ಪಕ್ಷೇತರ ಅಭ್ಯರ್ಥಿಯಾಗಿ ಉಮೇಶ್ ಕತ್ತಿ ಸ್ಪರ್ಧೆ?

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಯಾವುದಾದರೂ ಪಕ್ಷಕ್ಕೆ ಪಕ್ಷಾಂತರ ಮಾಡಬೇಕೆಂದು ಉಮೇಶ್ ಕತ್ತಿ ನಿರ್ಧರಿಸಿದ್ದರು. ಬಜೆಟ್ ಅಧೀವೇಶನದ ನಂತರ ಕೆಜೆಪಿ ಸೇರುವುದಾಗಿಯೂ ಘೋಷಿಸಿದ್ದರು. ಆದರೆ, ಕೃಷಿ ಸಚಿವರ ಆಪ್ತ ಮೂಲಗಳ ಮಾಹಿತಿ ಪ್ರಕಾರ ಅವರು ಕೆಜೆಪಿಗೆ ಸೇರುತ್ತಿಲ್ಲ.
ಬಿಜೆಪಿಯಲ್ಲೇ ಉಳಿದು ಚುನಾವಣೆ ಸ್ಪರ್ಧಿಸಲು ಅವರಿಗೆ ಇಷ್ಟವಿಲ್ಲ. ಕಾಂಗ್ರೆಸ್ ಕದ ಇನ್ನೂ ತಟ್ಟಿಲ್ಲ. ಯಾವ ಪಕ್ಷಕ್ಕೂ ಸೇರದೆ ಸ್ವಂತ ಬಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಥಿಸಲು ಉಮೇಶ್ ಕತ್ತಿ ಆಲೋಚಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.
ತಮ್ಮ ಬೆಂಬಲಿಗರೊಂದಿಗೆ ಉಮೇಶ್ ಕತ್ತಿ ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವುದೇ ಪಕ್ಷಕ್ಕೆ ಸೇರದೆ, ಸ್ವಂತ ಬಲ ಮತ್ತು ವರ್ಚಸ್ಸಿನಿಂದ ಚುನಾವಣೆ ಎದುರಿಸಿ ಗೆದ್ದು ಬರಲು ಕತ್ತಿ ಯೋಜನೆ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ಕ್ಷೇತ್ರದ ಶಾಸಕರಾದ ಉಮೇಶ್ ಕತ್ತಿ ಕುಟುಂಬದವರು ತಲೆಮಾರುಗಳಿಂದ ರಾಜಕೀಯದಲ್ಲಿದ್ದಾರೆ. ಉಮೇಶ್ ಕತ್ತಿಯವರ ತಂದೆ ವಿಶ್ವನಾಥ್ ಕತ್ತಿ ಶಾಸಕರಾಗಿದ್ದರು. 1985ರಲ್ಲಿ ಅವರು ನಿಧನ ಹೊಂದಿದ ನಂತರ ನಡೆದ ಉಪಚುನಾವಣೆಯಲ್ಲಿ ಉಮೇಶ್ ಕತ್ತಿ ಶಾಸಕರಾಗಿ ಗೆದ್ದು ಬಂದರು. ನಂತರ ಅವರು ಪ್ರತಿ ಬಾರಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ.












Click it and Unblock the Notifications