ಶಿವೈಕ್ಯ ಮಹಾಂತಶ್ರೀಗಳಿಗೆ ಗಣ್ಯರ ಕಂಬನಿ

ಭಕ್ತಾದಿಗಳ ದರ್ಶನಕ್ಕಾಗಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ದೇಹವನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿಡಲಾಗಿದೆ. ಸಂಜೆ ವೇಳೆಗೆ ದಾವಣಗೆರೆಗೆ ಕೊಂಡೊಯ್ದು ನಾಳೆ ಹರಿಹರ ಮಠದಲ್ಲಿ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ದರ್ಶನ ಪಡೆದರು. ಬೆಳಗ್ಗೆ ಸ್ವಾಮೀಜಿಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಶೆಟ್ಟರ್, ಸಚಿವ ಸೋಮಣ್ಣ, ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಗೆ ತೆರಳಿ, ಶ್ರೀಗಳ ದರ್ಶನ ಪಡೆದು, ಕಂಬನಿ ಮಿಡಿದರು.
ಕಳೆದ ಶನಿವಾರ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ನಂತರ ವೈದ್ಯರು ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದಿದ್ದರು. ಆದರೆ ಸ್ವಾಮೀಜಿಗೆ ಸೋಮವಾರ ಬೆಳಗಿನ ಜಾವ 4.30ರ ಗಂಟೆಗೆ ಸುಮಾರಿಗೆ ಮತ್ತೆ ತೀವ್ರ ಎದೆ ನೋವು ಕಾಣಿಸಿಕೊಂಡು, ಹೃದಯಾಘಾತಕ್ಕೀಡಾದರು.












Click it and Unblock the Notifications