ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ನಲ್ಲಿ ಬೆಂಗಳೂರಿಗೆ ದೊರಕಿದ್ದೇನು?

|
Google Oneindia Kannada News

Karnataka Budget 2013
ಬೆಂಗಳೂರು, ಫೆ.8: ತಮ್ಮ ಚೊಚ್ಚಲ ಬಜೆಟ್ ನಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದ್ದು, ನಗರದ ಅಭಿವೃದ್ಧಿಗಾಗಿ ನೂತನ ಉಪಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. 2013-14 ನೇ ಬಜೆಟ್ ನಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗಾಗಿ ಘೊಷಿಸಿರುವ ನೂತನ ಯೋಜನೆಗಳು ಕೆಳಗಿನಂತಿವೆ.

* ಕೆಂಪೇಗೌಡ ಬಡಾವಣೆ: ಅಭಿವೃದ್ಧಿಗೆ 2,408 ಕೋಟಿ ರೂ. ಬಡಾವಣೆಯಲ್ಲಿ 1,500 ನಿವೇಶನಗಳ ಅಭಿವೃದ್ಧಿ.
* 2500 ಕೋಟಿ ರೂ. ವೆಚ್ಚದಲ್ಲಿ ಫೆರಿಫರಲ್ ರಸ್ತೆ ನಿರ್ಮಾಣ
* ವಿಮಾನ ನಿಲ್ದಾಣ ಸಂಪರ್ಕಕ್ಕಾಗಿ ಮೇಲ್ಸೇತುವೆ ನಿರ್ಮಾಣ
* 25 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ
* 80 ಕೋಟಿ ರು. ವೆಚ್ಚದಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣ
* ಓಕಳಿಪುರದಲ್ಲಿ ರೇಷ್ಮೆ ಸಂಕೀರ್ಣ ನಿರ್ಮಾಣ
* ಸಿಂಗೇನ ಅಗ್ರಹಾರದಲ್ಲಿ ಆಧುನಿಕ ಕೃಷಿ ಮಾರುಕಟ್ಟೆ
* ಕೊಳಚೆ ನೀರು ಸಂಸ್ಕರಣಾ ಸ್ಥಾವರ ಸ್ಥಾಪನೆ
* ಬೆಂಗಳೂರು ನಗರಕ್ಕೆ ಎತ್ತಿನಹೊಳೆ ಯೋಜೆನೆಯಿಂದ ನೀರು ಸರಬರಾಜು. 200 ಕೋಟಿ ರು. ಮೀಸಲು
* 75 ಮೂಲಭೂತ ಸೌಕರ್ಯಕ್ಕೆ 50 ಕೋಟಿ ರು.
* ಘನತಾಜ್ಯ ನಿರ್ವಜಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ
* ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ವೈಜ್ಞಾನಿಕವಾಗಿ ತಾಜ್ಯ ನಿರ್ವಹಣೆಗಾಗಿ ಅಗತ್ಯ ಕ್ರಮ
* ಸಿದ್ಧಲಿಂಗಯ್ಯ ವೃತ್ತದ ಬಳಿ ಮೇಲ್ಸೆತುವೆ ನಿರ್ಮಾಣ
* ಸಂಚಾರ ದಟ್ಟಣೆ ನಿಯಂತ್ರಿಸಲು ಗ್ರೇಡ್ ಸಪರೇಟರ್, ಇದಕ್ಕಾಗಿ 500 ಕೋಟಿ ರೂ. ಮೀಸಲು
* ಕೆ.ಆರ್.ಪುರಂ ಬಳಿ ಅಂಡರ್ ಬ್ರಿಡ್ಜ್ ಸ್ಥಾಪನೆ (ಕರ್ನಾಟಕ ಬಜೆಟ್ 2013-14 ಮುಖ್ಯಾಂಶಗಳು)

