ಮಡಿವಾಳ ಹಸುಳೆ ರೇಪ್-ಹತ್ಯೆ: ಪಾತಕಿ ಸಿಕ್ಕಿಬಿದ್ದ

bng-madivala-4yr-old-mamatha-molest-murder-mahesh-held
ಬೆಂಗಳೂರು, ಫೆ.15: ಕೋಡಿಚಿಕ್ಕನಹಳ್ಳಿಯಲ್ಲಿ ಹಸುಳೆಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದ ರಾಕ್ಷಸ ಪಾತಕಿಯನ್ನು ಮಡಿವಾಳ ಉಪವಿಭಾಗದ ಎಸಿಪಿ ಎಚ್ ಸುಬ್ಬಣ್ಣ ಅವರು ಮೂರೇ ದಿನದಲ್ಲಿ ಹಿಡಿದುತಂದಿದ್ದಾರೆ.

ಟಿ. ನರಸೀಪುರ ತಾಲ್ಲೂಕಿನ ಮಹೇಶ್ (19) ಬಂಧಿತ. ಗಮನಿಸಿ, ಇವನ ವಯಸ್ಸು 18 ದಾಟಿದೆ. ಇಲ್ಲಾಂದ್ರೆ 'ಬಾಲ ಅತ್ಯಾಚಾರಿ' ಎಂದು ಹಣೆಪಟ್ಟಿ ಹಚ್ಚಿಸಿಕೊಂಡು ಪ್ರಕರಣದಿಂದ ಬಚಾವಾಗಿಬಿಡುತ್ತಿದ್ದ.

ಸೋಮವಾರ ಮಧ್ಯಾಹ್ನ (ಫೆ.11) ಏನಾಗಿತ್ತೆಂದರೆ ಹೊಟ್ಟೆಪಾಡಿನ ಧಾವಂತದಲ್ಲಿದ್ದ ಮಂಡ್ಯದ ಪವಿತ್ರಾ ತನ್ನ ಮೂರನೆಯ ಮಗುವನ್ನು ಪಕ್ಕದ ಮನೆಯ ಅಜ್ಜಿಗೆ ಒಪ್ಪಿಸುತ್ತಾ 'ಮಗೂನ್ನ ನೋಡ್ಕೋಂಡಿರಿ, ಕೆಲ್ಸಕ್ಕೆ ಹೋಗಿಬರ್ತೀನಿ ಎಂದಿದ್ದರು. ಅಷ್ಟೇ. ಆಮೇಲಿನದು ಘೋರ ಪಾತಕ.

ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮಹೇಶನ ಬಾಯಿಂದಲೇ ಕೇಳಿ ಅವತ್ತು ಅವನು ಏನು 'ಮಾಡಿಕೊಂಡ' ಅಂತ:

'ಬಾಲಕಿ ಮಮತಾ ಆಟವಾಡುತ್ತಿದ್ದಳು. ಚಾಕೋಲೆಟ್ ಕೊಡ್ತೀನಿ ಬಾ ಎಂದು ಮನೆಗೆ ಕರೆದೊಯ್ದೆ. ಮನೆಯಲ್ಲಿ ಅವಳ ಮೇಲೆ ಅತ್ಯಾಚಾರ ಮಾಡಿದೆ. ಅವಳು ಕಿರುಚಿಕೊಂಡಾಗ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಶವವನ್ನು ಸಮೀಪದ ನಿರ್ಮಾಣ ಹಂತದ ಕಟ್ಟಡದ ಬಳಿ ಎಸೆದುಬಿಟ್ಟೆ.

'ನನಗೆ ಒಂದು ಕೆಟ್ಟ ಚಾಳಿಯಿತ್ತು. ಏನಪ್ಪಾ ಅಂದರೆ ದಿನಾ ಮುಷ್ಠಿಮೈಥುನ ಮಾಡಿಕೊಳ್ಳುತ್ತಿದ್ದೆ. ಆದರೆ, ಸೋಮವಾರ ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಅಲ್ಲೇ ಆಟವಾಡಿಕೊಂಡಿದ್ದ ಬಾಲಕಿ ಕಣ್ಣಿಗೆ ಬಿದ್ದಳು. 'ಅದರ' ಬದಲು ಬಾಲಕಿಯ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕು ಅಂತ ಅನಿಸಿಬಿಡ್ತು'.

'ಅದಕ್ಕೋಸ್ಕರ ಅವಳ ಮೇಲೆಲೈಂಗಿಕ ಕ್ರಿಯೆ ನಡೆಸಿದೆ. ಅವಳನ್ನು ಕೊಲ್ಲುವ ಉದ್ದೇಶವಿರಲಿಲ್ಲ. ಆದರೆ ನನಗೆ ಅರಿವಿಯೇ ಇಲ್ಲದಂತೆ ಅವಳ ಕತ್ತನ್ನು ಅಮುಕಿಬಿಟ್ಟೆ. ಇದು ನಡೆದ ಘಟನೆ' ಎಂದು ಒಂದು ದೀರ್ಘ ನಿಟ್ಟುಸಿರುಬಿಟ್ಟ ಮೈಸೂರು ಜಿಲ್ಲೆಯ ಮಹೇಶ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+