ಬ್ರಿಟನ್ ಕೃಪೆ: ಬೆಂ-ಮುಂ ಮಾಯದಂಥ ಕಾರಿಡಾರ್

Posted By:
Subscribe to Oneindia Kannada
bangalore-mumbai-corridor-reality-britain-pm-cameron
ಮುಂಬೈ, ಫೆ.19: ಥ್ಯಾಂಕ್ಸ್ ಟು ಬ್ರಿಟನ್, ಬೆಂಗಳೂರು ಮತ್ತು ಮುಂಬೈ ನಡುವೆ ಮಾಯದಂಥ ಕಾರಿಡಾರ್ ಯೋಜನೆ ತಲೆಯೆತ್ತಲಿದೆ. ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಅವರು ಸೋಮವಾರ ಈ ಭಾರಿ ಉಡುಗೊರೆಯ ಮಾತನ್ನಾಡಿದ್ದಾರೆ.

ಬೆಂಗಳೂರು ಮತ್ತು ಮುಂಬೈ ಮಧ್ಯೆ 950 ಕಿಮೀ ಉದ್ದಕ್ಕೂ ಸಾಗುವ ಕಾರಿಡಾರ್ ಯೋಜನೆಯ ಮಗ್ಗುಲಲ್ಲಿ ಹೊಸ ನಗರಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಭಾರತಕ್ಕೆ ಸಹಯೋಗ ನೀಡಲು ಬ್ರಟಿನ್ ಸಿದ್ದವಿರುವುದಾಗಿ ಅವರು ವಾಗ್ದಾನ ನೀಡಿದ್ದಾರೆ.

'ಇದು ದಿಢೀರನೆ ಪ್ರಕಟಿಸಿರುವ ಯೋಜನೆಯಲ್ಲ. ವಾಸ್ತವದಿಂದ ಕೂಡಿದೆ. ಬೆಂಗಳೂರು-ಮುಂಬೈ ಕಾರಿಡಾರ್ ಯೋಜನೆಯ ಸಾಧಕ-ಬಾಧಕಗಳ ಕುರಿತು ಉಭಯ ದೇಶಗಳ ವಾಣಿಜ್ಯ ಪ್ರತಿನಿಧಿಗಳು ಕಳೆದ ಒಂದು ವರ್ಷದಿಂದ ಕಾರ್ಯಮಗ್ನರಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಡೇವಿಡ್ ಕೆಮರಾನ್ ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ವಾಣಿಜ್ಯೋದ್ಯಮಿಗಳ ಬೃಹತ್‌ ನಿಯೋಗದ ಜತೆಗೆ ಬಂದಿದ್ದಾರೆ.

ತಂತ್ರಜ್ಞಾನ ನಗರಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ಕಾರಿಡಾರ್ ಭಾರತದ ಆರ್ಥಿಕತೆ ಬೆಳವಣಿಗೆಗೆ ಪೂರಕವಾಗಲಿದೆ. ಲಕ್ಷಾಂತರ ಜನರಿಗೆ ಉದ್ಯೋಗ ಕೊಡುವ ಈ ಯೋಜನೆಯ ಜಾರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದ್ದಾರೆ.

ಯೋಜನೆಯ ಪ್ರಧಾನ ಅಂಶಗಳು:
* ಉದ್ದೇಶಿತ ಯೋಜನೆ ಸಾಕಾರಕ್ಕಾಗಿ ಬ್ರಿಟನ್ ವಾಸ್ತುಶಿಲ್ಪಿಗಳು, ಇಂಜಿನಿಯರುಗಳು ಹಾಗೂ ಹಣಕಾಸು ತಜ್ಞರು ಅಗತ್ಯ ನೆರವು.
* ಬೆಂಗಳೂರು-ಮುಂಬೈ ಮಧ್ಯೆ ಸುಮಾರು 1.35 ಲಕ್ಷ ಕೋಟಿ ರೂ. ವೆಚ್ಚದಲ್ಲಿ 9 ಜಿಲ್ಲೆ ಮತ್ತು ನಗರಗಳ ಅಭಿವೃದ್ಧಿ
* ಈ ಕಾರಿಡಾರ್ ಜಾಗದಲ್ಲಿ ಜನಸಂಖ್ಯೆ ಪ್ರಮಾಣ ಶೇ. 5.8ರಷ್ಟು ಹೆಚ್ಚಳವಾಗಲಿದೆ.
* 2020ರ ವೇಳೆಗೆ ದೇಶದ ಜಿಡಿಪಿಗೆ ಅದು ಶೇ. 11.8ರಷ್ಟು ಕೊಡುಗೆ ನೀಡಲಿದೆ.
* ಯೋಜನೆಯ ಮೊದಲ ಹಂತದಲ್ಲಿ ಸಾರಿಗೆ ಸಂಪರ್ಕ, ದೂರ ಸಂಪರ್ಕ, ವಿದ್ಯುತ್ ಯೋಜನೆಯಂಥ ಮೂಲಸೌಲಭ್ಯಗಳಲ್ಲಿ ಹೂಡಿಕೆ.
* ನಂತರ ಶಿಕ್ಷಣದಂಥ ಸಾಮಾಜಿಕ ಮೂಲಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು.
* ಯೋಜನೆಯಿಂದಾಗಿ 30 ರಿಂದ 40 ಲಕ್ಷ ಮಂದಿ ನವ ನಗರಗಳತ್ತ ವಲಸೆ ಬರಲಿದ್ದಾರೆ.
* ಪ್ರತಿ ನವ ನಗರಗಳಲ್ಲಿ 10 ಲಕ್ಷ ಮನೆಗಳು, 120 ಶಾಲೆಗಳು ಮತ್ತು 10 ಕಾಲೇಜುಗಳು ಹಾಗೂ ಆಸ್ಪತ್ರೆಗಳ ಅಗತ್ಯ ಬೀಳಲಿದೆ.
* ಇದರಿಂದ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore-Mumbai Corridor Project a reality- Britain PM Cameron. British Prime Minister David Cameron said on Monday he wanted his country's companies to help India develop new cities and districts along a 950 km (600 mile) corridor between Mumbai and Bangalore, generating investment projects worth up to $25 billion.
Please Wait while comments are loading...