ನಾಗಾ ಸಾಧುಗಳು ಆಯುಧ ಇಟ್ಕೊಳ್ಳೋದು ಏಕೆ?

ನಗ್ನ ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣಗಳಾಗಿದೆ. ಅಖಾರ ಸಂಸ್ಕೃತಿಯ ಸಾಧುಗಳಿಗೆ ತ್ರಿಶೂಲ ಸೇರಿದಂತೆ ಶಸ್ತ್ರಗಳು ದೈನಂದಿನ ಪೂಜಾ ವಿಧಾನದ ಅವಿಭಾಜ್ಯ ಅಂಗವಾಗಿರುತ್ತದೆ. ಪವಿತ್ರ ಗಂಗೆಯಲ್ಲಿ ದೇಹವನ್ನು ಮುಳುಗಿಸುವುದರ ಜೊತೆಗೆ ತ್ರಿಶೂಲ ಸೇರಿದಂತೆ ಅಸ್ತ್ರ, ಶಸ್ತ್ರಾದಿಗಳನ್ನು ಕೂಡಾ ಶುದ್ಧಗೊಳಿಸಿಕೊಳ್ಳುವುದು ಸಾಧುಗಳ ನಿತ್ಯ ಕಾರ್ಯವಾಗಿದೆ.
ಸನಾತನ ಹಿಂದೂ ಧರ್ಮದ ಪ್ರತಿಪಾದನೆ ಹಾಗೂ ಶಿವನ ಪ್ರತಿರೂಪದಂತೆ ಕಂಡು ಬರುವ ಈ ಸಾಧುಗಳ ಕೈಗೆ ಆಯುಧಗಳು ಬರಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಮೊಘಲ ಸಾಮ್ರಾಜ್ಯದ ಕಾಲದಲ್ಲಿ ಸಿಗುತ್ತದೆ. ಹಿಂದೂ ಧರ್ಮವನ್ನು ಕಾಪಾಡಲು ಕೈಗೆ ಆಯುಧ ಹಿಡಿಯುವ ಅನಿವಾರ್ಯತೆ ಸಾಧುಗಳಿಗೂ ಬಂದಿತ್ತು ಎಂದು ಇತಿಹಾಸ ಸಾರುತ್ತದೆ.
ಆದರೆ, ಕಾಲ ಬದಲಾದಂತೆ ಆಧುನಿಕ ಯುಗದಲ್ಲಿ ನಾಗಾ ಸಾಧುಗಳ ಬಗ್ಗೆ ಕುತೂಹಲ ಹೆಚ್ಚಿದಂತೆ ಅವರ ಶಸ್ತ್ರಗಳ ಮೇಲೆ ಜನರಿಗೆ ಭಯ ಕೂಡಾ ಹೆಚ್ಚಾಯಿತು. 1954ರಲ್ಲಿ ಕಾಲ್ತುಳಿತ ಉಂಟಾದಾಗ ನಾಗಾ ಸಾಧುಗಳು ಶಸ್ತ್ರಗಳನ್ನು ಹಿಡಿದು ಹೂಂಕರಿಸಿದ್ದು ನಡೆದು ಹೋಯಿತು.
ಕುದುರೆ, ಆನೆ ಹತ್ತಿ ಸವಾರಿ ಮಾಡುವ ನಗ್ನ ಸಾಧುಗಳನ್ನು ಪೋಷಿಸುವ ದೊಡ್ಡ ಪಡೆಯೇ ಇದೆ. ಹಾಗೆ ನಂಗಾ ಸಾಧುಗಳನ್ನು ಕಂಡರೆ ಬೆಚ್ಚುವ ಜನತೆಯೂ ಇದೆ. ಭಯ ಹಾಗೂ ಭಕ್ತಿಯ ಸಂಗಮವಾಗಿ ಪ್ರಯಾಗ ಎಲ್ಲರನ್ನು ಪೋಷಿಸುತ್ತಿದೆ.
ಪಂಜಾಬಿನಲ್ಲಿ ತಯಾರಿದ ಸುಮಾರು 33 ಕ್ವಿಂಟಾಲ್ ತೂಕವಿರುವ 108 ಅಡಿ ಎತ್ತರದ ತ್ರಿಶೂಲವನ್ನು ಲೋಕಾರ್ಪಣೆ ಮಾಡಲಾಗಿದೆ.

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ

ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ
ನಾಗಾ ಸಾಧುಗಳಿಗೆ ಶಸ್ತ್ರಗಳೇ ಆಭರಣ












Click it and Unblock the Notifications