ಕುಮಾರಣ್ಣ ಜತೆ ಚುನಾವಣಾ ಮೈತ್ರಿ ಗ್ಯಾರಂಟಿ: ರಾಮುಲು

bsr-cong-jds-pre-poll-alliance-on-cards-sreeramulu
ಬೆಂಗಳೂರು‌, ಏ.1: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮಧ್ಯೆ ಚುನಾವಣೆ ಪೂರ್ವ ಮೈತ್ರಿ ನಿಶ್ಚಿತ ಎಂದು ಬಿಎಸ್‌ಆರ್ ಸಂಸ್ಥಾಪಕ ಬಿ ಶ್ರೀರಾಮುಲು ಪುನರುಚ್ಚರಿಸಿದ್ದಾರೆ.

ಎರಡೂ ಸಮಾನಮನಸ್ಕ ಪಕ್ಷಗಳಾಗಿವೆ. ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಕರ್ನಾಟಕಕಕ್ಕೆ ಅನಿವಾರ್ಯವಾಗಿದೆ. ರಾಜ್ಯದ ಹಿತ ಕಾಪಾಡಲು ರಾಷ್ಟ್ರೀಯ ಪಕ್ಷಗಳನ್ನು ಸೋಲಿಸುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದ ರಾಮುಲು, ಈ ಗುರಿ ಸಾಧನೆಗಾಗಿ ಜೆಡಿಎಸ್ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಮಧ್ಯೆ ಮೈತ್ರಿ ಅನಿವಾರ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

ಹತ್ತು/ನೂರು ಸ್ಥಾನಗಳು ಅಂತಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಹೊಂದಾಣಿಕೆ ನಡೆಯಲಿದೆ. ನಮ್ಮ ಪಕ್ಷದ ಪ್ರಮುಖರು ಕುಮಾರಸ್ವಾಮಿ ಜತೆ ಚರ್ಚೆಯಲ್ಲಿದ್ದಾರೆ. ಅದು ಫಲಪ್ರದವಾದ ಬಳಿಕ ನಾನು ಮತ್ತು ಕುಮಾರಸ್ವಾಮಿಯವರು ಕುಳಿತುಕೊಂಡು ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಬಿಎಸ್‌ಆರ್‌ ಹೊಂದಾಣಿಕೆ ಅಗತ್ಯ ಜೆಡಿಎಸ್‌ಗಿಲ್ಲ:
ಆದರೆ BSR Congress ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಇನ್ನೂ ಗೊಂದಲ ಇದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಬಿಎಸ್‌ಆರ್‌ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಜೆಡಿಎಸ್‌ಗಿಲ್ಲ. ಆದರೆ ಬಿಎಸ್‌ಆರ್‌ ಕಾಂಗ್ರೆಸ್‌ನ ಹಿತೈಷಿಗಳು ಮೈತ್ರಿಗೆ ಆಸಕ್ತಿ ತೋರಿದ್ದು, ಚರ್ಚೆ ನಡೆಸಿದ್ದಾರೆ. ಅದು ಇನ್ನು ಚರ್ಚೆಯ ಹಂತದಲ್ಲಿದೆ. ಪಕ್ಷದ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಎಸ್‌ಆರ್ ಕಾಂಗ್ರೆಸ್ ಜತೆ ಹೊಂದಾಣಿಕೆಯಿಲ್ಲ:
ಮಾಜಿ ಪ್ರಧಾನಿ ದೇವೇಗೌಡ ಅವರು ರಾಮುಲು ಕುಮಾರಸ್ವಾಮಿ ನಡುವೆ ಸೌಜನ್ಯದ ಭೇಟಿ ನಡೆದಿದೆಯಷ್ಟೇ. ಚುನಾವಣೆ ಪೂರ್ವ ಹೊಂದಾಣಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಬೆಳಗಾವಿಯ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+