ತಮಿಳನಾಡಿಗೆ ನೀರು: ಶೆಟ್ಟರ್ ದೆಹಲಿಗೆ ದೌಡು
ಬೆಂಗಳೂರು,
ಫೆ.7: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಸುಪ್ರೀಂಕೋರ್ಟಿನಲ್ಲಿ ನಿರೀಕ್ಷೆಯಂತೆ ಕರ್ನಾಟಕ ಸೋಲುಂಡಿದ್ದು, ಡ್ಯಾಮೇಜ್ ಕಂಟ್ರೋಲ್ ಗಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಜತೆಗೂಡಿ ತಕ್ಷಣವೇ ವಿಶೇಷ ವಿಮಾನದಲ್ಲಿ ದೆಹಲಿಗೆ ದೌಡಾಯಿಸಲು ನಿರ್ಧರಿಸಿದ್ದಾರೆ. id="toptextpromo">ಈ
ಸಂಬಂಧ ಇಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವ ಶೆಟ್ಟರ್, ಇಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಕರ್ನಾಟಕಕ್ಕೆ ತೀವ್ರ ಹಿನ್ನಡೆಯುಂಟಾಗಿದೆ. ಆದರೆ ಕೋರ್ಟ್ ಸೂಚನೆಯಂತೆ ತ. ನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ. ನೀರೇ ಇಲ್ಲ ಅಂದಮೇಲೆ ಎಲ್ಲಿಂದ ನೀರು ಬಿಡುವುದು. ಕುಡಿಯೋದಿಕ್ಕೂ ನೀರಿಲ್ಲ ಎಂದು ವಕೀಲರ ಮೂಲಕ ಸು. ಕೋರ್ಟಿಗೆ ಈಗಾಗಲೇ ಸ್ಪಷ್ಟವಾಗಿ ಹೇಳಲಾಗಿದೆ. ಆದರೂ ತೀರ್ಪು ವ್ಯತಿರಿಕ್ತತವಾಗಿ ಬಂದಿದೆ. id='are-slot-1' class='oiad oi-axt oiadv'> id='top-searched-articles'>ಈ
ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಿಂದ ಅಮೂಲ್ಯ ಸಲಹೆಯನ್ನು ಪಡೆದುಕೊಂಡು ನಾಳೆ ಶುಕ್ರವಾರ ನಾನೇ ಬಜೆಟ್ ಮಂಡಿಸಬೇಕಾಗಿದ್ದರೂ, ಇಂದು ಮಧ್ಯಾಹ್ನವೇ ದೆಹಲಿಗೆ ತೆರಳುತ್ತೇನೆ. ಅಲ್ಲಿ ನಮ್ಮ ವಕೀಲರಿಗೆ ಮತ್ತೊಮ್ಮೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇವೆ. ತಕ್ಷಣ ಕೋರ್ಟಿನಲ್ಲಿ ನಾವು ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ನಮ್ಮ ವಕೀಲರ ಜತೆ ಚರ್ಚಿಸುತ್ತೇವೆ' ಎಂದು ಶೆಟ್ಟರ್ ಸದನದಲ್ಲಿ ಹೇಳಿಕೆ ನೀಡಿದರು.











Click it and Unblock the Notifications