ಮೈಸೂರು-ಬೆಂಗಳೂರು ಕೆಜೆಪಿ ಪಾದಯಾತ್ರೆ ಆರಂಭ

ಬೆಳಗ್ಗೆ ಬೆಟ್ಟದ ಮೇಲೆ ಚಾಮುಂಡೇಶ್ವರಿ ಮಾತೆಗೆ ಪೂಜೆ ನರವೇರಿಸಿ, ಯಡಿಯೂರಪ್ಪ ಅವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಕಾವೇರಿ ಅಧಿಸೂಚನೆಯನ್ನು ವಿರೋಧಿಸಿ ಮಾತನಾಡಿದ ಯಡಿಯೂರಪ್ಪ ಅವರು 'ಕಾವೇರಿ ನೀರು ಹಂಚಿಕೆಯ ಸಮಸ್ಯೆ ಸಂಬಂಧ ಪ್ರಧಾನಿ ಡಾ ಮನಮೋಹನ್ ಸಿಂಗ್ ಮಧ್ಯೆ ಪ್ರವೇಶಿಸಿ, ಪರಿಹಾರ ಸೂಚಿಸಬೇಕು. ಅಧಿಸೂಚನೆ ಪ್ರಕಟಣೆಯನ್ನು ತಡೆಯಬೇಕು' ಎಂದು ಆಗ್ರಹಿಸಿದ್ದಾರೆ.
ಪಾದಯಾತ್ರೆಯ ಹಿಂದೆ ರಾಜಕೀಯ ಉದ್ದೇಶವಿಲ್ಲ ಎಂದು ಪುನರುಚ್ಚರಿಸಿದ ಯಡಿಯೂರಪ್ಪ, ಯಾವ ಕಾರಣಕ್ಕೂ ಕಾವೇರಿ ಐ ತೀರ್ಪಿನ ಅಧಿಸೂಚನೆಯನ್ನು ಹೊರಡಿಸಬಾರದು. ಈ ಅಧಿಸೂಚನೆ ಹೊರಡಿಸಿದರೆ ರಾಜ್ಯದ ಜನತೆ ಸಂಕಟಕ್ಕೆ ಸಿಲುಕುತ್ತಾರೆ ಎಂದರು.
ಇದಕ್ಕೂ ಮುನ್ನ ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಕೆಜೆಪಿಗೆ ಚಿತ್ರ ನಟಿ ಶೃತಿ ಇಂದು ಸೇರ್ಪಡೆಯಾದರು. ನಟಿ ಶೃತಿ ಅವರು ಕೆಜೆಪಿ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಎಂಡಿ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.












Click it and Unblock the Notifications