ಮೋಟೋರೋಲಾದಿಂದ ಸಾವಿರಾರು ಉದ್ಯೋಗ ಕಡಿತ

ಭಾರತ ಸೇರಿದಂತೆ ಯುನೈಟೆಡ್ ಸ್ಟೇಟ್ಸ್, ಚೀನಾದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಋತುವಿನಲ್ಲಿ ಘೋಷಿಸಿದ ಉದ್ಯೋಗ ಕಡಿತ ಪ್ರಕ್ರಿಯೆಯ ಮುಂದುವರೆದ ಭಾಗ ಇದಾಗಿದೆ ಎಂದು ಗೂಗಲ್ ವಕ್ತಾರೆ ನಿಕಿ ಫೆನ್ ವಿಕ್ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಮೋಟೋರೊಲಾ ತನ್ನ ಸಿಬ್ಬಂದಿಯ ಸಂಖ್ಯೆಯಲ್ಲಿ ಶೇ 20 ರಷ್ಟು(ಸುಮಾರು 4,000 ಜನ) ಸಿಬ್ಬಂದಿಯನ್ನು ಮೊಟೊರೊಲಾ ಕಳೆದುಕೊಳ್ಳಲಿದೆ. ಆದರೆ, ಪಿಂಕ್ ಸ್ಲಿಪ್ ಜೊತೆಗೆ ಹೊರ ಹೋಗುವ ಉದ್ಯೋಗಿಗಳಿಗೆ ಸೂಕ್ತ ಪ್ಯಾಕೇಜ್ ಹಾಗೂ ಇತರೆಡೆ ಉದ್ಯೋಗಿ ದೊರಕಿಸಿಕೊಡುವಲ್ಲಿ ಸಹಾಯ ಹಸ್ತ ಚಾಚಿದೆ ಎಂದು ಗೂಗಲ್ ವಕ್ತಾರರು ಹೇಳಿದ್ದರು.
ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಸಂಸ್ಥೆ ಮೊಟೊರೊಲಾ ಹ್ಯಾಂಡ್ ಸೆಟ್(ಆಂಡ್ರಾಯ್ಡ್ OS ಗಾಗಿ) ವಿಭಾಗವನ್ನು ಕಳೆದ ಮೇ ನಲ್ಲಿ 12.5 ಬಿಲಿಯನ್ ಡಾಲರ್ ನೀಡಿ ಖರೀದಿಸಿತ್ತು. ಸುಮಾರು 17,000 ಪೇಟೆಂಟ್ ಗಳು ಗೂಗಲ್ ಕೈ ಸೇರಿತ್ತು. ನಂತರ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿ ಬೆಳಸಲು ಸಂಸ್ಥೆ ಸಾಕಷ್ಟು ಶ್ರಮಿಸಿತ್ತು. ಗುರ್ ಗಾಂವ್ ನ ಕಚೇರಿಯಲ್ಲಿ ಸುಮಾರು 300 ಉದ್ಯೋಗಿಗಳಿದ್ದಾರೆ.
ಕಂಪನಿಯ ಅಂತರಿಕ ವಲಯದಲ್ಲಿ ಪಿಂಕ್ ಸ್ಲಿಪ್ ನೀಡುವ ಬಗ್ಗೆ ಹಬ್ಬಿದ್ದ ಇ ಮೇಲ್ ವಾಲ್ ಸ್ಟ್ರೀಟ್ ಜರ್ನಲ್ ಸೇರಿ ಎಲ್ಲೆಡೆ ಹಬ್ಬಿತ್ತು. ಕಂಪನಿ ನಿರ್ವಹಣೆ ವೆಚ್ಚ ಸರಿದೂಗಿಸಲು ಈ ಕ್ರಮ ಅನಿವಾರ್ಯ ಎನ್ನಲಾಗಿದೆ.
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿರುವ ಪೈಪೋಟಿ ಸುಧಾರಣೆಗಾಗಿ ಹಾಗೂ ತನ್ನ 17,000 ಪೇಟೆಂಟ್ ಗಳನ್ನು ಸಮರ್ಥವಾಗಿ ಬಳಸಲು ಮೊಟೊರೊಲಾ ಮೊಬೈಲ್ ಸಂಸ್ಥೆಯನ್ನು ಗೂಗಲ್ ಖರೀದಿಸಿತ್ತು. ಮೊಟೊರೊಲಾ ತನ್ನದೇ ಸ್ಮಾರ್ಟ್ ಫೋನ್ ಹಾಗೂ ಇತರೆ ಮೊಬೈಲ್ ಸಾಧಕಗಳನ್ನು ತಯಾರಿಸುವ ಸೌಲಭ್ಯ ಕೂಡಾ ನೀಡಲಾಗಿತ್ತು. ಆಪಲ್ ಹಾಗೂ ಸ್ಯಾಮ್ ಸಂಗ್ ಜೊತೆ ಪೈಪೋಟಿ ನಡೆಸಲು ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಮತ್ತೆ ಜಿಗಿದೇಳಲು ಮೊಟೊರೊಲಾ ಚಿಂತನೆ ನಡೆಸಿತ್ತು
1928ರಲ್ಲಿ ಶಿಕಾಗೋದಲ್ಲಿ ಆರಂಭವಾದ ಮೊಟೊರೊಲಾ, 1973ರಲ್ಲಿ ಮೊಟ್ಟಮೊದಲ ವಾಣಿಜ್ಯ ಸೆಲ್ ಫೋನ್ ಹೊರಬಿಟ್ಟಿತ್ತು. 2004ರ ಹೊತ್ತಿಗೆ Razr ಮಾಡೆಲ್ ಮೂಲಕ ಸೆಲ್ ಫೋನ್ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆಯಿತು.
ಮೊಟೊರೊಲಾ ಸಲ್ಯೂಷನ್ ಬಿಟ್ಟು ಗೂಗಲ್ ಜೊತೆ ಸೇರಿದ ಮೇಲೆ ಮೊಟೊರೊಲಾ ಮೊಬಿಲಿಟಿ ಮೊದಲ 6 ವಾರದಲ್ಲೇ 233 ಮಿಲಿಯನ್ ಡಾಲರ್ ಕಳೆದುಕೊಂಡಿತ್ತು. ಬಹುತೇಕ ತ್ರೈಮಾಸಿಕದಲ್ಲಿ ಲಾಭವಿಲ್ಲದೆ ಸಂಸ್ಥೆ ಮುಂದುವರೆಯಿತು. ಸಿಬ್ಬಂದಿ ಕಡಿತದ ನಂತರ ಉನ್ನತಾಧಿಕಾರಿಗಳ ಮಟ್ಟದಲ್ಲಿ ಕತ್ತರಿಯಾಗುವ ಸಾಧ್ಯತೆಗಳಿದೆ. ಅದರಲ್ಲೂ ಏಷ್ಯಾ ಹಾಗೂ ಭಾರತದ ಕೇಂದ್ರಗಳ ಅಧಿಕಾರಿಗಳು ಹುದ್ದೆ ತ್ಯಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications