖಚಿತಪಡಿಸಿರುವ ಅನಂತ್ ಕುಮಾರ್ ಅವರು ಹೇಳುವುದೇನೆಂದರೆ, "ನಮಗೇನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖ ವಿರೋಧಿಗಳು. ಉಳಿದ ಪಕ್ಷಗಳು ಗಣನೆಗೆ ಇಲ್ಲ. ಮೋದಿ ಅವರು ತಮ್ಮ ಸಮಯ ಮತ್ತು ಶಕ್ತಿಯನ್ನು ಏಕೈಕ ವ್ಯಕ್ತಿ(ಯಡಿಯೂರಪ್ಪ)ಗಾಗಿ ವ್ಯಯಿಸಲು ಇಷ್ಟಪಡುವುದಿಲ್ಲ" ಎಂದು ಯಡಿಯೂರಪ್ಪ ಫ್ಯಾಕ್ಟರ್ ಲೆಕ್ಕಕ್ಕಿಲ್ಲ ಎಂದು ಹೇಳಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಮೋದಿ ಅವರು ಯಡಿಯೂರಪ್ಪನವರ ಪಕ್ಷದ ವಿರುದ್ಧ ಪ್ರಚಾರ ಮಾಡುವುದಿರಲಿ, ಕನಿಷ್ಠಪಕ್ಷ ಅವರ ಪಕ್ಷದ ಮತ್ತು ಅವರ ಹೆಸರನ್ನು ಕೂಡ ಎತ್ತುವುದಿಲ್ಲ. ಗುಜರಾತ್ ಚುನಾವಣೆಯಲ್ಲಿ ಕೂಡ ಅವರು ಕೇಶುಭಾಯಿ ಪಟೇಲ್ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಅವರು ತಮ್ಮ ಆಕ್ರಮಣವನ್ನು ಕಾಂಗ್ರೆಸ್ ವಿರುದ್ಧ ಕೇಂದ್ರೀಕರಿಸಿದ್ದರು. ಕರ್ನಾಟಕದಲ್ಲಿ ಕೂಡ ಅವರು ಇದೇ ತಂತ್ರವನ್ನು ಬಳಸಲಿದ್ದಾರೆ.

ಪ್ರಿಯಾಂಕಾ ಗಾಂಧಿ ಹೆಸರು ಮಿಸ್ಸಿಂಗ್ : ತಮ್ಮ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕರ್ನಾಟಕ ಕಾಂಗ್ರೆಸ್ ಈಗಾಗಲೆ ತಯಾರಿಸಿದ್ದು, ಸ್ಟಾರ್ ಪ್ರಚಾರಕಿಯಾಗಿರುವ ಪ್ರಿಯಾಂಕಾ ಗಾಂಧಿ ವದ್ರಾ ಅವರ ಹೆಸರನ್ನು ನಮೂದಿಸದಿರುವುದು ಭಾರೀ ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನಿ ಡಾ. ಮನಮೋಹನ ಸಿಂಗ್ ಹೆಸರಿವೆ. ಆದರೆ, ಪ್ರಿಯಾಂಕಾ ಹೆಸರು ಮಾತ್ರ ಮಿಸ್ ಆಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+