ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್ ಅಳಿಯನ ಬಂಧನ, ಅಮೆರಿಕಕ್ಕೆ ಭಾರಿ ಯಶಸ್ಸು

By Srinath
|
Google Oneindia Kannada News

ಲಾಡೆನ್ ಅಳಿಯನ ಬಂಧನ, ಅಮೆರಿಕಕ್ಕೆ ಭಾರಿ ಯಶಸ್ಸು
ವಾಷಿಂಗ್ಟನ್, ಮಾ.8: ಒಸಾಮಾ ಬಿನ್ ಲಾಡೆನ್ ಅಳೀಮಯ್ಯ ಸುಲೇಮಾನ್ ಅಬು ಗೈತ್ ಮತ್ತು ಅವನ ವಕ್ತಾರನನ್ನು (ಅಫಘಾನಿಸ್ತಾನದಲ್ಲಿ?) ಬಂಧಿಸಲಾಗಿದ್ದು, ಇಬ್ಬರನ್ನೂ ಅಮೆರಿಕಕ್ಕೆ ಕರೆದೊಯ್ಯಲಾಗಿದೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ನ್ಯೂಯಾರ್ಕಿನ ಕೋರ್ಟಿನಲ್ಲಿ ಇವರನ್ನು ಶುಕ್ರವಾರ ಹಾಜರುಪಡಿಸುವ ಸಾಧ್ಯತೆಯಿದೆ.

ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಲಾಡೆನ್ ಅಳಿಯನ ಬಂಧನ ಪ್ರಮುಖ ಘಟ್ಟವಾಗಿದೆ ಎಂದು ವಿಶ್ಲೇಷಿಸಲಾಗಿದ್ದು, ಭಯೋತ್ಪಾದನೆ ವಿರುದ್ಧ ಅಮೆರಿಕ ಸಾರಿರುವ ಯುದ್ಧ ಜಾರಿಯಲ್ಲಿರುತ್ತದೆ ಎಂದು ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ತಿಳಿಸಿದ್ದಾರೆ.

ಅಮೆರಿಕದ ಪ್ರಜೆಗಳನ್ನು ಕೊಲ್ಲುವುದಕ್ಕೆ ಸಂಚು ರೂಪಿಸಿದ್ದರು ಎಂದು ಅಮೆರಿಕದ ಪೊಲೀಸರು ಸುಲೇಮಾನ್ ಅಬು ಗೈತ್ ವಿರುದ್ಧ ಆರೋಪ ಮಾಡಿದ್ದಾರೆ.

ಅಮರಿಕನ್ನರನ್ನು ಭೀತಿಗೀಡುಮಾಡುವ ಮತ್ತು ನಮ್ಮ ಜವಜೀವನಕ್ಕೆ ಮಾರಕವಾಗುವ ಕ್ರೂರ, ಹಿಂಸಾತ್ಮಕ ಭಯೋತ್ಪಾದಕರಿಗೆ ಸುಲೇಮಾನ್ ಅಬು ಬಂಧನ ಮೂಲಕ ಖಡಕ್ ಸಂದೇಶ ರವಾನೆ ಮಾಡಿದ್ದೇವೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿರಲಿ ಅವರ ಹುಟ್ಟಡಗಿಸುತ್ತೇವೆ. ನ್ಯಾಐ ದೇವತೆಯ ಮುಂದೆ ಅವರನ್ನು ಹಿಡಿದು ನಿಲ್ಲಿಸುತ್ತೇವೆ' ಎಂದು ಎರಿಕ್ ಹೋಲ್ಡರ್ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳಲ್ಲಿ ಸುಲೇಮಾನ್ ಅಬು ಕಳೆದ 13 ವರ್ಷಗಳಿಂದ ಒಸಾಮಾ ಬಿನ್ ಲಾಡೆನ್ ಜತೆ ಕೆಲಸ ಮಾಡಿದ್ದಾನೆ. ಅಮರಿಕಕ್ಕೆ ದೊಡ್ಡ ಕಂಟಕವಾಗಿದ್ದ ಎಂದು ಅವರು ತಿಳಿಸಿದ್ದಾರೆ.

9/11ರ ದಾಳಿಯ ನಂತರ ಲಾಡೆನ್ ತನ್ನ ಅಳಿಮಯ್ಯ ಸುಲೇಮಾನ್ ಅಬು ಜತೆ ಮಾತನಾಡಿರುವ ಬಗ್ಗೆ ಅಧಿಕೃತ ದಾಖಲೆಗಳಿವೆ. ಅಂದು (2001 ಸೆಪ್ಟೆಂಬರ್ 12) ಭಯೋತ್ಪಾದನೆ ನಡೆಸಲು ತನಗೆ ನೆರವಾಗುವಂತೆ ಲಾಡೆನ್ ತನ್ನ ಅಳಿಯನಿಗೆ ಸೂಚಿಸುತ್ತಾನೆ. ಮತ್ತು ಸುಲೇಮಾನ್ ಅಬು ಅದನ್ನು ಒಪ್ಪಿಕೊಳ್ಳುತ್ತಾನೆ.

English summary
Osama bin Laden's son-in-law Sulaiman Abu Ghaith held, brought to US. Sulaiman Abu Ghaith, the son-in-law of Osama bin Laden and his once spokesman has been captured and brought to the US, a top federal official has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X