ರಾಜ್ಯಸಭೆಯಲ್ಲಿ ಕ್ರಿಕೆಟ್ ದೇವರ ಕಂಡು ನಕ್ಕರು

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವಾಡುತ್ತಿರುವ ಮಾಸ್ಟ ಬ್ಲಾಸ್ಟರ್ ಸಚಿನ್ ಅವರಿಗೆ ಸಂಸತ್ತಿನ ಬಜೆಟ್ ಅಧಿವೇಶನ 2013 ರಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಧಿವೇಶನಕ್ಕೆ ಗೈರು ಹಾಜರಾಗುವ ಬಗ್ಗೆ ಮಾಹಿತಿ ನೀಡಿದ್ದ ಸಚಿನ್ ಅವರಿಗೆ ಫೆ 21 ರಿಂದ ಮಾ.7 ರ ತನಕ ರಜೆ ಮಂಜೂರಾಗಿತ್ತು.
ಆದರೆ, ರಾಜ್ಯಸಭೆಗೆ ನಾಮಾಂಕಿತ ಸದಸ್ಯರಾಗಿರುವ ಸಚಿನ್ ಅವರು ನಾಮಕಾವಸ್ತೆ ಸದಸ್ಯರಾಗಿದ್ದಾರೆ ಎಂದು ಆಡಿಕೊಂಡು ಇತರೆ ಸದಸ್ಯರು ನಗಾಡಿದ್ದಾರೆ. ಉಪ ಸಭಾಪತಿ ಪಿಜೆ ಕುರಿಯನ್ ಅವರು ಶುಕ್ರವಾರ(ಮಾ.15) ಸದನದ ಮುಂದೆ ಸಚಿನ್ ಅವರ ಗೈರು ಹಾಜರಿಯ ಬಗ್ಗೆ ಪ್ರಸ್ತಾಪಿಸುತ್ತಾ ರಜೆ ವಿಸ್ತರಣೆಗೆ ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರವಾಲ್ ಅವರು ಮಾತನಾಡಿ' ಅವರಿಬ್ಬರು ಸಂಸತ್ತಿನಲ್ಲೇ ಕಾಣಿಸಿಕೊಳ್ಳುವುದೇ ಅಪರೂಪ, ಏಕೆ ನೀವು ಅವರಿಬ್ಬರಿಗೆ ಶಾಶ್ವತವಾಗಿ ರಜೆ ನೀಡಬಾರದು' ಎಂದರು. ಸದನದಲ್ಲಿ ಎಲ್ಲೆಡೆ ನಗೆ ಅಲೆ ತೇಲಿ ಬಂದಿತು. ಹಿಂದಿ ಚಿತ್ರರಂಗದ ಹಿರಿಯ ನಟಿ ರೇಖಾ ಅವರ ಮೇಲೆ ಈ ರೀತಿ ಸಂಸದರು ಜೋಕ್ ಕಟ್ ಮಾಡಿದ್ದಾರೆ.
ರಾಜ್ಯಸಭೆಗೆ ತೆಂಡೂಲ್ಕರ್ ಹಾಗೂ ರೇಖಾ ಅವರು ನಾಮಾಂಕಿತ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಕಿರಿಕಿರಿ ಅನುಭವಿಸುತ್ತಲೇ ಬಂದಿದ್ದಾರೆ. ಸಚಿನ್ ಹಾಗೂ ರೇಖಾ ಅವರು ಕಾರಣಾಂತರದಿಂದ ಸರಿಯಾಗಿ ರಾಜ್ಯಸಭೆ ಅಧಿವೇಶನಕ್ಕೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ಏಪ್ರಿಲ್ 26 ರಂದು ಸಚಿನ್ ತೆಂಡೂಲ್ಕರ್ ಹಾಗೂ ರೇಖಾ ಅವರನ್ನು ರಾಜ್ಯಸಭೆಗೆ ನಾಮಾಂಕಿತಗೊಳಿಸಲಾಯಿತು. 39 ವರ್ಷದ ಕ್ರಿಕೆಟರ್ ಅವರು ಜೂನ್.4 ರಂದು ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ಅವರ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆಗ ಸಂಸತ್ತಿನ ಅಧಿವೇಶನ ಜಾರಿಯಲ್ಲಿರಲಿಲ್ಲ.
ಸಚಿನ್ ವಿರುದ್ಧ ಪ್ರಕರಣ: ಮಾ. 2010ರಲ್ಲಿ ಜಮೈಕಾದಲ್ಲಿ ನಡೆದ ಔತಣಕೂಟದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿ ಮೇಲೂರಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ನಲ್ಲಿ ಈ ಮೊದಲೆ ತೆಂಡೂಲ್ಕರ್ ವಿರುದ್ಧ ಕೇಸು ದಾಖಲಾಗಿತ್ತು, ಪ್ರಕರಣದ ತೀರ್ಪು ಇನ್ನೂ ಬಂದಿಲ್ಲ ಹೀಗಾಗಿ ರಾಜ್ಯಸಭೆ ಸದಸ್ಯರಾಗಲು ಅರ್ಹರಲ್ಲ ಎಂದು ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಕರಣ ನಡೆದಿತ್ತು.
ಇದೇ ರೀತಿ ಸಚಿನ್ ರಾಜ್ಯಸಭೆ ನಾಮಾಂಕಣವನ್ನು ರದ್ದುಗೊಳಿಸಬೇಕು ಎಂದು ಲಕ್ನೋದ ವಕೀಲ ಅಶೋಕ್ ಪಾಂಡೆ ಪ್ರಶ್ನಿಸಿದ್ದರು. ಸಚಿನ್ ರಾಜ್ಯಸಭೆಗೆ ಆಯ್ಕೆ ಮಾಡಲು ಕಾನೂನಿನ ತೊಡಕು ಎದುರಾಗಲಿದೆ. ಸಂವಿಧಾನದ ಪರಿಚ್ಛೇದ 80(3)ದ ಉಲ್ಲಂಘನೆ ಮಾಡಬೇಕಾಗುತ್ತದೆ ಎಂದು ವಾದಿಸಿದ್ದರು. ಆದರೆ, ಎಲ್ಲಾ ಕಾನೂನು ತೊಡಕುಗಳು ನಿವಾರಣೆಯಾಗಿ ಸಚಿನ್ ರಾಜ್ಯಸಭೆ ಪ್ರವೇಶಿಸಿದ್ದರು.
ಸಂವಿಧಾನದ ಪರಿಚ್ಛೇದ 80(3) ಸಾಹಿತ್ಯ, ಕಲೆ, ವಿಜ್ಞಾನ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಬೇಕಾಗುತ್ತದೆ. ರಾಷ್ಟ್ರಪತಿಗಳು ಸುಮಾರು 12 ಜನರನ್ನು ಈ ರೀತಿ ಆರಿಸಿ ಮೇಲ್ಮನೆಗೆ ಕಳಿಸಬಹುದಾಗಿದೆ. ಆದರೆ, ಕ್ರಿಕೆಟ್ ಆಟಗಾರ ಸಚಿನ್ ಗಾಗಿ ಸಂವಿಧಾನದ ನಿಯಮಗಳು ತಿದ್ದುಪಡಿ ಮಾಡಲಾಗಿದೆ. [ಸಚಿನ್ ಪ್ರವ್ರೇಶಕ್ಕೆ ಬಂದ ಪ್ರತಿಕ್ರಿಯೆಗಳನ್ನು ಓದಿ]
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications