ಕೋರಮಂಗಲ: 3 ದಿನದಿಂದ ಮನೆಯಲ್ಲಿ ಸತ್ತು ಬಿದ್ದಿದ್ದ ಟೆಕ್ಕಿ

ಮಂಗಳವಾರ ರಾತ್ರಿ ಮನೆಯ ಮಾಲೀಕರು ಬಾಡಿಗೆದಾರನನ್ನು ನೋಡಲು ಹೋದಾಗ ವಿಷಯ ಬಹಿರಂಗವಾಗಿದೆ. ಮಾಲೀಕರು ಶಿವರಾಂ ತಂಗಿದ್ದ ಮನೆಗೆ ತೆರಳಿ ಬಾಗಿಲು ಬಡಿದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನ ಬಂದು ಕಿಟಕಿ ಬಳಿ ಸಾಗಿದ್ದಾರೆ. ಆಗ ಅವರ ಮೂಗಿಗೆ ಹೆಣದ ವಾಸನೆ ಬಡಿದಿದೆ. ತಕ್ಷಣ ಅವರು ಕೋರಮಂಗಲ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲು ಹೊಡೆದುಹಾಕಿ ಒಳಪ್ರವೇಶಿದಾಗ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಶಿವರಾಂ ದೇಹ ಪತ್ತೆಯಾಗಿದೆ. ಡೆತ್ ನೋಟ್ ಆಗಲಿ, ಮೊಬೈಲ್, ಲ್ಯಾಪ್ ಟಾಪ್ ಆಗಲಿ ಸ್ಥಳದಲ್ಲಿ ಪತ್ತೆಯಾಗಿಲ್ಲ.
ಮೃತನ ಸಹೋದ್ಯೋಗಿಗಳು ಮತ್ತು ಪೋಷಕರು ತಿಳಿಸುವಂತೆ ಶಿವರಾಂ ಇತ್ತೀಚೆಗೆ ಕೆಲಸ ಬಿಟ್ಟುಬಿಡುವ ಮಾತನ್ನಾಡುತ್ತಿದ್ದ. ಕೆಲಸ ಬಿಟ್ಟು ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಾಗಿಯೂ ಹೇಳುತ್ತಿದ್ದ. ಜತೆಗೆ, ಸಾಫ್ಟ್ ವೇರ್ ಕ್ಷೇತ್ರವನ್ನು ಬಿಡುವುದಿಲ್ಲ ಎಂದೂ ಶಿವರಾಂ ಹೇಳುತ್ತಿದ್ದನಂತೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಶವವನ್ನು ಆತನ ಪೋಷಕರಿಗೆ ಒಪ್ಪಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications