ಗ್ಯಾಂಗ್ ರೇಪ್: ಬೆಂಗಳೂರು ಯುವತಿಗೆ ಪ್ರಜ್ಞೆ ಬಂದಿಲ್ಲ

ತಾವರೆಕೆರೆ ವ್ಯಾಪ್ತಿಯ ಬ್ಯಾಡರಹಳ್ಳಿ ಬಳಿಯ ಸಿಂಡಿಕೇಟ್ ಬ್ಯಾಂಕ್ ಕಾಲೊನಿಯಲ್ಲಿ ಬಯಲು ಪ್ರದೇಶವೊಂದರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಯುವತಿ ಪತ್ತೆಯಾಗಿದ್ದು, ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯನ್ನು ಹತ್ಯೆ ಮಾಡಲೂ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ರಾತ್ರಿ 23 ವರ್ಷದ ಯುವತಿಯ ಮೇಲೆ ತೀವ್ರತರದ ಹಲ್ಲೆ ನಡೆದಿದ್ದು, ಆಕೆಗೆ ಇನ್ನೂ ಪ್ರಜ್ಞೆ ಮರಳಿಲ್ಲ. ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಿ ಬಿದ್ದಿರುವುದರಿಂದ ಯುವತಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ.
ಯುವತಿಯ ಪರಿಚಯಸ್ಥರೂ ಪತ್ತೆಯಾಗಿಲ್ಲ. ದುಷ್ಕರ್ಮಿಗಳ ಸುಳಿವೂ ಸಿಕ್ಕಿಲ್ಲ ಎಂದು ಡಿವೈಎಸ್ಪಿ ರಾಮಲಿಂಗಪ್ಪ ತಿಳಿಸಿದ್ದಾರೆ.
ಯುವತಿಯನ್ನು 5 ಮಂದಿ ದುಷ್ಕರ್ಮಿಗಳು ಮೈದಾನಕ್ಕೆ ಅಪಹರಿಸಿ ತಂದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಸಾಧ್ಯತೆ ಇದೆ. ಇದಕ್ಕೆ ಸ್ಥಳದಲ್ಲಿ ಸಿಕ್ಕಿರುವ ಕಾಂಡೋಮ್ ಗಳು, ಚಪ್ಪಲಿಗಳು ಮತ್ತು ಮದ್ಯದ ಬಾಟಲಿಗಳೇ ಸಾಕ್ಷ್ಯ ಹೇಳುತ್ತಿವೆ ಎಂದು ತಾವರೆಕೆರೆ ಇನ್ಸ್ ಪೆಕ್ಟರ್ ವಿರೂಪಾಕ್ಷ ಸ್ವಾಮಿ ಹೇಳಿದ್ದಾರೆ.












Click it and Unblock the Notifications