Get Updates
Get notified of breaking news, exclusive insights, and must-see stories!

'ಗುಂಡುಗಲಿ' ಸಿಸಿ ಪಾಟೀಲ್ ಬಿಜೆಪಿ ಬಿಡೋಲ್ಲ

Gadag Naragunda MLA SS Patil to contest from BJP only
ನರಗುಂದ, ಮಾ.28: ಹತ್ತು ದಿನಗಳ ಹಿಂದೆ ಗುಂಡೇಟು ತಿಂದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಸಿಸಿ ಪಾಟೀಲ ಅವರು ಬಿಜೆಪಿ ಬಿಡುವುದಿಲ್ಲ ಎಂದು ತಮ್ಮ ಸೋದರನ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕುತೂಹಲದ ಸಂಗತಿಯೆಂದರೆ ಯಡಿಯೂರಪ್ಪನವರ ಆಪ್ತ, ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಸಿಸಿ ಪಾಟೀಲ ಅವರು ಕೆಜೆಪಿ ಸೇರುತ್ತಾರೆ ಎಂದು ಭಾರಿ ಗಾಳಿ ಸುದ್ದಿ ಹಬ್ಬಿತ್ತು. ಇದೇ ವೇಳೆ ಬಿಜೆಪಿ ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ ಅವರೂ ಪಾಟೀಲರನ್ನು ಕೆಜೆಪಿಗೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂದು ಬಿಂಬಿಸಲಾಗಿತ್ತು.

ಆದರೆ ಇದಕ್ಕೆಲ್ಲ ತೆರೆ ಎಳೆದಿರುವ ಸಿಸಿ ಪಾಟೀಲರು ಬಿಜೆಪಿಯಿಂದಲೇ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಗಿದೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಸಿಸಿ ಪಾಟೀಲರ ಸೋದರ ಅಣ್ಣಪ್ಪಗೌಡ ಪಾಟೀಲ ಅವರು ಶಾಸಕರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕ್ಷೇತ್ರದ ಜನರ ಕೋರಿಕೆಯ ಮೇರೆಗೆ ಬಿಜೆಪಿಯಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೆಲ ಮಾಧ್ಯಮಗಳಲ್ಲಿ ಶಾಸಕ ಪಾಟೀಲ ಅವರು ಕೆಜೆಪಿ ಸೇರುತ್ತಾರೆ ಎಂದು ಬಿಂಬಿಸಲಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ಜನತೆಗೆ ಯಾವುದೇ ಸಂದೇಹ ಬೇಡ ಎಂದು ಅಣ್ಣಪ್ಪಗೌಡ ಪಾಟೀಲ ಅವರು ಸ್ಪಷ್ಟಪಡಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+