ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ WFH ನಿರ್ಬಂಧಕ್ಕೆ ಪ್ರತಿರೋಧ

By Mahesh
|
Google Oneindia Kannada News

Marissa Mayer, Yahoo
ಬೆಂಗಳೂರು, ಫೆ.27: ಗೂಗಲ್ ನ ಪ್ರಭಾವಿ ಉದ್ಯೋಗಿಯಾಗಿದ್ದ ಮಾರಿಸ್ಸಾ ಮೇಯರ್ ಯಾಹೂ ಸಂಸ್ಥೆ ಸಿಇಒ ಆದಾಗ ಎಲ್ಲರೂ ಕೊಂಡಾಡಿದ್ದರು. ಆದರೆ, ಮಾರಿಸ್ಸಾ ಕೈಲಿ ಬೆತ್ತ ಹಿಡಿದು ಉದ್ಯೋಗಿಗಳಿಗೆ ಕಟ್ಟುನಿಟ್ಟಾದ ನಿಯಮ ಹೇರುತ್ತಿದ್ದಂತೆ ಎಲ್ಲರೂ ಉರಿದು ಬೀಳುತ್ತಿದ್ದಾರೆ.

ಯಾಹೂ ಅಂತರ್ಜಾಲ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಮೇಯರ್ ಹಲವು ಹೊಸ ಬಗೆ ಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕಳೆದ ವರ್ಷಾಂತ್ಯದ ತನಕ ಸ್ವಚ್ಛಂದ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯಾಹೂ ಉದ್ಯೋಗಿಗಳಿಗೆ ಈ ಮಾರಿಸ್ಸಾ ರೂಲ್ಸ್ ಕಿರಿಕಿರಿ ಉಂಟು ಮಾಡಿದೆ.

ಉಚಿತ ಆಹಾರ, ಪ್ಲೇಬುಕ್ ವುಳ್ಳ ಸ್ಮಾರ್ಟ್ ಫೋನ್ ಬಳಕೆ ಎಲ್ಲವೂ ಕಟ್ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ Work From Home ಎಂಬ ಅದ್ಭುತ ಸೌಲಭ್ಯಕ್ಕೂ ಮಾರಿಸ್ಸಾ ಕತ್ತರಿ ಹಾಕಿದ್ದಾರೆ. ಇದು ಉದ್ಯೋಗಿಗಳ ವಿರೋಧಕ್ಕೆ ಕಾರಣವಾಗಿದೆ.

ಕಚೇರಿಯಲ್ಲಿ ಸಹದ್ಯೋಗಿಗಳ ಜೊತೆ ಬೆರೆತು ಅಭಿಪ್ರಾಯ ವಿನಿಯಮಯ ಮಾಡಿಕೊಳ್ಳುವ ಅವಕಾಶವನ್ನು WFH ಹಾಳುಗೆಡವಿಸಿದೆ. ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವುದೇ ಪರಿಣಾಮಕಾರಿ ಎಂದು ಯಾಹೂ ಎಚ್ ಆರ್ ಎಲ್ಲರಿಗೂ ಲೆಟರ್ ಶೂಟ್ ಮಾಡಿದ್ದಾರೆ.

ಮಾರಿಸ್ಸಾ ಏಕೆ ಹೀಗೆ?: ಎಲ್ಲರಿಗೂ ಗೊತ್ತಿರುವಂತೆ ಗೂಗಲ್ ನಲ್ಲಿ ಅತ್ಯಂತ ಉದ್ಯೋಗಿ ಸ್ನೇಹಿ ವಾತಾವರಣವಿದ್ದು, ಸ್ವಚ್ಛಂದ ಪರಿಸರವಿರುವುದರಿಂದ ಕಾರ್ಯಕ್ಷಮತೆಯೂ ಹೆಚ್ಚಾಗುತ್ತಿದೆ ಎಂದು ಎಲ್ಲಾ ಸಮೀಕ್ಷೆಗಳು ಹೇಳಿದೆ. ಇದೇ ಪರಿಸರದಲ್ಲಿ ಗೂಗಲ್ ನ ಹಲವು ಉತ್ಪನ್ನಗಳನ್ನು ಹೊರ ಬಂದ ಮಾರಿಸ್ಸಾ ಈಗ ವಿರೋಧಿ ಸಂಸ್ಥೆಗೆ ಕಾಲಿಟ್ಟ ಮೇಲೆ ಗೂಗಲ್ ಸಂಸ್ಥೆ ಪರಿಸರಕ್ಕೆ ತದ್ವಿರುದ್ಧವಾದ ವಾತಾವರಣ ಸೃಷ್ಟಿಸುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಯಾಹೂ ಒಂದೇ ಅಲ್ಲ. ಬ್ಯಾಂಕ್ ಆಫ್ ಅಮೆರಿಕಾ ತನ್ನ ಉದ್ಯೋಗಿಗಳಿಗೆ ಈ ರೀತಿ ಎಲ್ಲಿಂದ ಬೇಕಾದರೂ ವರ್ಕ್ ಮಾಡುವ ಅವಕಾಶ ಕಲ್ಪಿಸಿತ್ತು. ಆದರೆ, ಈಗ ಕಚೇರಿ ಬರುವುದು ಕಡ್ಡಾಯ ಎಂದು ಹೇಳಿದೆ.

ಉದ್ಯೋಗಿಗಳು ನಿರಂತರವಾಗಿ ಮನೆಯಲ್ಲೇ ಕುಳಿತು ಕೆಲಸಮಾಡುವುದರಿಂದ ಕಚೇರಿ ಜೊತೆ ಸಂಪರ್ಕ ಕಡಿತವಾಗುತ್ತದೆ. ಸಂವಹನ ಸಮರ್ಪಕವಾಗಿ ಆಗುವುದಿಲ್ಲ. ಉದ್ಯೋಗಿ ಮೇಲೆ ನಿಯಂತ್ರಣವನ್ನು ಸಂಸ್ಥೆ ಕಳೆದುಕೊಳ್ಳುತ್ತದೆ ಎಂಬ ಆತಂಕ ಸಂಸ್ಥೆಗಳಿಗೆ ಈಗ ಶುರುವಾಗಿದೆ.

ಆದರೆ, WFH ಸೌಲಭ್ಯ ಪಡೆದ ಉದ್ಯೋಗಿಗಳು ಹೆಚ್ಚು ಕಾರ್ಯಕ್ಷಮತೆ ತೋರುತ್ತಾರೆ. ಹೆಚ್ಚಿನ ಅವಧಿ ಕೆಲಸ ಸಾಧ್ಯ. ಆದರೆ, ಕಂಪನಿ ಅಗತ್ಯಕ್ಕೆ ತಕ್ಕಂತೆ ಕಾರ್ಯ ಮಾಡಲು ಪರಸ್ಪರ ಸಂಪರ್ಕದ ಅಗತ್ಯ ಇದೆ ಎಂದು ಸ್ಯಾನ್ ಫ್ರಾನಿಸ್ಕೋ ವಿಶ್ವ ವಿದ್ಯಾಲಯದ ಮ್ಯಾನೇಜ್ಮೆಂಟ್ ಪ್ರೊಫೆಸರ್ ಜಾನ್ ಸುಲ್ಲಿವನ್ ಹೇಳಿದ್ದಾರೆ.

ಅಂದಹಾಗೆ ಕಳೆದ ವರ್ಷ ಗೂಗಲ್ ತೊರೆದು ಯಾಹೂ ಸಿಇಒ ಆದ ಮಾರಿಸ್ಸಾ ಮೇಯರ್ ಕೂಡಾ ಕೆಲಸ ಆರಂಭಿಸಿದ್ದು WFH ಸೌಲಭ್ಯದ ಮೂಲಕ ಎಂಬುದು ಗಮನಾರ್ಹ. ಯಾಹೂ ಸೇರುವ ಹೊತ್ತಿಗೆ ಗರ್ಭಿಣಿಯಾಗಿದ್ದ ಮಾರಿಸ್ಸಾ ಮನೆಯಿಂದಲೇ ಯಾಹೂ ಕಂಪನಿ ಕೆಲಸಗಳನ್ನು ಕೆಲ ತಿಂಗಳು ಮಾಡಿದ್ದರು. ಒಟ್ಟಾರೆ, ಖಡಕ್ ಸಿಇಒ ಮಾರಿಸ್ಸಾ ಮೇಲೆ ಯಾಹೂ ಸಿಬ್ಬಂದಿ ಮುನಿಸಿಕೊಂಡಿರುವುದಂತೂ ದಿಟ.

English summary
Yahoo! Chief Executive Marissa Mayer, by ordering staff to report to offices, risks losing the productivity gains that can come from flexible work arrangements and could jeopardise her ability to lure top talent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X