ಮೈಸೂರು ಮಹಾರಾಜಾ ಕಾಲೇಜಿನಲ್ಲಿ ವಜ್ರಮಹೋತ್ಸವ

ಡೈಮಂಡ್ ಜ್ಯೂಬಿಲಿ ಆಚರಣೆಯ ಅಂಗವಾಗಿ ರಾಜ್ಯಮಟ್ಟದ ಚರ್ಚಾ ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ಒನ್ಇಂಡಿಯಾದ ಹಿರಿಯ ಸಂಪಾದಕರಾಗಿರುವ ಎಸ್.ಕೆ. ಶಾಮ ಸುಂದರ ಅವರು ಸೇರಿದಂತೆ ಅನೇಕ ಮಾಧ್ಯಮದ ದಿಗ್ಗಜರು ತಮ್ಮ ಅನುಭವವನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮ ಮಾ.28ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಯಾಗಲಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ. ಪೊನ್ನಪ್ಪ ಅವರು ಉದ್ಘಾಟಿಸಲಿದ್ದಾರೆ. ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿರುವ ಪ್ರೊ. ಲತಾ ಕೆ. ಬಿದ್ದಪ್ಪ ಮತ್ತು ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಪರಿಮಳಾ ಬಿ. ಕನ್ನೂರ್ ಅವರು ಭಾಗವಹಿಸುತ್ತಿದ್ದಾರೆ.
'ಇಂದಿನ ಮಾಧ್ಯಮದ ಟ್ರೆಂಡ್' ಬಗ್ಗೆ ಒನ್ಇಂಡಿಯಾದ ಸಂಪಾದಕ ಶಾಮ ಸುಂದರ, ಇಂಟರ್ನ್ಯಾಷನಲ್ ಪ್ಲಾಟ್‌ಫಾರಂ ಫಾರ್ ಮೀನಿಂಗ್‌ಫುಲ್ ಸಿನೆಮಾದ ಕ್ರಿಯೇಟಿವ್ ಡೈರೆಕ್ಟರ್ (ವಾಯ್ಸಿಂಗ್) ಆಗಿರುವ ಖ್ಯಾತ ಚಲನಚಿತ್ರ ನಟ ಕೆ. ಸುಚೇಂದ್ರ ಪ್ರಸಾದ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ. ದೀಪಕ್ ಅವರು ಮಾತನಾಡಲಿದ್ದಾರೆ. ನಂತರ ಮುಕ್ತವಾದ ಚರ್ಚೆ ನಡೆಯಲಿದೆ.
ಕುವೆಂಪು, ಯುಆರ್ ಅನಂತಮೂರ್ತಿ, ಎಚ್.ವೈ. ಶಾರದಾ ಪ್ರಸಾದ್, ಫೋಟೋ ಜರ್ನಲಿಸ್ಟ್ ಟಿ.ಎಸ್. ಸತ್ಯನ್, ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್, ಎಂ.ವಿ. ಗೋಪಾಲಸ್ವಾಮಿಯಂಥ ಘಟಾನುಘಟಿಗಳು ಕಲಿತಿರುವ ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಈಗ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪತ್ರಿಕೋದ್ಯಮದ ಎಲ್ಲ ಮಜಲುಗಳನ್ನು ಕಲಿಯುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯವಲ್ಲದೆ ಇತರ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೂಡ ಈ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications