ದೇವೇಂದ್ರಪ್ಪ, ಇಸ್ಮತುಲ್ಲಾ, ರೆಹಮತ್ ಕಾಂಗ್ರೆಸ್ ಸೇರ್ಪಡೆ

ಕ್ವೀನ್ಸ್ ರಸ್ತೆಯಲ್ಲಿರುವ 'ಕಾಂಗ್ರೆಸ್ ಭವನ'ದಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ದೇವೇಂದ್ರಪ್ಪ ಮತ್ತು ಉಳಿದವರಿಗೆ ಪಕ್ಷದ ಧ್ವಜ ನೀಡಿ ಪಕ್ಷದೊಳಗೆ ಅಧಿಕೃತವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ಅಮರೆಗೌಡ ಬಯ್ಯಾಪುರ ಅವರು ಉಪಸ್ಥಿತರಿದ್ದರು.
ಇಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಕರ್ನಾಟಕ ಸಂಸ್ಕೃತಿ ಮತ್ತು ಅಭಿವೃದ್ಧಿಯನ್ನು ಸಂಪೂರ್ಣವಾಗಿ ಹಾಳುಗೆಡವಿದೆ. ಶೆಟ್ಟರ್ ನೀಡಿದ ಬಜೆಟ್ ಬಿಜೆಪಿಯ ಚುನಾವಣೆ ಪ್ರಣಾಳಿಕೆಯಾಗಿದ್ದು, ಅದನ್ನು ಅನುಷ್ಠಾನಗೊಳಿಸಲು ಆಗುವುದಿಲ್ಲ. ಇಂದು ಎಲ್ಲ ವರ್ಗದ ಜನರು ಕಾಂಗ್ರೆಸ್ ಕಡೆಗೆ ಒಲವು ತೋರಿದ್ದು, ಮುಂದಿನ ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸೂರ್ಯನಷ್ಟೆ ಸತ್ಯ ಎಂದು ಪರಮೇಶ್ವರ್ ನುಡಿದರು.
ಕಾಂಗ್ರೆಸ್ ಸೇರಿದ ಇತರರು : ವಕ್ಫ್ ಬೋರ್ಡ್ ಸದಸ್ಯ ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತ ಎಚ್.ಎಸ್. ಇಸ್ಮತುಲ್ಲಾ ಖಾನ್ (ಚಿತ್ರದುರ್ಗ) ಅವರು ಸ್ವಯಂ ನಿವೃತ್ತಿ ಪಡೆದು ಕಾಂಗ್ರೆಸ್ ಪಕ್ಷ ಸೇರಿದರು. ರೆಹಮತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮತ್ತು ಅಮಾನತ್ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕ ರಹಮತ್ ಉಲ್ಲಾ ಖಾನ್ ಅವರು ಕೂಡ ಜಿ ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಮತ್ತು ಎಸ್.ಎಂ. ಆನಂದ್ ಅವರು ಹಾಜರಿದ್ದರು.












Click it and Unblock the Notifications