ಕಾಂಗ್ರೆಸ್ ಹೋದ್ರೆ ಸುರಾಜ್ಯ, ಮೋದಿ ಗುಡುಗು
ನವದೆಹಲಿ, ಮಾ.3: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನೀಡಿದ 45 ನಿಮಿಷದ ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷ ವಿರುದ್ಧ ಕಿಡಿಕಾರಿದ್ದಾರೆ.
ಬ್ರಿಟಿಷ್ ಹೋದಾಗ ಸ್ವರಾಜ್ಯ, ಕಾಂಗ್ರೆಸ್ ಹೋದ್ರೆ ಸುರಾಜ್ಯ. ಪ್ರಣಬ್ ಅವರಿಗೆ ಪ್ರಧಾನಿಯಾಗುವ ಯೋಗ್ಯತೆಯಿತ್ತು, ಪ್ರಧಾನಿ ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಗಾಂಧಿ ಮನೆತನದ ಸೇವೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೊಡಗಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ನೈಟ್ ವಾಚ್ ಮನ್ ಆಗಿದ್ದಾರೆ ಎಂದು ಮೋದಿ ವ್ಯಥೆ ವ್ಯಕ್ತಪಡಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಶನಿವಾರ ಹಾಡಿ ಹೊಗಳಿ, ಮೋದಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎಂದು ಬಣ್ಣಿಸಿದ್ದರು. ರಾಜನಾಥ್ ಸಿಂಗ್ ಅವರ ಸಂಸದೀಯ ಮಂಡಳಿ ಟೀಂ ಹಾಗೂ ಚುನಾವಣಾ ಪ್ರಚಾರ ಸಮಿತಿಗೆ ಮೋದಿ ಸೇರ್ಪಡೆ ಬಗ್ಗೆ ಯಾವುದೇ ಅಪಸ್ವರ ಕೇಳಿ ಬಂದಿಲ್ಲ.
ಪ್ರಧಾನಿ ಹುದ್ದೆ, ವಾಜಪೇಯಿ, ಕಾಂಗ್ರೆಸ್ ದುರಾಡಳಿತ, ವಿವಿಧ ರಂಗಗಳಲ್ಲಿ ದೇಶದ ಪ್ರಗತಿ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಏನು ಹೇಳಿದರು. ಮುಂದಿನ ಚಿತ್ರ ಸರಣಿಯಲ್ಲಿ ಓದಿರಿ....[ಪ್ರಧಾನಿಯಾಗಲು ಮೋದಿಯೇ ಸೂಕ್ತ ಏಕೆ?]

ಗುಜರಾತ್ ಗೆಲುವು
* ಗುಜರಾತಿನ ಗೆಲುವು ಒಂದು ವ್ಯಕ್ತಿಯ ಗೆಲುವಲ್ಲ. ಬಿಜೆಪಿಯ ಕಾರ್ಯತಂತ್ರಕ್ಕೆ ಸಿಕ್ಕ ಹಿರಿದಾದ ಗೆಲುವು
* ಬಿಜೆಪಿ ಬಗ್ಗೆ ಜನರಿಗಿರುವ ನಂಬಿಕೆ ಹಾಗೂ ಬಿಜೆಪಿಯ ಸಮಸ್ತ ನಾಯಕರ ಮೇಲಿನ ಅಭಿಮಾನದಿಂದ ಜನ ಬೆಂಬಲ ಸಿಕ್ಕಿದೆ
* ಬಿಜೆಪಿ ಕಾರ್ಯಕರ್ತರು ಹಾಗೂ ಎಲ್ಲಾ ವರ್ಗದ ಜನತೆ ಬಯಸಿದಂತೆ ಗುಜರಾತಿನಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ.
* ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನನಗೆ ತೋರಿದ ಸ್ವಾಗತದಿಂದ ಹೃದಯ ತುಂಬಿ ಬಂದಿದೆ.

ಯುಪಿಎ ಸರ್ಕಾರಕ್ಕೆ ಧಿಕ್ಕಾರ
* ಯುಪಿಎ ಸರ್ಕಾರ ದೇಶದ ಘನತೆ, ಮರ್ಯಾದೆ ಹಾಳುಗೆಡುವಿದೆ.
* ದೇಶ ಅಭಿವೃದ್ಧಿ ಮಾಡುವುದು ಕಾಂಗ್ರೆಸ್ಸಿಗರ ರಕ್ತದಲ್ಲೇ ಇಲ್ಲ. ಸಮಸ್ಯೆ ಹುಟ್ಟು ಹಾಕುವುದೇ ಅವರ ಕೆಲಸ
* ದೇಶದಲ್ಲಿ ಆಹಾರ ಕೊರತೆ, ಬಡವರಿಗೆ ಇನ್ನಷ್ಟು ಕಷ್ಟಕೊಡುವುದೇ ಯುಪಿಎ ಸಾಧನೆ
* ಯುಪಿಎ ಸರ್ಕಾರ ತೊಲಗಿಸುವುದೇ ನಮ್ಮ ಗುರಿ

ಪ್ರಧಾನಿ ನೈಟ್ ವಾಚ್ ಮನ್
* ಸೀತಾರಾಮ್ ಕೇಸರಿ ಅವರು ನೈಟ್ ವಾಚ್ ಮನ್ ರೀತಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ನೆನಪಿರಬೇಕಲ್ಲ. ಅದೇ ರೀತಿ ಪ್ರಧಾನಿ ಮನ ಮೋಹನ್ ಸಿಂಗ್ ಅವರನ್ನು ಕೂರಿಸಲಾಗಿದೆ.
* ಗಾಂಧಿ ಕುಟುಂಬ ಏನು ಮಾಡಿದರೂ ಮಾತನಾಡದ ಮೌನಿಯನ್ನು ಪ್ರಧಾನಿಯನ್ನಾಗಿಸಲಾಗಿದೆ. ನೈಟ್ ವಾಚ್ ಮನ್ 'night' ತುಂಬಾ ದೊಡ್ಡದಾಗಿದ್ದು ದುರಂತ.

ಕುಟುಂಬ ರಾಜಕಾರಣ
* ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ದೇಶಕ್ಕಿಂತ ಕುಟುಂಬದ ಹಿತವೇ ಅವರಿಗೆ ಮುಖ್ಯ.
* ಎಂಎಂ ಸಿಂಗ್ ಬದಲು ಪ್ರಣಬ್ ಮುಖರ್ಜಿ ಪ್ರಧಾನಿಯಾಗಿದ್ದರೆ ಸಹಿಸಬಹುದಿತ್ತು.
* ಪ್ರಣಬ್ ಜನರ ಪ್ರಧಾನಿಯಾಗಿರುತ್ತಿದ್ದರು, ಕುಟುಂಬದ ಪ್ರಧಾನಿಯಾಗಿರುತ್ತಿರಲಿಲ್ಲ.
* ಕುಟುಂಬದ ವಿರುದ್ಧ ನಿಲ್ಲುವವರು, ರಾಜಕೀಯವಾಗಿ ಬೆಳೆಯುವವರನ್ನು ಮುಗಿಸಲು ಕೈ ಪಡೆ ಸದಾ ಸಜ್ಜಾಗಿರುತ್ತೆ

ಭಾರತ ಸೂಪರ್ ಪವರ್
* ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಭಾರತವನ್ನು ಸೂಪರ್ ಪವರ್ ಎನ್ನಲಾಗಿತ್ತು.
* ಈಗ ಯುಎಸ್, ಚೀನಾ, ಯುರೋಪಿಯನ್ ಯೂನಿಯನ್ ಸೂಪರ್ ಪವರ್ ಆಗಿದ್ದು, ನಂತರದ ಸ್ಥಾನಕ್ಕೆ ಭಾರತ ಕುಸಿದಿದೆ.
* 2004ರ ನಂತರ ಭಾರತ ತನ್ನ ಜಾಗತಿಕ ಸ್ಥಾನಮಾನದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಇದಕ್ಕೆ ಯುಪಿಎ ನೇರ ಕಾರಣ

ಒಳ್ಳೆ ಆಡಳಿತ
* ಕಾಂಗ್ರೆಸ್ ಸರ್ಕಾರಗಳು 45-50 ವರ್ಷಗಳಲ್ಲಿ ನೀಡಲು ಸಾಧ್ಯವಾಗದ ಆಡಳಿತ ಬಿಜೆಪಿ ನೀಡಿದೆ.
* ಜನರ ಏಳಿಗೆಗೆ ಶ್ರಮಿಸದಿದ್ದರೆ ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಭಾರತದ ಸ್ಥಾನ ಮಾನ ಕುಸಿಯಲಿದೆ.
* ಬ್ರಿಟಿಷ್ ಹೋದಾಗ ಸಿಕ್ಕಿದ್ದು ಸ್ವರಾಜ್ಯ, ಕಾಂಗ್ರೆಸ್ ಹೋದರೆ ಸಿಗಲಿದೆ ಸುರಾಜ್ಯ

