ಬಾಬಾ ರಾಮದೇವ್ ಬ್ಯಾಂಕ್ ಖಾತೆ ಜಪ್ತಿ

ಧಾರ್ಮಿಕ ದತ್ತಿ ಸಂಸ್ಥೆ ಎಂದು ನೋಂದಾಯಿಸಲ್ಪಟ್ಟಿರುವ ಟ್ರಸ್ಟ್‌ಗಳು ಕೆಲವು ತಿಂಗಳ ಹಿಂದಿನವರೆಗೂ ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಪಡೆಯುತ್ತಿದ್ದವು. ಬಳಿಕ ಸೌಲಭ್ಯಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಸುಮಾರು 11 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾ. ಬಾದರ್ ದುರೆಜ್ ಅಹ್ಮದ್ ಹಾಗೂ ನ್ಯಾ ಆರ್.ವಿ ಈಶ್ವರ್ ಅವರಿದ್ದ ನ್ಯಾಯಪೀಠ ನಿರ್ದೆಶಿಸಿದೆ. ಬಾಬಾ ರಾಮದೇವ್ ಟ್ರಸ್ಟ್ ಒಟ್ಟಾರೆ 34.68 ಕೋಟಿ ರು ತೆರಿಗೆ ಬಾಕಿ ಉಳಿಸಿಕೊಂಡಿದೆ.75 ಲಕ್ಷ ರು ಕಂತಿನ ಹಣ ಕಟ್ಟಲು ಅಸಮರ್ಥವಾಗಿದೆ.
ಮಂದಿರ್ ಟ್ರಸ್ಟ್ ನಡೆಸುವ ದಿವ್ಯ ಫಾರ್ಮಸಿ ಔಷಧಿಗಳನ್ನು ಉತ್ಪಾದಿಸುತ್ತದೆ ಹಾಗೂ ಅದರ ಮಾರಾಟದಿಂದ ಲಾಭ ಗಳಿಸುತ್ತದೆ, ಹಾಗಾಗಿ ಅದಕ್ಕೆ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಅದೇ ರೀತಿ, ಯೋಗ ಮಂದಿರ ಟ್ರಸ್ಟ್ ತಾನು ನಡೆಸುವ ಯೋಗ ಶಿಬಿರಗಳಿಗೆ ಹಣ ಪಡೆಯುತ್ತದೆ ಹಾಗಾಗಿ ಅದಕ್ಕೂ ತೆರಿಗೆ ಅನ್ವಯಿಸುತ್ತದೆ ಎಂದು ಇಲಾಖೆ ಹೇಳಿದೆ.
ಒಂದು ವಾರದ ಹಿಂದೆ ಮೂವರು ಸದಸ್ಯರ ಆದಾಯ ತೆರಿಗೆ ತಂಡ ಪತಂಜಲಿ ಯೋಗಪೀಠಕ್ಕೆ ಭೇಟಿ ನೀಡಿತ್ತು ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಗಳಲ್ಲಿ ಎರಡೂ ಟ್ರಸ್ಟ್‌ಗಳು ಹೊಂದಿದ್ದ ಖಾತೆಗಳನ್ನು ಸ್ಥಗಿತಗೊಳಿಸಿತ್ತು.
ತಾನು ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕಾಗಿ ಯುಪಿಎ ಸರಕಾರ ತನ್ನ ಬೆನ್ನ ಹಿಂದೆ ಬಿದ್ದಿದೆ ಶನಿವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯೊಂದರಲ್ಲಿ ರಾಮ್‌ದೇವ್ ಹೇಳಿದ್ದಾರೆ.
ಹಲವು ಹಿರಿಯ ಕಾಂಗ್ರೆಸ್ ನಾಯಕರು ಟ್ರಸ್ಟ್‌ಗಳನ್ನು ನಡೆಸುತ್ತಿದ್ದಾರೆ ಹಾಗೂ ಆ ಟ್ರಸ್ಟ್‌ಗಳು ಭಾರೀ ಪ್ರಮಾಣದಲ್ಲಿ ದೇಣಿಗೆಗಳನ್ನು ಪಡೆಯುತ್ತಿವೆ. ದಿವ್ಯ ಯೋಗ ಮಂದಿರ್ ಮತ್ತು ಪತಂಜಲಿ ಯೋಗಪೀಠಗಳು ಮಾತ್ರ ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ಒಳಪಡುತ್ತವೆ ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications