ಮಂಗಳೂರು : ವ್ಯಕ್ತಿಯ ಮೇಲೆ ಗುಂಡಿನ ದಾಳಿ

firing
ಮಂಗಳೂರು, ಮಾ. 31 : ಮಂಗಳೂರಿನ ಕದ್ರಿಯಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯಕ್ಕೆ ಬಂದಿದ್ದ ಪ್ರಕಾಶ್ ಶೇರಿಗಾರ್ ಎನ್ನುವ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಯಾವುದೇ ಅಪಾಯವಾಗದಂತೆ ಅವರು ಪಾರಾಗಿದ್ದಾರೆ.

ಕದ್ರಿ ದೇವಾಲಯಕ್ಕೆ ಬಂದಿದ್ದ ನಗರದ ಅವಿನಾಶ್ ಟೈಲ್ಸ್ ಅಂಗಡಿ ಮಾಲೀಕರಾದ ಪ್ರಕಾಶ್ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ದಾಳಿ ನಡೆಸಿದ್ದಾರೆ. ದೇವರ ದರ್ಶನ ಪಡೆದು ಹೊರಗೆ ಬರುತ್ತಿದ್ದಾಗ ಗುಂಡಿನ ದಾಳಿ ನಡೆದಿದ್ದು, ಗುರಿ ತಪ್ಪಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಪ್ರಕಾಶ್ ಅಕ್ಕಪಕ್ಕ ಗುಂಡುಗಳು ಹಾದು ಹೋಗಿದ್ದು, ಘಟನೆಗೆ ನಿರ್ಧಿಷ್ಟ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಸಿಡಿದ ಗುಂಡಿನ ಕಾರ್ಟಿಡ್ಜ್ ಗಳು ಪತ್ತೆಯಾಗಿವೆ. ಹಫ್ತಾ ವಸೂಲಿ ಮಾಡಲು ಬೆದರಿಕೆ ಒಡ್ಡಲು ಇಂತಹ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೇವಾಲಯದ ಆವರಣದಲ್ಲಿ ಸಿಸಿಟಿವಿ ಇದ್ದು, ಅದರ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.

ಪ್ರಕಾಶ್ ನಗರದ ಪ್ರಖ್ಯಾತ ಉದ್ಯಮಿಯಾಗಿದ್ದು ಅವರನ್ನು ಬೆದರಿಸಲು ಇಂತಹ ದಾಳಿ ನಡೆಸಿದ್ದಾರೆಯೇ? ಅಥವ ಭೂಗತ ಪಾತಕಿಗಳ ಸಹಚರರ ಕೃತ್ಯವಿದಾಗಿರಬಹುದೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+