ಈಗ ಓವೈಸಿಗೆ ತಾಲಿಬಾನ್ ಜತೆ Hotline ಬೇಕಂತೆ

ಇದನ್ನು ಹೇಳಿರುವುದು ಎಲ್ಲೋ ಹೈದರಾಬಾದಿನ ಗಲ್ಲಿಗಳಲ್ಲಿ ನಿಂತು ಹೇಳಿರುವುದಲ್ಲ. ಸಾಕ್ಷಾತ್ ಸಂಸತ್ತಿನಲ್ಲೇ, ಅದೂ ಸಂಸದರಾಗಿ ಓವೈಸಿ ಈ ಮಾತನ್ನು ಹೇಳುವ ದಾರ್ಷ್ಟ್ಯ ತೋರಿದ್ದಾರೆ. ಭಲೇ ಓವೈಸಿ!
ಇದಕ್ಕೆ ಅವರು ಕೊಟ್ಟಿರುವ ಕಾರಣವೂ ಇಂಟರೆಸ್ಟಿಂಗ್ ಆಗಿದೆ. ಏನಪಾ ಅಂದರೆ ಅಫಘಾನಿಸ್ತಾನದ ಕಾಯಕಲ್ಪಕ್ಕೆ ನಾವು ಅಷ್ಟೆಲ್ಲಾ ಖರ್ಚು ಮಾಡಿದ್ದೇವೆ. ಹಾಗಿರುವಾಗ ಅಲ್ಲಿಯೇ ಇರುವ ತಾಲಿಬಾನಿಗಳ ಜತೆ ಮಾತುಕತೆ ನಡೆಸಿದರೆ ಹೇಗಿರುತ್ತದೆ? ಮತ್ತು ಆ ಮುಕ್ತ ಅವಕಾಶ ನನಗೇ ದೊರೆತರೆ ಇನ್ನೂ ಉತ್ತಮ ಎಂದು ಅಧಮ ಐಡಿಯಾ ಕೊಟ್ಟಿದ್ದಾರೆ ಸಾಹೇಬರು.
'ಅಷ್ಟೇ ಅಲ್ಲ. ನೋಡಿ ನಾವು ಈ ತಾಲಿಬಾನಿಗಳ ಜತೆ ಮಾತುಕತೆಗೆ ಮುಂದಾಗದಿದ್ದರೆ ನೆರೆಯ ಪಾಕಿಸ್ತಾನಿಗಳು ಇದ್ದಾರಲ್ಲಾ, ಅವರೇ ನಮಗಿಂತ ಮುಂಚೆ (as if, ಇದುವರೆಗೆ ಪಾಕಿಸ್ತಾನ ತಾಲಿಬಾನಿಗಳ ಜತೆ ಕೈಜೋಡಿಸಿಯೇ ಇಲ್ಲಾಂತ!) ತಾಲಿಬಾನಿಗಳ ಜತೆ ಕೈಜೋಡಿಸಿಬಿಡುವ ಅಪಾಯವಿರುತ್ತದೆ. ಅದು ನಮಗೇ ಮುಳುವಾಗುತ್ತದೆ' ಎಂದೂ ಒವೈಸಿ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
ಒಟ್ನಲ್ಲಿ, ಇಡೀ ವಿಶ್ವದಲ್ಲಿ ಭಯೋತ್ಪಾದನೆಯ ಕಬಂದಬಾಹು ಹರಡಿರುವ ತಾಲಿಬಾನಿಗಳ ಜತೆ ಭಾರತ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸಬೇಕು ಎಂಬುದು ಓವೈಸಿ ಮಾತಿನ ತಾತ್ಪರ್ಯವಾಗಿದೆ.
ತನ್ಮೂಲಕ ಒವೈಸಿ, ಭಯೋತ್ಪಾಕ ಸಂಘಟನೆಯ ಜತೆ ಮಾತನಾಡುವ ಪ್ರಸ್ತಾವನೆಯನ್ನು ಮುಂದಿಟ್ಟ ಮೊದಲ ಸಂಸದರಾಗಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications