ಮೋದಿ ಪ್ರಧಾನಿ ಎನ್ನಿ ಭಾರತ ಗೆಲ್ಲಿ : ಬಾಬಾ

BJP should project Modi in LS elections, says Ramdev
ಜೈಪುರ, ಏ.1: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದರೆ ಮಾತ್ರ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶ ಹೊರ ಹಾಕಲು ಸಾಧ್ಯ ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಜನ ವಿರೋಧಿ ನೀತಿ ಅನುಸರಿಸಿ ಬೆಲೆ ಏರಿಕೆ ಭೂತವನ್ನು ಬಿಡುತ್ತಿದೆ. ಜನತೆ ಯುಪಿಎ ಸರ್ಕಾರದ ನೀತಿಯಿಂದ ಬೇಸತ್ತಿದ್ದಾರೆ. ಗುಜರಾತ್ ರಾಜ್ಯದ ಅಭಿವೃದ್ಧಿ ಬಗ್ಗೆ ಜನರಿಗೆ ಸ್ಪಷ್ಟ ಅರಿವಿದೆ. ದೇಶದೆಲ್ಲೆಡೆ ಇದೇ ರೀತಿ ಅಭಿವೃದ್ಧಿ ಕಾಣಬೇಕಿದ್ದಾರೆ. ಮೋದಿ ಅವರು ಕೂಡಲೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಈ ಮೂಲಕ ಜನರ ಮನಸ್ಸನ್ನು ಗೆದ್ದು ಭಾರತದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಬಹುದು ಎಂದು ರಾಮ್ ದೇವ್ ಹೇಳಿದರು

ಮೋದಿ ಅವರು ಜಪಿಸುವುದು ಒಂದೇ ಮಂತ್ರ ಅದು ಅಭಿವೃದ್ಧಿ ಮಂತ್ರ. ಅವರ ನೇರ ನಡೆ ನುಡಿ, ಭ್ರಷ್ಟಾಚಾರ ರಹಿತ ಸರ್ಕಾರ ಕಂಡರೆ ಹಲವರಿಗೆ ಹೊಟ್ಟೆಕಿಚ್ಚು. ದೇಶದಲ್ಲಿ ನಾಯಕತ್ವದ ಕೊರತೆ ಎದುರಾಗಿರುವ ಸಂದರ್ಭದಲ್ಲಿ ನಮ್ಮ ಬಳಿ ಇರುವ ಉತ್ತಮ ನಾಯಕರನ್ನು ನಾವೇ ಗುರುತಿಸಿ ಬೆಳೆಸದಿದ್ದರೆ ದೊಡ್ಡ ಪ್ರಮಾದವಾಗಲಿದೆ.

ರಾಜಕೀಯದಲ್ಲಿ ಉತ್ತಮ ಚಿಂತನೆ, ಅನುಷ್ಠಾನ ತರಲು ಮೋದಿ ಅವರಿಂದ ಮಾತ್ರ ಸಾಧ್ಯ. ರಾಜನಾಥ್ ಸಿಂಗ್ ಅವರ ಸಂಸದೀಯ ಮಂಡಳಿಗೆ ಮೋದಿ ಸೇರ್ಪಡೆ ಸ್ವಾಗತಾರ್ಹ ಬೆಳವಣಿಗೆ. ಆದಷ್ಟೂ ಬೇಗ ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಚರ್ಚಿಸಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕಿದೆ. ಇದು ಜನರ ಬೇಡಿಕೆ ಎಂಬುದನ್ನು ಮರೆಯುವಂತಿಲ್ಲ.

ದೇಶದ ಕೋಟ್ಯಂತರ ಹಣವನ್ನು ಲೂಟಿ ಮಾಡಿ ವಿದೇಶಿ ಬ್ಯಾಂಕ್ ಗಳನ್ನು ಪೇರಿಸಿಡುವುದು ಕಾಂಗ್ರೆಸ್ಸಿಗರ ಚಾಳಿ. ಭ್ರಷ್ಟಚಾರ, ಹಗರಣ, ಕಪ್ಪು ಹಣ ತರುವಲ್ಲಿ ವೈಫಲ್ಯತೆ, ಸಿಬಿಐ ಸಂಸ್ಥೆ ದುರ್ಬಳಕೆ ಎಲ್ಲವೂ ಜನತೆಯ ಮನಸ್ಸಿನಲ್ಲಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಬಾಬಾ ರಾಮದೇವ್ ಹೇಳಿದರು. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+