ಅತ್ಯಾಚಾರ: ಕೊನೆಗೂ ಸತ್ಯ ಒಪ್ಪಿಕೊಂಡ ಶೀಲಾ

ಆದರೆ ಮೊನ್ನೆ ರಾಜಧಾನಿಯಲ್ಲಿ ಯುವತಿಯ ಬಾಯಿಗೆ ಕಬ್ಬಿಣದ ರಾಡ್ ನುಗ್ಗಿಸಿ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ನಡೆದ ಮೇಲೆ ಶೀಲಾ ಮೇಡಂ ನಿಜಕ್ಕೂ ಧರಾಶಾಯಿಯಾಗಿದ್ದಾರೆ. ನಮ್ಮ ದಿಲ್ಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ತಮಗೆ ವೇದ್ಯವಾಗುತ್ತಿದೆ ಎಂದು ಶೀಲಾ ದೀಕ್ಷಿತ್ ತಲೆಯ ಮೇಲೆ ಕೈಹೊತ್ತುಕೊಂಡು ಹೇಳಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶೀಲಾ ದೀಕ್ಷಿತ್, 19 ವರ್ಷ ವಯಸ್ಸಿನ ಯುವತಿಯ ಮೇಲೆ ಮಂಗಳವಾರ ನಡೆದ ಅತ್ಯಾಚಾರ ಯತ್ನದ ಘಟನೆಯನ್ನು ಪ್ರಸ್ತಾಪಿಸುತ್ತಾ ದಿಲ್ಲಿ ತಮಗೆ ಸುರಕ್ಷಿತವಲ್ಲವೆಂಬ ಭಾವನೆ ಮಹಿಳೆಯರಲ್ಲಿ ಉಂಟಾಗಿದೆ. ಅವರಲ್ಲಿ ಭಯ ಅಧಿಕವಾಗುತ್ತಿದೆ. ಲಜಪತ್ ನಗರದಲ್ಲಿ ನಿನ್ನೆ ನಡೆದ ಅತ್ಯಾಚಾರ ಯತ್ನದ ಘಟನೆಯನ್ನು ಕೇಳಿ ನನಗೆ ದಿಗ್ಭ್ರಮೆಯಾಗಿದೆ. ನಮಗೆ ಇದೊಂದು ದೊಡ್ಡ ಹಿನ್ನಡೆ' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಆದರೆ ಇದರಿಂದ ಧೃತಿಗೆಡುವುದಿಲ್ಲ. ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಶೀಲಾ ದೀಕ್ಷಿತ್ ಭರವಸೆ ನೀಡಿದರು.
ಇದೇ ವೇಳೆ, ದಿಲ್ಲಿಯಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರು ಶೀಲಾ ದೀಕ್ಷಿತ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲವೆಂಬುದು ಈಗ ಸ್ಪಷ್ಟವಾಗಿದೆ. ದೆಹಲಿ ಮುಖ್ಯಮಂತ್ರಿ ಸತ್ಯವನ್ನೇ ಹೇಳಿದ್ದಾರೆ. ಅದರೆ ಇಷ್ಟೇ ಸಾಲದು. ಇದರಲ್ಲಿ ಅವರ ಹೊಣೆಗಾರಿಕೆ ಏನು ಎಂಬುದು ತಿಳಿಯಬೇಕಾಗಿದೆ' ಎಂದು ಕಿವಿಮಾತು ಹೇಳಿದ್ದಾರೆ.












Click it and Unblock the Notifications