ಕೊಡಗು ನುಡಿಹಬ್ಬಕ್ಕೆ ಡಾ.ಎಂಎಂ ಕಲಬುರ್ಗಿ ಅಧ್ಯಕ್ಷ

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ನೇತೃತ್ವದಲ್ಲಿ ನಡೆದ ಬಹಿರಂಗ ಸಭೆಯಲ್ಲಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಂಎಂ ಕಲಬುರ್ಗಿ ಅವರ ಹೆಸರು ಅಖೈರುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕೊಡಗಿನಲ್ಲಿ ನಡೆಯುವ ಸಮ್ಮೇಳನಕ್ಕೆ ಕಲಬುರ್ಗಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಯಾವುದೇ ಆಕ್ಷೇಪ ಇಲ್ಲದಿರುವುದರಿಂದ ಸರ್ವಾನುಮತದ ಆಯ್ಕೆಯಾಗುವ ಸಾಧ್ಯತೆಯಿದೆ.
ಇದೇ ಮೊದಲ ಬಾರಿಗೆ ಒಂದು ಸಮ್ಮೇಳನ ಮುಗಿಯುತ್ತಿದ್ದಂತೆ ಮುಂದಿನ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಪುಂಡಲೀಕ ಹಾಲಂಬಿ ಅವರ ತಂಡ ಹುಟ್ಟಿ ಹಾಕಿರುವ ಈ ಹೊಸ ಪದ್ಧತಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ಹೊರ ಬಿದ್ದಿಲ್ಲ.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಡಿ. 9 ರಿಂದ 11 ರವರೆಗೂ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಂಎಂ ಕಲಬುರ್ಗಿ ಅವರು ಅಧ್ಯಕ್ಷರಾಗಬೇಕಿತ್ತು.ಸಿಪಿ. ಕೃಷ್ಣಕುಮಾರ್ ಅವರಿಗೆ ಅಧ್ಯಕ್ಷ ಪೀಠ ಒಲಿದಿತ್ತು.
2003 ರ ಜನವರಿ ತಿಂಗಳಲ್ಲಿ ನಡೆಯುವ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಅಳ್ವಾಸ್ ನುಡಿಸಿರಿ ಅಧ್ಯಕ್ಷರಾಗಿ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ. ಎಂ. ಕಲಬುರ್ಗಿ ಅವರು ಪೀಠ ಅಲಂಕರಿಸಿದ್ದಾರೆ.
ಜನರ ಮನಸ್ಥಿತಿ ಜೀವನವನ್ನು ಸಾಹಿತ್ಯ ಬೆಳಗಿಸಬೇಕು. ಮನಸ್ಸನ್ನು ತಿದ್ದಬೇಕು. ಸಾಹಿತ್ಯ ಸಮ್ಮೇಳನವು ಅದೇ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಪ್ರತಿವರ್ಷ ನಡೆದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಶ್ರೀ ಕೊ. ಚೆನ್ನಬಸಪ್ಪ ತಿಳಿಸಿದರು.












Click it and Unblock the Notifications