ಬೆಂಗಳೂರಿಗೆ ಮತ್ತಷ್ಟು ಯೋಜನೆಗಳು
* ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ 2 ಕೊಟಿ
* ಬೆಂಗಳೂರು ವಿಶ್ವವಿದ್ಯಾಲಯ ಇಬ್ಭಾಗ ಘೋಷಣೆ
* ಬೆಂಗಳೂರು- ಮೈಸೂರು ಜೋಡಿ ರೈಲು ಮಾರ್ಗ ಪೂರ್ಣ
* ಸರ್ಜಾಪುರ ರಸ್ತೆ ದೊಡ್ದನೆಗುಂದಿ, ಇಬ್ಬಲೂರು, ಸಿಲ್ಕ್ ಬೋರ್ಡ್ ತನಕ ಫ್ಲೈ ಓವರ್
* ಬಿಬಿಎಂಪಿ ಮೂಲ ಸೌಕರ್ಯಕ್ಕೆ 50 ಕೋಟಿ
* ಬಿಬಿಎಂಪಿ ಎಲ್ಲಾ ವಾರ್ಡ್ ಗಳಲ್ಲಿ ಶೌಚಾಲಯ
* ಚಾಲುಕ್ಯ, ಸಿದ್ಧಯ್ಯ ಸರ್ಕಲ್ ಬಳಿ ಮೇಲ್ಸೇತುವೆ
* ಎಂಜಿ ರಸ್ತೆಯಲ್ಲಿ ಬಿ.ಆರ್.ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ 25 ಕೋಟಿ ರೂ.
* ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ನಗರದ ಸಾರ್ವಜನಿಕ ಸ್ಥಳಗಳಲ್ಲಿ ನೂತನವಾಗಿ ಸಿಸಿಟಿವಿ ಅಳವಡಿಕೆ
* ಬೆಂಗಳೂರು ವಕೀಲರ ಭವನ ನಿರ್ಮಾಣಕ್ಕೆ 1 ಕೋಟಿ.
* ನಗರದಲ್ಲಿ ಸಣ್ಣ ಉದ್ಯಮಗಳ ನೀಡುವ ಪರವಾನಿಗೆಯ ಅವಧಿ 5 ವರ್ಷಗಳಿಗೆ ವಿಸ್ತರಣೆ
* ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂಗಾರ್ಡ್ ಗಳ ದಿನವಹಿ ಭತ್ಯೆ 300 ರೂ.ಗಳಿಗೆ ಹೆಚ್ಚಳ
* ನಗರದಲ್ಲಿನ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಮೂಲ ವೇತನದಲ್ಲಿ ಶೇ 30 ರಷ್ಟು ಏರಿಕೆ
* ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳ ಬಡ ಕುಟುಂಬಗಳಿಗೆ ರಾಜೀವ್ ಗಾಂಧಿ ಆವಾಜ್ ಯೋಜನೆಯಡಿ 300 ಕೋಟಿಗಳ ವೆಚ್ಚದಲ್ಲಿ ವಸತಿ ಸೌಕರ್ಯ
* ಘನತ್ಯಾಜ್ಯ ಸಂಸ್ಕರಣಾ ಘಟಕಗಳು ಹಾಗೂ ಅಕ್ಕಪಕ್ಕದ ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು 200 ಕೋಟಿ ರೂ
* ನಗರ ವ್ಯಾಪ್ತಿಯಲ್ಲಿನ 100 ಕಿ.ಮೀ. ರಸ್ತೆಗಳ ಅಭಿವೃದ್ದಿಗಾಗಿ 300 ಕೋಟಿ ರೂ.
* ಯಶವಂತಪುರ, ದಾಸನಾಯಕನಪಾಳ್ಯ, ಕೈಗಾರಿಕಾ ಉಪನಗರದ 2ನೇ ಹಂತದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ
* ಹೆಬ್ಬಾಳ, ಇಬ್ಬಗಲೂರು, ಕೆ.ಆರ್.ಪುರಂ, ದೊಡ್ಡನಕುಂದಿ, ಕೇಂದ್ರ ರೇಷ್ಮೆ ಮಂಡಳಿ ಹತ್ತಿರ ಫ್ಲೈ ಓವರ್ ಗಳ ನಿರ್ಮಾಣ
* ನಗರ ಸಮೀಪದ ಮೂರು ಪ್ರದೇಶಗಳಲ್ಲಿ ಏಷಿಯನ್ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆದು 2,100 ಕೋಟಿ ರೂ.ವೆಚ್ಚದಲ್ಲಿ ಸಿಟಿ ಕ್ಲಸ್ಟರ್ ಅಭಿವೃದ್ಧಿ ಯೋಜನೆ
* ಇದುವರೆಗೂ ಮೆಟ್ರೋ ಯೋಜನೆಗಾಗಿ ರಾಜ್ಯ ಸರ್ಕಾರದಿಂದ 4,153 ರೂ. ಬಿಡುಗಡೆ. ಶೇ.66 ರಷ್ಟು ಭೌತಿಕ ಪ್ರಗತಿ ಸಾಧನೆ. ಅಂದಾಜು 8,969 ಕೋಟಿ ರೂ.ಗಳ ರಾಜ್ಯದ ಪಾಲಿರುವ 72.09 ಕಿ.ಮೀಗಳ ಎರಡನೇ ಹಂತದ ಯೋಜನೆಗೆ ಸರ್ಕಾರದಿಂದ ಅನುಮೋದನೆ
* 3 ವರ್ಷಗಳಲ್ಲಿ 475 ಕೋಟಿ.ರೂ ವೆಚ್ಚದಲ್ಲಿ 130 ಚ.ಕಿ.ಮೀಗಳ ನೀರಿನ ವಿತರಣಾ ವ್ಯವಸ್ಥೆಯ ಸುಧಾರಣೆ ಮತ್ತು ಸೋರಿಕೆ ನಿಯಂತ್ರಣಕ್ಕೆ ಕ್ರಮ
* ಮುಂದಿನ ಮೂರು ವರ್ಷಗಳಲ್ಲಿ ಜೆಐಸಿಎ ಹಣಕಾಸು ನೆರವಿನಿಂದ 11 ಹೆಚ್ಚುವರಿ ಕೊಳಚೆ ನೀರು ಸಂಸ್ಕರಣಾ ಸ್ಥಾವರಗಳ ಸ್ಥಾಪನೆ
* ನಗರದ ಕೊಳಗೇರಿಯಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ವ್ಯವಸ್ಥೆಗಾಗಿ 55 ಕೋಟಿ ರೂ.
* ತಾಜ್ಯ ನೀರಿನ ಮೂರನೇ ಹಂತದ ಸಂಸ್ಕರಣೆಗಾಗಿ ಸಿಂಗಾಪುರ್ ಕೋ-ಆಪರೇಷನ್ ಎಂಟರ್ ಪ್ರೈಸಸ್ ನೊಂದಿಗೆ ಒಪ್ಪಂದ.

English summary
In the Karnataka Budget 2013 CM Jagadish Shettar Announce new projects to Development of bengalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X