ರಾಯಚೂರಿನಲ್ಲಿ ಬುಧವಾರ ಶ್ರೀರಾಮುಲು ಶಕ್ತಿ ಪ್ರದರ್ಶನ

ಲಿಂಗಸೂರು ರಸ್ತೆಯ ಸಾತ್ ಮೈಲ್ ಕ್ರಾಸ್ ಬಳಿ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುವ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಸಮಾವೇಶದ ಮೂಲಕ ಶ್ರೀರಾಮುಲು ಮೇ ತಿಂಗಳಿನಲ್ಲಿ ನಡೆಯವ ರಾಜ್ಯ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಆನಂದ್ ರಾಜ್ ಅಂಬೇಡ್ಕರ್ ಅವರು ಸಮಾವೇಶದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದಲಿತ ಸಮುದಾಯದ ವಿವಿಧ ಮಠಾಧೀಶರು, ಶ್ರೀರಾಮುಲು ಅವರ ಜೊತೆ ಗುರುತಿಸಿಕೊಂಡಿರುವ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ.
ಭರ್ಜರಿ ಸಿದ್ಧತೆ : ಮುಖ್ಯ ವೇದಿಕೆಗೆ ಹೊಂದಿಕೊಂಡಂತೆ ಬಸವ, ಬುದ್ಧ, ವಾಲ್ಮೀಕಿ, ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಂ ಅವರ ಬೃಹತ್ ಪ್ರತಿಮೆ ಸ್ಥಾಪಿಸಲಾಗಿದೆ. ಸಮಾವೇಶದಲ್ಲಿ ಕ್ರಾಂತಿ ಗೀತೆಗಳನ್ನು ಹಾಡಲು ವಿವಿಧ ಕಲಾ ತಂಡಗಳನ್ನು ಕರೆಸಲಾಗಿದೆ. ಬೆಂಗಳೂರು ಮೈಸೂರು, ಮಂತ್ರಾಲಯದಿಂದ ಬರುವ ಕಾರ್ಯಕರ್ತರಿಗೆ ಸಿಂಧನೂರು ಮತ್ತು ಮಾನ್ವಿಯಲ್ಲಿ ವಸತಿ ವ್ಯವಸ್ಥೆಮಾಡಲಾಗಿದೆ.
ಸಮಾವೇಶದಲ್ಲಿ ಭಾಗವಹಿಸುವವರಿಗಾಗಿ ಸುಮಾರು 2 ಲಕ್ಷ ಆಸನದ ವ್ಯವಸ್ಥೆ ಮಾಡಲಾಗಿದೆ. ಊಟಕ್ಕಾಗಿ 400 ಕೌಂಟರ್ ತೆರೆಯಲಾಗಿದೆ. 600 ಕುಡಿಯು ನೀರಿನ ಟ್ಯಾಪ್ ಆಳವಡಿಸಿದ್ದು, 80 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.












Click it and Unblock the Notifications