ನಿತ್ಯಾನಂದ ಸ್ವಾಮಿಗೆ ಹೊಸ ಬಿರುದು ಬಾವಲಿ!

Swami Nithyananda
ಅಲಹಾಬಾದ್ , ಫೆ. 14 : ಬಿಡದಿ ಧ್ಯಾನಪೀಠದ ವಿವಾದಿತ ಸ್ವಾಮಿ ನಿತ್ಯಾನಂದ ಅವರಿಗೆ ಮಹಾಮಂಡಲೇಶ್ವರ' ಬಿರುದು ದಯಪಾಲಿಸಲಾಗಿದೆ. ಅಲಹಾಬಾದ್ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ನಿತ್ಯಾನಂದ ಸ್ವಾಮಿಗೆ ನಾಗಾಸಾಧುಗಳ ಮಹಾನಿರ್ವಾಣಿ ಅಖಾಡ ಮಹಾಮಂಡಲೇಶ್ವರ ಎಂಬ ಬಿರುದು ಬುಧವಾರ ನೀಡಿದೆ.

ಅಖಾಡದ ಕಾರ್ಯದರ್ಶಿ ಮಹಾಂತ ರವೀಂದ್ರ ಪುರಿ ಈ ವಿಷಯವನ್ನು ತಿಳಿಸಿದ್ದು, ಕುಂಭಮೇಳದಲ್ಲಿ ದಕ್ಷಿಣ ಭಾರತದವರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳನ್ನು ಹೋಗಲಾಡಿಸಲು ನಿತ್ಯಾನಂದ ಸ್ವಾಮಿಗೆ ಬಿರುದು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಿತ್ಯಾನಂದ ಸ್ವಾಮಿಯ ವಿರುದ್ಧದ ಹಗರಣಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾಮಿಯ ಮೇಲಿನ ಆರೋಪಗಳು ವೈಯಕ್ತಿಕವಾದದು. ಅಖಾಡಕ್ಕೂ ಅದಕ್ಕೂ ಸಂಬಂಧವಿಲ್ಲ. ಅಖಾಡದಲ್ಲಿ ಪಾಲ್ಗೊಂಡಿದ್ದ ಸ್ವಾಮಿಗಳ ಒಪ್ಪಿಗೆ ಮೇರೆಗೆ ಮಹಾಮಂಡಲೇಶ್ವರ ಬಿರುದು ನೀಡಲಾಗಿದೆ ಎಂದು ಹೇಳಿದ್ದಾರೆ.

ಬಿಡದಿಯ ಧ್ಯಾನ ಪೀಠದ ನಿತ್ಯಾನಂದ ಸ್ವಾಮಿಯ ಮೇಲೆ ಅನೇಕ ಆರೋಪಗಳಿವೆ. ಆದ್ದರಿಂದ ಅವರು ಕುಂಭಮೇಳದಲ್ಲಿ ಪಾಲ್ಗೊಳ್ಳಬಾರದು ಎಂದು ಹಲವಾರು ಸಾಧು ಸಂತರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಯಾವ ವಿರೋಧಗಳನ್ನು ಲೆಕ್ಕಿಸದೆ ನಿತ್ಯಾನಂದ ಸ್ವಾಮಿ ಕುಂಭಮೇಳದಲ್ಲಿ ಪಾಲ್ಗೊಂಡು ಮೌನಿ ಅಮವಾಸ್ಯೆಯ ದಿನ ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+