ಅಲಿಖಾನ್: ದೇವನಹಳ್ಳಿ ಬಳಿ 250 ಎಕ್ರೆ ಭೂಮಿ ಖರೀದಿ

ರೆಡ್ಡಿಯ ಬಂಟ ಅಲಿ ಖಾನನನ ವಿರುದ್ಧವೇ ಸಿಬಿಐ ಆರೋಪ ಪಟ್ಟಿ ದಾಖಲಿಸಿದ್ದರೂ ಅದು ನೇರವಾಗಿ ರೆಡ್ಡಿಯತ್ತಲೇ ಬೊಟ್ಟು ಮಾಡಿ ತೋರಿಸುತ್ತಿದೆ ಎಂಬುದು ಗಮನಾರ್ಹ.
ಅಲಿಯ ಗುಪ್ತ್ ಗುಪ್ತ್ ಅಕ್ರಮಗಳು: ಕೆ. ಮೆಹಫೂಜ್ ಅಲಿ ಖಾನ್, ಕಂಪ್ಲಿ ಶಾಸಕ ಸುರೇಶಬಾಬು ಸ್ನೇಹಿತ. 2007ರಲ್ಲಿ ಬ್ರಹ್ಮಣಿ ಸ್ಟೀಲ್ಸ್ ಕಂಪನಿಯಲ್ಲಿ ಇಂಜಿನಿಯರ್ ಕೆಲಸಕ್ಕೆ ಸೇರುತ್ತಾನೆ. ಅತಿ ತ್ವರಿತವಾಗಿ (2008ರಲ್ಲಿ) ರೆಡ್ಡಿಯ ಆಪ್ತ ಸಹಾಯಕನಾಗಿ ಭಡ್ತಿ ಪಡೆಯುತ್ತಾನೆ. 2009ರಲ್ಲಿ ದೇವಿ ಎಂಟರ್ ಪ್ರೈಸಸ್ ಹೆಸರಿನ ಕಂಪನಿ ಆರಂಭಿಸಿದ ಅಲಿಖಾನ್ ಕೇವಲ 13 ದಿನಗಳಲ್ಲಿ 103 ಕೋಟಿ ರೂ ಗುಡ್ಡೆ ಹಾಕುತ್ತಾನೆ.
ಈ ಮೊತ್ತ ಹೈದರಾಬಾದಿನ ವೈಶ್ಯಾ ಬ್ಯಾಂಕ್‌ನಲ್ಲಿ ಜಮೆಯಾಗಿದೆ ಎಂಬುದನ್ನು ರೆಡ್ಡಿ ಬಂಧನವಾದ ದಿನದಿಂದಲೂ ರೆಡ್ಡಿಯ ಬೆನ್ನುಹತ್ತಿರುವ ಸಿಬಿಐನ ಖಡಕ್ ಎಸ್‌ಪಿ ಖಾನ್ (ಚಿತ್ರದಲ್ಲಿರುವ ಕನ್ನಡಕಧಾರಿ) ತಡವಾಗಿಯಾದರೂ ಪತ್ತೆ ಹಚ್ಚಿ ಅದನ್ನು ತಾಜಾ ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ.
ಈ ಆರೋಪಪಟ್ಟಿ ಸಲ್ಲಿಸುವುದಕ್ಕೆ ಸಿಬಿಐಗೆ 33 ಸಾಕ್ಷಿಗಳು ನೆರವಾಗಿದ್ದಾರೆ. ಇದರಲ್ಲಿ ಅಲಿಖಾನ್ ಗಣಿ ಮಾಲಿಕರನ್ನು ಬೆದರಿಸಿ ಅದಿರು ಲೂಟಿ, ಹಫ್ತಾ ವಸೂಲಿ, ಗಡಿ ಗುರುತುಗಳ ಧ್ವಂಸ, ಬೇನಾಮಿ ಅಕೌಂಟ್‌ಗಳು, ಅಕ್ರಮ ಹಣ ಸಂಪಾದನೆ, ವಿದೇಶದಲ್ಲಿ ಹಣ ಹೂಡಿಕೆ ಸೇರಿದಂತೆ ಹತ್ತಾರು ಸ್ಫೋಟಕ ಮಾಹಿತಿಗಳನ್ನು ಉಲ್ಲೇಖ ಮಾಡಿದ್ದಾರೆ. ಹಾಗಾಗಿ ಆರೋಪಿ ಅಲಿ ಖಾನ್ ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ದೇವನಹಳ್ಳಿ ನಿಲ್ದಾಣ ಸುತ್ತಮುತ್ತ 250 ಎಕ್ರೆ ಭೂಮಿ: ಸಾಮಾನ್ಯ ಜನ ಇಡೀ ಜೀವಮಾನವೆಲ್ಲ ದುಡಿದೂ 30X40 ಸೈಟ್ ತೆಗೆದುಕೊಳ್ಳಲು ಹೈರಾಣರಾಗುತ್ತಾರೆ. ಅಂತಹುದರಲ್ಲಿ ರೆಡ್ಡಿ ಆಪ್ತ ಅಲಿ ಇದೇ ದೇವನಹಳ್ಳಿ ಏರ್ ಪೂರ್ಟ್ ಬಳಿ ಬರೋಬ್ಬರಿ 250 ಎಕರೆ ಭೂಮಿ ಖರೀದಿಸಿದ್ದಾನೆ. ಈ ಹಿಂದೆ ಅಲಿ ವಿರುದ್ಧ ಐಟಿ ಅಧಿಕಾರಿಗಳು ಕಲೆ ಹಾಕಿರುವ ಮಾಹಿತಿಯೂ ಸಿಬಿಐನ ಈ ಆರೋಪಕ್ಕೆ ಪುಷ್ಠಿ ನೀಡಿದೆ.












Click it and Unblock the Notifications