ಹೈ ಕಮಾಂಡ್ ಕಲ್ಚರ್ ತೊಲಗಲಿ: ರಾಹುಲ್ ಗಾಂಧಿ

Posted By:
Subscribe to Oneindia Kannada

ನವದೆಹಲಿ, ಮಾ.5: ಕಾಂಗ್ರೆಸ್ ನಲ್ಲಿರುವ ಹೈ ಕಮಾಂಡ್ ಸಂಸ್ಕೃತಿಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಅಧಿಕಾರ ವಿಕೇಂದ್ರಿಕರಣವಾಗಬೇಕು. ಪ್ರತಿಯೊಬ್ಬ ಕಾರ್ಯಕರ್ತನು ಶಕ್ತಿಕೇಂದ್ರವಾಗಬೇಕು ಎಂಬ ಇಚ್ಛೆಯಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

42 ವರ್ಷದ ಕಾಂಗ್ರೆಸ್ ನಂ.2 ನಾಯಕ ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಎಲ್ಲೆಡೆ ಬಿಂಬಿಸಲಾಗುತ್ತಿದೆ. ಈ ಬಗ್ಗೆ ರಾಹುಲ್ ಸ್ಪಷ್ಟನೆ ನೀಡಿದ್ದು, 'ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ. ನಾನು ಪ್ರಧಾನಿಯಾಗಲು ಬಯಸಿದ್ದೇನೆ ಎಂದು ಪ್ರಶ್ನೆ ಕೇಳುವುದೇ ಅಸಮಂಜಸ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಹೇಳಿಕೆ ನೀಡಿದ್ದಾರೆ.

Wrong to ask me about prime ministership: Rahul Gandhi

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೆಂದು ಪ್ರಧಾನಿ ಹುದ್ದೆಯ ಕನಸು ಕಂಡಿಲ್ಲ. ಪಕ್ಷ ನನಗೆ ಎಲ್ಲ ರೀತಿಯ ಸ್ಥಾನಮಾನ ನೀಡಿದೆ. ಆ ಜವಾಬ್ದಾರಿಯನ್ನು ವಹಿಸಿಕೊಂಡು ನಿಸ್ವಾರ್ಥವಾಗಿ ಸೇವೆಸಲ್ಲಿಸುತ್ತೇನೆ. ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದಿದ್ದಾರೆ.

ಪಕ್ಷದ ಮುಖಂಡರು ಇನ್ನು ಮುಂದೆ ನನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೆ ನೀಡಬಾರದು ಎಂದು ಇದೇ ಸಂದರ್ಭದಲ್ಲಿ ರಾಹುಲ್ ಮನವಿ ಮಾಡಿದರು. ಭವಿಷ್ಯದ ಪ್ರಧಾನಿ ಎಂದೇ ಹೇಳಲಾಗುತ್ತಿರುವ ಸೋನಿಯಾ ಪುತ್ರ ರಾಹುಲ್ ಗಾಂಧಿ ದಿಢೀರನೆ ಈ ಹೇಳಿಕೆ ನೀಡಿರುವುದು ದೆಹಲಿ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮುಂಬರುವ 2014 ಮಹಾಚುನಾವಣೆಯಲ್ಲಿ ಪಕ್ಷದ ಸಾರಥ್ಯವಹಿಸುವ ರಾಹುಲ್ ಹೆಗಲಿಗೆ ಹೊರಿಸುವ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಇಂದಿನ ಹೇಳಿಕೆ ಹಲವು ರೀತಿಯಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನಾನು ಮಧ್ಯಮ ವಲಯದ ನಾಯಕರನ್ನು ಬೆಳೆಸಲು ಮುಂದಾಗಿದ್ದೇನೆ. ಎಲ್ಲಾ ಪಕ್ಷಗಳಲ್ಲೂ ಕೆಳಮಟ್ಟದಿಂದ ಕಾರ್ಯಕರ್ತರನ್ನು ಬೆಳೆಸುವ ಕಾರ್ಯ ಕೊಂಚ ಕಷ್ಟವಾದ್ದದ್ದು. ಭಾರತದಲ್ಲಿ ಈಗ ಬಹುಜನ ಸಮಾಜವಾದಿ ಪಕ್ಷ ಒಬ್ಬ ನಾಯಕ, ಸಮಾಜವಾದಿ ಪಕ್ಷದಲ್ಲಿ ಇಬ್ಬರು ನಾಯಕರು, ಬಿಜೆಪಿಯಲ್ಲಿ 6 ಜನ ಪ್ರಮುಖ ನಾಯಕರಿದ್ದಾರೆ. ಕಾಂಗ್ರೆಸಿನಲ್ಲಿ 15 ರಿಂದ 20 ನಾಯಕರನ್ನು ಹೊಂದಿದೆ.. ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ನಾನು 720ಕ್ಕೂ ಅಧಿಕ ಶಕ್ತ ಸಂಸದರು ಹಾಗೂ 5000ಕ್ಕೂ ಅಧಿಕ ಶಾಸಕರನ್ನು ಸಂಸತ್ತಿನಲ್ಲಿ ಕಾಣಲು ಬಯಸಿದ್ದೇನೆ. ಅಧಿಕಾರ ವಿಕೇಂದ್ರಿಕರಣ, ಕಾರ್ಯಕರ್ತರ ಬೌದ್ಧಿಕ ಮಟ್ಟ ಸುಧಾರಣೆ ನನ್ನ ಗುರಿ ಎಂದಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Asking me whether you want to be Prime Minister is a wrong question," Rahul Gandhi said on Tuesday. The Congress vice president made this suo motu remark while interacting with party MPs amid growing clamour in Congress for projecting him as its prime ministerial face before the next Lok Sabha elections.
Please Wait while comments are loading...