ವಾಜಪೇಯಿ ನಮಗೆ ಮಾದರಿ
* ಬಿಜೆಪಿಗೆ ಮತ ದೇಶದ ಹಿತ ಎಂಬ ವಾಕ್ಯದಂತೆ ವಾಜಪೇಯಿ ಅವರು ಆಡಳಿತ ನಡೆಸಿದರು. ಅವರೇ ರಿಯಲ್ ಪ್ರಧಾನಿ.
* ವಾಜಪೇಯಿ ಅಧಿಕಾರ ಅವಧಿಯಲ್ಲಿ ಕೈಗೊಂಡ ಅಣುಪರೀಕ್ಷೆ ದೇಶದ ಬಗ್ಗೆ ಬಿಜೆಪಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ.
* ವಾಜಪೇಯಿ ಅಧಿಕಾರ ನಂತರ ಬಿಜೆಪಿ ಆಡಳಿತ ಇರುವ ರಾಜ್ಯಗಳನ್ನು ಅಭಿವೃದ್ಧಿಯಿಂದಲೇ ಗುರುತಿಸುವಂತಾಗಿದೆ.

ಗುಜರಾತ್ ಅಭಿವೃದ್ಧಿ
* ನಾನು ಸಿಎಂ ಆದಾಗ, 6700 ಕೋಟಿ ವಿತ್ತೀಯ ಕೊರತೆ ಇತ್ತು. ಈಗ 400 ಕೋಟಿ ಹೆಚ್ಚುವರಿ ಹಣ ಉಳಿತಾಯವಾಗುತ್ತಿದೆ.
* ಗುಜರಾತ್ ವಿದ್ಯುತ್ ಕಂಪನಿಗೆ ವಾರ್ಷಿಕ 2500 ಕೋಟಿ ನಷ್ಟವಿತ್ತು. ಈಗ 700 ಕೋಟಿ ಲಾಭದಲ್ಲಿ ನಡೆಯುತ್ತಿದೆ. ಸೋರಿಕೆ ತಡೆಗಟ್ಟಲಾಗಿದೆ.
* ಸರ್ಕಾರಿ ಸ್ವಾಮ್ಯದ ಕಂಪನಿಗಳು ಲಾಭದಲ್ಲಿ ನಡೆಯಬಹುದು ಎನ್ನುವುದಕ್ಕೇ ಗುಜರಾತ್ ಸಾಕ್ಷಿ

ಯುಪಿಎ ಆರ್ಥಿಕ ನೀತಿ
* ಆರ್ಥಿಕ ತಜ್ಞರ ಪಡೆ ಹೊಂದಿರುವ ಕಾಂಗ್ರೆಸ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಾಳುಗೆಡವಿದೆ. ಜಿಡಿಪಿ
* ಸುಧಾರಣೆ ಬಗ್ಗೆ ಮಾತನಾಡುವುದು ಸುಲಭ. ಆದರೆ, ಯೋಜನೆಗಳ ಅನುಷ್ಠಾನ ತುಂಬಾ ಕಷ್ಟ.
* ಸರ್ವ ಜನಾಂಗೀಯ ಅಭಿವೃದ್ಧಿ ಸಾಧ್ಯವಾಗುವುದು ದೇಶದ ಉತ್ಪಾದನೆ ಹೆಚ್ಚಾದಾಗ, ಬರೀ ವಿದೇಶಿ ಬಂಡವಾಳದಿಂದ ಏನು ಸಾಧ್ಯವಿಲ್ಲ.
* BJP is for mission, Congress is for commission

ಕಾಂಗ್ರೆಸ್ ತೊಲಗಿಸಿ
* ಬಿಜೆಪಿ ಅಭಿವೃದ್ಧಿ ಮಂತ್ರ ಜಪಿಸಿದರೆ, ಯುಪಿಎ ನಲ್ಲಿ ಬೆಲೆ ಏರಿಕೆ ಮಂತ್ರ ಅಭ್ಯಾಸವಾಗಿದೆ.
* ದೇಶ ಎಂದೂ ಕೇಳರಿಯಲದಷ್ಟು ಪ್ರಮಾಣದ ಹಗರಣಗಳು ಬೆಳಕಿಗೆ ಬಂದಿದೆ.
* ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ತೊಲಗಿಸಿದರೆ ದೇಶ ಪ್ರೇಮ ಮೆರೆದಂತಾಗುತ್ತದೆ.

ಪ್ರಧಾನಿ ಹುದ್ದೆ
* ಪಕ್ಷದ ಹಿತಕ್ಕಾಗಿ ಯಾವ ಹುದ್ದೆ ನೀಡಿದರೂ ನಮ್ರವಾಗಿ ಒಪ್ಪಿಕೊಳ್ಳಬೇಕು ಎಂಬ ಶಿಸ್ತು ಪಕ್ಷ ಕಲಿಸಿದೆ.
* ಕೇಂದ್ರದಲ್ಲಿ ಒಬ್ಬ ಸಮರ್ಥ ರಾಜಕಾರಣಿಯಿಂದ ದೇಶದ ಭವಿಷ್ಯವನ್ನು ಬದಲಾಯಿಸಲು ಸಾಧ್ಯ.
* ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಛತ್ತೀಸ್ ಗಢ ಸಿಎಂ ರಮಣ್ ಸಿಂಗ್ ಕೈಗೊಂಡ ಕ್ರಮಗಳನ್ನು ಸ್ವಾಗತಿಸುತ್ತೇನೆ.
* ವಾಜಪೇಯಿ ಅವರ ಆಡಳಿತ ದಕ್ಷತೆ, ಸರಿಯಾದ ಸಮಯಕ್ಕೆ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ನನಗೆ ಸ್ಪೂರ್ತಿಯಾಗಿದೆ.

ಮೋದಿ ಸಾರಥ್ಯಕ್ಕೆ ಜೈ
ಕರ್ನಾಟಕ, ಆಂಧ್ರಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ, ದೆಹಲಿಯಲ್ಲಿನ ವಿಧಾನಸಭೆ ಚುನಾವಣೆಗೆ ನರೇಂದ್ರಮೋದಿ ಅವರನ್ನು ಚುನಾವಣಾ ಪ್ರಚಾರಕ್ಕೆ ಹೆಚ್ಚು ಬಳಸಿಕೊಳ್ಳಬೇಕು. ಚುನಾವಣಾ ಪ್ರಚಾರದ ಸಂಪೂರ್ಣ ಸಾರಥ್ಯ ಮೋದಿ ಅವರಿಗೆ ನೀಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.

ಹೈ ಕಮಾಂಡ್ ಗೂ ಮೋದಿ ಅಚ್ಚುಮೆಚ್ಚು
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ನಿತಿನ್ ಗಡ್ಕರಿ ಅವರ ನಿರ್ಗಮನದ ನಂತರ ಪಟ್ಟಕ್ಕೆ ಬಂದ ರಾಜನಾಥ್ ಸಿಂಗ್ ಅವರು ಮೋದಿ ಪರವಾಗಿ ಅನೇಕ ಬಾರಿ ಹೇಳಿಕೆ ನೀಡಿದ್ದಾರಲ್ಲದೆ, ಮೋದಿ ಅವರಿಗೆ ರಾಷ್ಟ್ರ ಮಟ್ಟದ ವೇದಿಕೆ ಒದಗಿಸಲು ಪಕ್ಷ ಸಿದ್ಧ ಎಂದಿದ್ದಾರೆ. ಪಕ್ಷದ ಅಧ್ಯಕ್ಷರೇ ಮೋದಿ ಪರ ಇರುವಾಗ ಮೋದಿ ಮುಂದಿನ ಪಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗುವ ಹಾದಿ ಸುಲಭವಾಗುತ್ತದೆ.

ಸರ್ವ ಜನಾಂಗದ ಬೆಂಬಲ
ಇತ್ತೀಚೆಗೆ ಗುಜರಾತಿನಲ್ಲಿ ಮುಸ್ಲಿಂ ಬಾಂಧವರು ಮೋದಿ ಪರ ತೋರಿಸಿರುವ ಒಲವು ಮೈತ್ರಿಪಕ್ಷಗಳ ಸದ್ದಡಗಿಸಿದೆ. ಸ್ಥಳೀಯ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಶೇ 90 ರಷ್ಟು ಮುಸ್ಲಿಂ ಜನಾಂಗ ಹೊಂದಿರುವ ದ್ವಾರಕ ಜಿಲ್ಲೆಯಲ್ಲಿ 27 ಸೀಟು ಗೆದ್ದ ಮೋದಿ ಬಗ್ಗೆ ಎನ್ ಡಿಎ ಮಿತ್ರ ಪಕ್ಷಗಳು ಕೂಡಾ ಮೃದು ಧೋರಣೆ ತಾಳುವಂತೆ ಮಾಡಿದೆ.












Click it and Unblock the Notifications