ಕುಂಭಮೇಳಕ್ಕೆ ಸೋನಿಯಾ ಜೊತೆ ರಾಹುಲ್
55 ದಿನಗಳ ಮಹಾ ಕುಂಭಮೇಳಕ್ಕೆ ಗಣ್ಯಾತಿಗಣ್ಯರ ದಂಡು ಹರಿದು ಬರುತ್ತಲೇ ಇದೆ. ಲಕ್ಷಾಂತರ ಮಂದಿ ಭಕ್ತಾದಿಗಳ ಜೊತೆ ಆಯುಧಧಾರಿ ನಾಗಾ ಸಾಧುಗಳ ಬಗ್ಗೆ ಕುತೂಹಲ ಮುಂದುವರಿದಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪೂನಂ ಪಾಂಡೆ ನಂತರ ಅನೇಕ ರಾಜಕೀಯ ಮುಖಂಡರು ಪ್ರಯಾಗದ ಕಡೆ ಬಂದು ಪೂಜೆ ಸಲ್ಲಿಸಿ ಹೋಗಿದ್ದಿದೆ. ಸದ್ಯದ ಸುದ್ದಿಯಂತೆ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕುಂಭಮೇಳಕ್ಕೆ ಬರುತ್ತಾರಂತೆ.
ಈ ಬಗ್ಗೆ ಕಾಂಗ್ರೆಸ್ ಕಚೇರಿಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು ಮಾಹಿತಿ ಹೊರ ಹಾಕಿದ್ದಾರೆ. ಸೋನಿಯಾಜೀ ಹಾಗೂ ರಾಹುಲ್ ಜೀ ಅವರು ಫೆಬ್ರವರಿ ತಿಂಗಳಿನಲ್ಲಿ ಅಲಹಾಬಾದಿನಲ್ಲಿ ನಡೆದಿರುವ ಮಹಾ ಕುಂಭ ಮೇಳಕ್ಕೆ ಬರುವ ಸಾಧ್ಯತೆಯಿದೆ.
ಇನ್ನಷ್ಟು ಚಿತ್ರಗಳು ತಪ್ಪದೇ ನೋಡಿ
ಫೆ.5 ರಿಂದ 9ನೇ ತಾರೀಖಿನೊಳಗೆ ಇಬ್ಬರು ಮುಖಂಡರು ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಭಯ್ ಅವಸ್ತಿ ಹೇಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರು ಕುಂಭಮೇಳಕ್ಕೆ ಆಗಮಿಸಿ ಈ ಇಬ್ಬರು ಗಣ್ಯರು ಬರಲು ಸಕಲ ಸಿದ್ಧತೆ ಪೂರ್ಣಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಯಮುನಾ ನದಿ ತೀರದಲ್ಲಿರುವ ಮನ್ ಕಾಮೇಶ್ವರಿ ದೇಗುಲದಲ್ಲಿ ಶಂಕರಾಚಾರ್ಯರ ದ್ವಾರಕ ಪೀಠಾಧಿಪತಿ ಸ್ವಾಮಿ ಸ್ವರೂಪನಂದ್ ಸರಸ್ವತಿ ಅವರನ್ನು ದ್ವಿವೇದಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ನಂತರ ಜೂನಾ ಅಖಾರಕ್ಕೆ ತೆರಳಿ ಸ್ವಾಮಿ ಅವಧೇಶನಂದ್ ಗಿರಿ ಅವರ ಪಾದಕ್ಕೆರಗಿದರು ಎರಡೂ ಕಡೆ ಸೋನಿಯಾಜೀ ಮತ್ತು ರಾಹುಲ್ ಜೀ ಅವರಿಗೆ ಯಶ ದಕ್ಕಲು ಹರಸುವಂತೆ ದ್ವಿವೇದಿ ಕೇಳಿಕೊಂಡಿದ್ದಾರೆ.

ಗಂಗಾ ತೀರದಿ ಕಂಡ ದೃಶ್ಯಾವಳಿಗಳು
A sadhu dressing the hair of another sadhu during Maha Kumbh Mela in Allahabad

ಗಂಗಾ ತೀರದಿ ಕಂಡ ದೃಶ್ಯಾವಳಿಗಳು
Artists perform at a cultural event during Maha Kumbh Mela in Allahabad

ಗಂಗಾ ತೀರದಿ ಕಂಡ ದೃಶ್ಯಾವಳಿಗಳು
Followers seek blessings of Shankaracharya Swami Swarupanandji Maharaj at Mankameshwer temple during Maha Kumbh in Allahabad

ಗಂಗಾ ತೀರದಿ ಕಂಡ ದೃಶ್ಯಾವಳಿಗಳು
Niranjani Akhara Naga Sadhus take out a religious procession 'Peshwai' at Sangam during Maha Kumbh Mela in Allahabad

ಗಂಗಾ ತೀರದಿ ಕಂಡ ದೃಶ್ಯಾವಳಿಗಳು
Juna Akhara sadhus perform 'Pind-daan' rituals during Maha Kumbh Mela in Allahabad on Wednesday

ಗಂಗಾ ತೀರದಿ ಕಂಡ ದೃಶ್ಯಾವಳಿ
A sadhu distributes money among other sadhus as part of charity during the Maha Kumbh festival in Allahabad

ಗಂಗಾ ತೀರದಿ ಕಂಡ ದೃಶ್ಯಾವಳಿ
Hindu devotees gather at Sangam, the confluence of the Ganges, Yamuna and mythical Saraswati river on the occasion of Paush Poornima at the ongoing Maha Kumbh Mela in Allahabad

ಗಂಗಾ ತೀರದಿ ಕಂಡ ದೃಶ್ಯಾವಳಿ
Foreign devotees and sadhus perform "Ganga Aarti" during an awareness program to clean Ganga at Maha Kumbh in Allahabad












Click it and Unblock the Notifications