ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಲ್ಲಿ ಪ್ರಪ್ರಥಮ ವೈಫೈ ಮಾಲ್

By Mahesh
|
Google Oneindia Kannada News

Mangalore
ಮಂಗಳೂರು, ಫೆ.10: ದೇಶದ ಅತಿದೊಡ್ಡ ಟೆಲಿಕಾಂ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್ ಮಂಗಳೂರನ್ನು ಕರ್ನಾಟಕದ ಮೊತ್ತಮೊದಲ ಹಾಟ್ ಸ್ಪಾಟ್ ನಗರವನ್ನಾಗಿಸಿದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯಕಾರಿ ಅಧಿಕಾರಿ ಸೌರಭ್ ಗೋಯೆಲ್ ಹೇಳಿದರು.

ನಗರದ ಕೆ.ಎಸ್.ರಾವ್. ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್‌ನಲ್ಲಿ ಏರ್‌ಟೆಲ್ ವೈಫೈ ವ್ಯವಸ್ಥೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಇತರ ಸ್ಮಾರ್ಟ್ ಸಾಧನಗಳೊಂದಿಗೆ ಸಮಯ ಕಳೆಯುವಂತಹ ಜನಸಂದಣಿ ಇರುವ ತಾಣಗಳಾದ ಕೆಫೆಗಳು, ರೆಸ್ಟೋರೆಂಟ್‌ಗಳು, ಹೊಟೇಲ್‌ಗಳು, ಮತ್ತು ಹಾಸ್ಪಿಟಲ್ ಮತ್ತಿತರ ಸಾರ್ವಜನಿಕ ಪ್ರದೇಶಗಳಲ್ಲಿ ಹೈ-ಸ್ಪೀಡ್ ಇಂಟರ್‌ನೆಟ್ ಸೌಲಭ್ಯವನ್ನು ಏರ್‌ಟೆಲ್ ಒದಗಿಸುತ್ತದೆ.

ಹೆಚ್ಚು ಹೆಚ್ಚು ಗ್ರಾಹಕರನ್ನು ತಲುಪಬೇಕೆಂಬ ಉದ್ದೇಶದಿಂದ ತ್ವರಿತ ಸೇವೆಯನ್ನು ಇಲ್ಲಿ ಅಳವಡಿಸಲಾಗಿದೆ. ಅಕ್ಸೆಸ್ ಪಾಯಿಂಟ್‌ನ ಒಳಾಂಗಣದಲ್ಲಿ 100-150 ಅಡಿಪ್ರದೇಶ ಮತ್ತು ಹೊರಾಂಗಣದಲ್ಲಿ 300 ಅಡಿವರೆಗಿನ ಪ್ರದೇಶದಲ್ಲಿ ಒಟ್ಟು 30 ಮಂದಿ ಬಳಕೆದಾರರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಮಾತ್ರವಲ್ಲದೇ ಇದು ಕೇವಲ ಏರ್‌ಟೆಲ್ ಗ್ರಾಹಕರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಟ್ರಾಯ್‌ನಿಂದಾನುಮೋದಿಸಲ್ಪಟ್ಟ ನಿರ್ದೇಶನ ತತ್ವಗಳು ಮತ್ತು ನಿಬಂಧನೆಗಳ ಚೌಕಟಿನಲ್ಲಿ ರೂಪಿಸಲ್ಪಟ್ಟಿರುವ ಒಂದು ಸುರಕ್ಷಿತ ನೆಟ್‌ವರ್ಕ್ ಇದಾಗಿದೆ.

ಬೆಂಗಳೂರನ್ನು ಹೊರತು ಪಡಿಸಿ ಪ್ರಸ್ತುತ ಮಂಗಳೂರು ಉಡುಪಿ ಮತ್ತು ಮಣಿಪಾಲದಲ್ಲಿ ಸುಮಾರು 100 ಔಟ್‌ಲೆಟ್‌ಗಳನ್ನು ಈಗಾಗಲೇ ವಿಸ್ತರಿಸಿದ್ದೇವೆ. 2013 ಮಾರ್ಚ್ ವೇಳೆಗೆ 300 ಔಟ್‌ಲೆಟ್‌ಗಳನ್ನು ತಲುಪುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು. ಮೋತಿಶಾಮ್ ಪ್ರೈ.ಲಿ.ನ ಅಡಳಿತಾ ನಿರ್ದೇಶಕ ಹರ್ಷದ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಸವೂದ್ ಮತ್ತಿತರರು ಉಪಸ್ಥಿತರಿದ್ದರು.

ಸುಮಾರು 2 mbps ತನಕ ಸ್ಪೀಡ್ ಸಿಗಲಿದೆ. ಮಳಿಗೆಯ ಎಲ್ಲಾ ಕಡೆ ಲಾಗ್ ಇನ್ ಕೂಪನ್ ಗಳು ಲಭ್ಯವಿರುತ್ತದೆ. ಅರ್ಧ ಗಂಟೆಗೆ 20ರು, 1 ಗಂಟೆಗೆ 30 ರನ್ ದರದಂತೆ 48 ಗಂಟೆಗಳ ವ್ಯಾಲಿಡಿಟಿ ಇರುತ್ತದೆ. ಇದೇ ರೀತಿ 50 ರು ನೀಡಿ 7 ದಿನಗಳ್ ವ್ಯಾಲಿಡಿಟಿ ಪಡೆಯಬಹುದು. ಇಲ್ಲಿ ಪಡೆಯುವ ವೈಫೈ ಕೂಪನ್ ಗಳಿಗೆ ನಗರದ ಇತರೆಡೆಗಳಲ್ಲೂ ಮಾನ್ಯತೆ ಇರುತ್ತದೆ. ಮಾರ್ಚ್ 2013ರ ವೇಳೆಗೆ ಸುಮಾರು 300ಕ್ಕೂ ಅಧಿಕ ವೈಫೈ ಹಾಟ್ ಸ್ಪಾಟ್ ಮಳಿಗೆ ಸ್ಥಾಪಿಸಲು ಏರ್ ಟೆಲ್ ಉದ್ದೇಶಿಸಿದೆ.

English summary
Bharati Airtel in tie-up with Mohitsham group setup an Airtel Wi-Fi hotspot zone at City Centre mall and was inaugurated on Saturday February 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X