ಕಾಂಗ್ರೆಸ್-ಬಿಎಸ್ ವೈ ದೋಸ್ತಿ ಬಗ್ಗೆ ವಾಕ್ಸಮರ

ಬೆಂಗಳೂರು, ಮಾ.3: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿ, ಡಿವಿ ಸದಾನಂದ ಗೌಡ, ವೀರಪ್ಪ ಮೊಯ್ಲಿ ಅಲ್ಲದೆ ಬಿಕೆ ಹರಿ ಪ್ರಸಾದ್ ಅವರು ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ನೀಡಿದ ಹೇಳಿಕೆಗಳನ್ನು ಪೋಣಿಸಿದರೆ ಎಲ್ಲವೂ ಕಾಂಗ್ರೆಸ್ ಎಂಬ ದಾರಕ್ಕೆ ಕೆಜೆಪಿ ಎಂಬ ಬಂಡಾಯ ಹೂವು ಕಟ್ಟಿದ ಹೂ ಮಾಲೆಯಾಗುತ್ತದೆ.

ಯಡಿಯೂರಪ್ಪ ಅವರ ಬಗ್ಗೆ ಜಗದೀಶ್ ಶೆಟ್ಟರ್ ಅವರ ನೀಡಿರುವ ಹೇಳಿಕೆ ಮುಂದೆ ಓದಿಕೊಳ್ಳಿ ಅದಕ್ಕೂ ಮುನ್ನ ಮುಂಬರುವ ಚುನಾವಣೆಯಲ್ಲಿ ನಾನೇ ಸಿಎಂ ಅಭ್ಯರ್ಥಿ ಎಂದು ಶೆಟ್ಟರ್ ಮತ್ತೊಮ್ಮೆ ಘೋಷಿಸಿದ್ದಾರೆ. ಶೆಟ್ಟರ್ ಅವರಿಗೆ ಈ ಅನುಮಾನ ಯಾಕೆ ಬಂತೋ ಗೊತ್ತಾಗಲಿಲ್ಲ. ಆದರೆ, ಕಾಂಗ್ರೆಸ್ ಗೆ ಸವಾಲು ಹಾಕುವ ಭರದಲ್ಲಿ ಈ ರೀತಿ ಹೇಳಿದರು. " ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಸಿಎಂ ಅಭ್ಯರ್ಥಿ ಯಾರು ಎಂದು ಹೆಸರಿಸಿದೆ. ಕಾಂಗ್ರೆಸ್ ಗೆ ಧೈರ್ಯವಿದ್ದರೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ'

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದರೆ ನನಗೆ ತುಂಬಾ ಸಂತೋಷವಾಗಲಿದೆ. ಮೋದಿ ಅವರಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಕರ್ನಾಟಕದ ಬಿಜೆಪಿ ಆಡಳಿತದ ಬಗ್ಗೆ(ಯಡಿಯೂರಪ್ಪ, ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್) ಮೆಚ್ಚುಗೆ ಮಾತುಗಳನ್ನಾಡಿರುವುದನ್ನು ಶೆಟ್ಟರ್ ಸ್ವಾಗತಿಸಿದರು.

ಉಳಿದಂತೆ, ಚುನಾವಣೆಗೂ ಮುನ್ನ ಶುರುವಾಗಿರುವ ಮೈತ್ರಿ ಕುರಿತಾದ ವಾಕ್ಸಮರದ ತುಣುಕುಗಳು ಇಲ್ಲಿದೆ? ಕೆಜೆಪಿ ಹಾಗೂ ಕಾಂಗ್ರೆಸ್ ಅಪಮಿತ್ರ ಮೈತ್ರಿ ನಿಜವೇ...ಮುಂದೆ ಓದಿ....

ಯಡಿಯೂರಪ್ಪ ಹೇಳಿಕೆ

ಯಡಿಯೂರಪ್ಪ ಹೇಳಿಕೆ

ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಯಡಿಯೂರಪ್ಪ ಇಲ್ಲದ ಬಿಜೆಪಿ ಬಗ್ಗೆ ಗೊತ್ತಾಗಲಿಲ್ಲ. ಚುನಾವಣೆ ಗೆಲ್ಲುವುದು ಸುಲಭವಲ್ಲ. ಯಾರ ಬೆಲೆ ಏನು ಎಂದು ಮುಂದೆ ತಿಳಿಯಲಿದೆ. ಸದಾನಂದ ಗೌಡರ ಇತ್ತೀಚಿನ ಹೇಳಿಕೆಗೆ ಇದು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ಪ್ರತಿಕ್ರಿಯೆ.
ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ದಾವಣಗೆರೆಯಲ್ಲಿ ಹೇಳಿಕೆ

ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷದ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಸಿಬಿಐ ಹೆದರಿಕೆಯಿಂದ ಕಾಂಗ್ರೆಸ್ ಗೆ ಶರಣಾಗಿದ್ದಾರೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು ಈಗ ಕಾಂಗ್ರೆಸ್ ಗೆ ಶರಣಾಗಿದ್ದಾರೆ ಎಂದರೆ ನೀವೆ ಊಹಿಸಿಕೊಳ್ಳಿ

ಎಚ್ ಡಿ ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ

ಕಾಂಗ್ರೆಸ್ ನಾಯಕರು ಪಕ್ಷ ಒಡೆಯಲು ಯತ್ನಿಸಿದರು. ಬಿಜೆಪಿ ಸರ್ಕಾರ ಆಡಳಿತ ಮರೆತಿದೆ. ನಾನು ಸಿಎಂ ಆಗುವುದಕ್ಕಿಂತ ಜನರ ಹಿತ ಮುಖ್ಯ. ನಾನು ಯಾರೊಂದಿಗೂ ಕೈ ಜೋಡಿಸುವುದಿಲ್ಲ. ಮೈತ್ರಿ ಸರ್ಕಾರದ ಅನುಭವ ಸರಿಯಾಗಿ ಆಗಿದೆ ಎಚ್ ಡಿ ಕುಮಾರಸ್ವಾಮಿ ಚಿಂತಾಮಣಿಯಲ್ಲಿ ಹೇಳಿಕೆ

ಬಿಕೆ ಹರಿಪ್ರಸಾದ್

ಬಿಕೆ ಹರಿಪ್ರಸಾದ್

ಬಿಜೆಪಿಗೆ ಒಳ ಒಪ್ಪಂದಗಳ ಅಭ್ಯಾಸವಿದೆ. ಅಪವಿತ್ರ ಮೈತ್ರಿ ಮಾಡಿಕೊಂಡು ಒದ್ದಾಡಿದ್ದು ಜನತೆಗೆ ಗೊತ್ತೇ ಇದೆ. ಬಿಜೆಪಿಗೆ ಇನ್ನೂ ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಕಾಡುತ್ತಿದೆ. ಕಾಂಗೆಸ್ ಏಕಾಂಗಿ ಸ್ಪರ್ಧೆ ಖಚಿತ. ಬಿಎಸ್ ಯಡಿಯೂರಪ್ಪ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಹೇಳಿದ್ದಾರೆ.

ಸದಾನಂದ ಗೌಡ

ಸದಾನಂದ ಗೌಡ

ಕೆಲವರಿಗೆ ನಿಧಾನವಾಗಿ ತಮ್ಮ ತಪ್ಪಿನ ಅರಿವಾಗಲಿದೆ. ಅವರು ಅನುಭವಿಸುತ್ತದೆ. ಕೆಜೆಪಿ ಪಂಚಾಯತಿ ಚುನಾವಣೆಯಲ್ಲೂ ಗೆಲ್ಲಲ್ಲ. ಲಕ್ಷ್ಮಿನಾರಾಯಣ ನಾಲಾಯಕ್.ಕೆಜೆಪಿಗೆ ಏಳಿಗೆಯಿಲ್ಲ. ದಿನಕ್ಕೊಬ್ಬರು ಕೆಜೆಪಿ ಬಿಡುತ್ತಿದ್ದಾರೆ. ಇದೇ ಪಕ್ಷದ ಭವಿಷ್ಯವನ್ನು ಹೇಳುತ್ತದೆ.

ದೊಡ್ಡಬಳ್ಳಾಪುರದಲ್ಲಿ ಮೊಯ್ಲಿ

ದೊಡ್ಡಬಳ್ಳಾಪುರದಲ್ಲಿ ಮೊಯ್ಲಿ

ಮೋದಿ ಪ್ರಧಾನಿಯಾದರೆ ದೇಶಕ್ಕೆ ದೇವರೇ ಗತಿ. ಮೋದಿ ಒಳ್ಳೆ ಮಾತುಗಾರ ಅಷ್ಟೇ. ಯಾವುದೇ ಕಾರಣಕ್ಕೂ ಮೋದಿ ಪ್ರಧಾನಿಯಾಗಲ್ಲ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾನುವಾರ ಮೋದಿ ಮಾಡಿದ ಭಾಷಣಕ್ಕೆ ಪ್ರತಿಯಾಗಿ ಮೋದಿ ಹೇಳಿಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+