ಪತ್ರಕರ್ತ ನವೀನ್ ಪ್ರಕರಣ ವಾಪಸ್; ಬಿಡುಗಡೆ ಸನ್ನಿಹಿತ

Mangalore Homestay attack TV Journo Naveen Soorinje to be released State Cabinet
ಬೆಂಗಳೂರು, ಜ.31: ಪಡೀಲ್‌ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ ಸಂಬಂಧ ಬಂಧನಕ್ಕೊಳಗಾಗಿದ್ದ ಕಸ್ತೂರಿ ನ್ಯೂಸ್ ಚಾನೆಲಿನ ವರದಿಗಾರ ನವೀನ್ ಸೂರಿಂಜೆ ಅವರನ್ನು ಬಂಧ ಮುಕ್ತಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

ಇಂದು ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ತೆಗೆದುಕೊಳ್ಳಲಾಗಿದ್ದು, ವರದಿಗಾರ ನವೀನ್ ಸೂರಿಂಜೆ ವಿರುದ್ಧದ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದೆ.

ಇದರಿಂದ ಸಂಬಂಧಪಟ್ಟ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರದಿಗಾರ ನವೀನ್ ಸೂರಿಂಜೆ ಇದೇ ವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ವರದಿಗಾರ ನವೀನ್ ಸೂರಿಂಜೆ ನವೆಂಬರ್ 7ರಿಂದ ಮಂಗಳೂರು ಜೈಲಿನಲ್ಲಿದ್ದಾರೆ. 2012 ಜುಲೈ 28ರಂದು ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಅದನ್ನೆಲ್ಲ ಸ್ವತಃ ಚಿತ್ರೀಕರಿಸಿದ್ದರ ವಿರುದ್ಧ ಜಿಲ್ಲಾ ಪೊಲೀಸರು ಗರಂ ಆಗಿದ್ದರು. ಹಾಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+