ಲೋಕಸತ್ತಾ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ
ಬೆಂಗಳೂರು, ಮಾ.28 : ಲೋಕಾಯುಕ್ತ ಹುದ್ದೆ ಎಂದಿಗೂ ಖಾಲಿ ಉಳಿಯದಂತೆ ನೋಡಿಕೊಳ್ಳುತ್ತೇವೆ. ಭ್ರಷ್ಟ್ರಾಚಾರ ರಹಿತ ಕರ್ನಾಟಕ ನಮ್ಮ ಗುರಿ ಎನ್ನುವ ಘೋಷ ವಾಕ್ಯವುಳ್ಳ ಲೋಕಸತ್ತಾ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 25 ರಿಂದ 35 ಕ್ಷೇತ್ರಗಳಲ್ಲಿ ಲೋಕಸತ್ತಾ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಶ್ವಿನ್ ಮಹೇಶ್ ಹೇಳಿದ್ದಾರೆ.
ಮೊದಲನ ಪಟ್ಟಿಯಲ್ಲಿ 4 ಅಭ್ಯರ್ಥಿಗಳನ್ನು ಹೆಸರಿಸಲಾಗಿತ್ತು. ಡಾ. ಅಶ್ವಿನ್ ಮಹೇಶ್(ಬೊಮ್ಮನಹಳ್ಳಿ), ಶಾಂತಲಾ ದಾಮ್ಲೆ(ಬಸವನಗುಡಿ), ಡಾ. ಮೀನಾಕ್ಷಿ ಭರತ್(ಮಲ್ಲೇಶ್ವರ) ಹಾಗೂ ರವಿಕೃಷ್ಣಾರೆಡ್ಡಿ(ಬಿಟಿಎಂ ಲೇಔಟ್). ಈಗಿನ ಪಟ್ಟಿ ಸೇರಿ ಒಟ್ಟಾರೆ 15 ಅಭ್ಯರ್ಥಿಗಳ ಹೆಸರನ್ನು ಅಂತ್ಯಗೊಳಿಸಲಾಗಿದೆ.

ಪಕ್ಷದ ಅಭ್ಯರ್ಥಿಗಳು ಮತ್ತು ಕ್ಷೇತ್ರದ ವಿವರ ಇಂತಿದೆ: ಪಕ್ಷದ ಪರಿಚಯ ಇಲ್ಲಿದೆ
* ನವೀನ ಸಿ.ಕೆ (ಕೃಷ್ಣರಾಜ)
* ಶ್ರೀಧರ ಪಬ್ಬಿಸೆಟ್ಟಿ (ಹೆಬ್ಬಾಳ),
* ಸುಮಿತ್ರಾ ಐಯಂಗಾರ್ (ಪದ್ಮನಾಭನಗರ)
* ರಾಜಶ್ರೀ ಮುರಳೀಧರ್ (ಮಹಾಲಕ್ಷ್ಮಿ ಲೇಔಟ್),
* ರೂಪ ರಾಣಿ (ರಾಜಾಜಿನಗರ)
* ಶಂಕರಲಿಂಗೇಗೌಡ (ಚಿಕ್ಕಮಗಳೂರು),
* ಮಹದೇವಪ್ಪ ಗೌಡ (ಸಿರಾ)
* ವಸಂತ ದಳವಾಯಿ (ಅಥಣಿ)
* ರಾಮಣ್ಣ ಆರ್ ಎಚ್ ಜೆ (ರಾಯಚೂರು ನಗರ)
* ಗುರುಸ್ವಾಮಿ ನಾಯಕ್ (ರಾಯಚೂರು ಗ್ರಾಮಾಂತರ)
ಲೋಕಸತ್ತಾ ಪಕ್ಷದ ಅಭ್ಯರ್ಥಿಗಳು ಯಾವುದೇ ಆಸೆ ಆಮಿಷಗಳನ್ನು ಒಡ್ಡದೆ, ಮತ ಖರೀದಿಸದೆ ಮತ್ತು ಚುನಾವಣಾ ಆಯೋಗದ ಮಿತಿಯೊಳಗೆ ಖರ್ಚು ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ನಾವು ಕಳೆದ 65 ವರ್ಷಗಳಿಂದ ಭಾರತವು ಅಭಿವೃದ್ಧಿಶೀಲ ರಾಷ್ಟ್ರ ಎಂದು ಕೇಳುತ್ತಲೇ ಬಂದಿದ್ದೇವೆ ನಾವು ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ, ಮೌಲ್ಯಾಧಾರಿತ ರಾಜಕಾರಣದಿಂದ ಮಾತ್ರ ಸಾಧ್ಯ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ. ಅಶ್ವಿನ್ ಮಹೇಶ್ ಹೇಳಿದರು.
ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿಯಾದ ಶ್ರೀಧರ್ ಪಬ್ಬಿಸೆಟ್ಟಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು IIMBಯಲ್ಲಿನ ತಮ್ಮ ಉನ್ನತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಿಳಾ ಉದ್ಯಮಿಯಾಗಿ ಯಶಸ್ವಿಯಾಗಿರುವ ಸುಮಿತ್ರಾ ಅಯ್ಯಂಗಾರ್ ಅವರು ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ನವೀನ್ ಅವರು ಸ್ವಂತ ಕಂಪನಿಯೊಂದಿಗೆ ಸರ್ಕಾರೇತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ ಎಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎನ್ ಎಸ್ ಮುಕುಂದ್ ಅವರು ವಿವರಿಸಿದರು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 76765 57788
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications