ಟೈಟಾನಿಕ್ ನೋಡಿ ರಿಲ್ಯಾಕ್ಸ್ ಆದ ನರೇಂದ್ರ ಮೋದಿ

ಅಹಮದಾಬಾದ್, ಮಾ.12: ಏನು, ಇತ್ತ ಭಾಜಪ ಕರ್ನಾಟಕದಲ್ಲಿ ಸೋತು ಸುಣ್ಣವಾಗುತ್ತಿರುವಾಗ ಅತ್ತ ನರೇಂದ್ರ ಮೋದಿ ಪಿಕ್ಚರ್ ನೋಡಿದಿರಾ? ಎಂದು ಕೇಳಬೇಡಿ. ಏಕೆಂದರೆ ಕರ್ನಾಟಕದ ಬಿಜೆಪಿಗೂ ಗುಜರಾತಿನ ಮೋದಿ ಸಾರಥ್ಯದ ಬಿಜೆಪಿಗೂ ಅಜಗಜಾಂತರವಿದೆ.

ಏನಾಯಿತೆಂದರೆ ನಿನ್ನೆ ಬೆಳಗ್ಗೆ ಸಿಎಂ ಮೋದಿ ಟ್ವಿಟ್ಟರ್ ಸಂದೇಶವೊಂದನ್ನು ನೀಡಿದ್ದರು. 'ಇಂದು ಸಂಜೆ ನಾನು, ನನ್ನ ಶಾಸಕ ಮಿತ್ರರು ಬಹುಕಾಲದ ನಂತರ ಪಿಕ್ಚರ್ ಗೆ ಹೋಗ್ತಿದ್ದೀವಿ' ಎಂಬುದು ಅದರ ಸಾರ. ಸರಿ, ಜನ ಎಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದರು. ಇಂದು ಮೋದಿ ಪಟಾಲಂ ನೋಡೋದೇ ಗೋಧ್ರಾ ಕಥೆಯಾಧರಿಸಿದ Kai Po Che ಸಿನಿಮಾವನ್ನು ಅಂತ.

Narendra Modi watch Titanic in IMAX theatre with MLAs in Ahmedabad
ಆದರೆ ಮೋದಿ ಕಣ್ಣಿಗೆ ವಿಶೇಷ ಗ್ಲಾಸು ಧರಿಸಿ ಐಮ್ಯಾಕ್ಸ್ ನಲ್ಲಿ ಪಿಕ್ಚರ್ ನೋಡತೊಡಗಿದರು. ಅಲ್ಲಿ ಪ್ರದರ್ಶನವಾಗುತ್ತಿದ್ದುದು... ನಾವು ನೀವೆಲ್ಲ ಯಾವುದೋ ಕಾಲದಲ್ಲಿ (1997) ನೋಡಿ ಎಂಜಾಯ್ ಮಾಡಿದ್ದ ಟೈಟಾನಿಕ್. ಆದರೆ ಮೋದಿ ಸಾಹೇಬರು ಇಷ್ಟು ತಡವಾಗಿ ಆ ಅದ್ಭುತ ದೃಶ್ಯಕಾವ್ಯವನ್ನು ನೋಡೋಕ್ಕೆ ಯಾಕೆ ಹೋದರೋ ಗೊತ್ತಿಲ್ಲ. ಒಟ್ಟಿನಲ್ಲಿ, ಶಾಸಕರೊಟ್ಟಿಗೆ ಕುಳಿತು ಕೇವಲ 20 ನಿಮಿಷ ನೋಡಿ ಎದ್ದು ಬಂದಿದ್ದಾರೆ.

'ಯಾಕ್ ಸಾ, ಲಿಯೋನಾರ್ಡೋ ಡಿಕೆಪ್ರಿಯೋ ಮತ್ತು ಕೇಟ್ ವಿನ್ಸಲೆಟ್ ಜೋಡಿಯನ್ನು ನೋಡಿ (ಅದೂ 3ಡಿಯಲ್ಲಿ) ಕಣ್ಣುತಂಪು ಮಾಡಿಕೊಳ್ಳಲಿಲ್ಲವಾ?' ಅಂತ ಕೇಳಿದ್ದಕ್ಕೆ ನಾಚಿ ನೀರಾಗಿ, 'ಅಯ್ಯೋ ಪಡ್ಡೆ ಹುಡುಗುಮುಂಡೇದೇ, ನಾನು ಸಿಎಂ ಕಣ್ಲಾ, ಅಂಗೆಲ್ಲ ಪಿಕ್ಚರ್ ನೋಡ್ತಿದ್ರೆ ನಾಡನ್ನು ಆಳೋಕೆ ಆಗ್ತದಾ?' ಎಂದು 3ಡಿ ಕನ್ನಡಕ ಬಿಚ್ಚಿಟ್ಟು, ಹೊರನಡೆದೇ ಬಿಟ್ಟರಂತೆ.

ಅಂದಹಾಗೆ ಮೋದಿ ಸಾಹೇಬರು ಈ ಹಿಂದೆ ಪಿಕ್ಚರ್ ನೋಡಿದ್ದು ಗುಜರಾತಿನ ಬ್ರ್ಯಾಂಡ್ ಅಂಬಾಸಿಡರ್ ಅಮಿತಾಭ್ ಬಚ್ಚನರ ಅದ್ಭುತ ಅಭಿನಯದ, ಅದಕ್ಕಿಂತ ಹೆಚ್ಚಿಗೆ ಸಾಮಾಜಿಕ ಕಳಕಳಿಯ ಚಿತ್ರ 'ಪಾ'ವನ್ನು 2010ರಲ್ಲಿ.

ಕರ್ನಾಟಕದ ಬಿಜೆಪಿಗೆ ಕರೆಂಟ್ ಶಾಕ್: ಬಿಸಿಲುಗಾಲ ಕರ್ನಾಟಕದಲ್ಲಿ ಆಗಲೇ ತನ್ನ ಪ್ರತಾಪ ತೋರಿಸುತ್ತಿದೆ. ಇನ್ನೇನು ಕರೆಂಟ್ ಕಣ್ಣಾಮುಚ್ಚಾಲೆ ಶುರುವಾಗಲಿದೆ. ಆದರೆ ಮೋದಿ ನಾಡಿನಲ್ಲಿ ಕರೆಂಟ್ ಸಮಸ್ಯೆಯೇ ಇಲ್ಲ. ದಿನದ 24 ಗಂಟೆಯೂ ಗುಣಮಟ್ಟದ ವಿದ್ಯುತ್ ಅಲ್ಲಿ ಹರಿಯುತ್ತಿರುತ್ತದೆ. ಬೇಕಾದರೆ ಇಲ್ಲಿನ ಬಿಜೆಪಿ ಮಂದಿ ಹೋಗಿ ಅಲ್ಲಿನ ಕರೆಂಟು ವೈರುಗಳನ್ನು ಮುಟ್ಟಿ ನೋಡಬಹುದು. ಆಗ್ಲಾದರೂ ಇವರಿಗೆ ವಸಿ ಬುದ್ಧಿಬರುತ್ತೋ ಏನೂ!?

ತಾಜಾ ಏನಪಾ ಅಂದರೆ ಏನಪಾ ಅಂದರೆ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಗುಜರಾತ್‌ ಚೀನಾ ದೇಶವನ್ನೇ ಹಿಂದಿಕ್ಕಿದೆ. ಚೀನಾದ ಗೊಲ್ಮಂಡ್‌ ಸೋಲಾರ್‌ ಪಾರ್ಕಿನಲ್ಲಿ ದಿನಕ್ಕೆ 200 ಮೆವಾ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೆ ಗುಜರಾತಿನ ಪಠಾಣ್‌ ಸಮೀಪದ ಚರಂಕ ಎನ್ನುವ ಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಸೌರ ವಿದ್ಯುತ್‌ ಸ್ಥಾವರದಲ್ಲಿ 214 ಮೆವಾ ವಿದ್ಯುತ್‌ ಉತ್ಪಾದನೆಯಾಗುತ್ತಿದೆ.

ಇದು ಏಷ್ಯಾದಲ್ಲೇ ದೊಡ್ಡದು. 2,965 ಎಕರೆ ಪ್ರದೇಶದಲ್ಲಿರುವ ಈ ಸೌರ ವಿದ್ಯುತ್‌ ಸ್ಥಾವರ ಬೆಳ್ಳಿಯ ಪರದೆಯಂತೆ ಫ‌ಳಫ‌ಳ ಹೊಳೆಯುತ್ತಿದೆ. 17 ಖಾಸಗಿ ಮತ್ತು ಸರಕಾರಿ ಕಂಪನಿಗಳು ಒಟ್ಟು 9,000 ಕೋಟಿ ರೂ. ಹೂಡಿಕೆ ಮಾಡಿ ಈ ಸ್ಥಾವರವನ್ನು ಸ್ಥಾಪಿಸಿವೆ.

ರಾಷ್ಟ್ರೀಯ ಸೌರ ವಿದ್ಯುತ್‌ ಕಾರ್ಯಕ್ರಮವನ್ನು ಪ್ರಾರಂಭಿಸುವುದಕ್ಕೂ ಮುನ್ನವೇ ಮುಂದಾಲೋಚನೆಗೆ ಬಿದ್ದ ಮೋದಿ, ತಮ್ಮ ರಾಜ್ಯದಲ್ಲಿ ಸೌರ ವಿದ್ಯುತ್‌ ನೀತಿ ಆನ್ ಮಾಡಿದ್ದರು. ಹೀಗಾಗಿ ಈ ರಾಜ್ಯ ಕ್ಷಿಪ್ರವಾಗಿ ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಭಾರಿ ಪ್ರಗತಿಯನ್ನೇ ಸಾಧಿಸಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+